ಹೊನ್ನಾವರ(ಆ.30): ತಾಲೂಕಿನ ಇಡಗುಂಜಿ ಬಳಿಯ ಕುಳಿಮನೆ ನಿವಾಸಿ ವೆಂಕಟೇಶ ನಾಯ್ಕ (38) ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದು, ಹೆಂಡತಿ ಶೈಲಾ (33) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಘಟನೆಯಿಂದ ಇಬ್ಬರ ಮಕ್ಕಳಿದ್ದು ಅನಾಥರಾಗಿದ್ದಾರೆ.

ವೆಂಕಟೇಶ ನಾಯ್ಕ ದುಡಿದ ಹಣವನ್ನು ಮನೆಗೆ ಕೊಡದೆ ಹೆಂಡತಿ ಶೈಲಾಳ ಮೇಲೆ ಸಂಶಯ ಪಡುತ್ತಿದ್ದನು. ಪ್ರತಿದಿನ ವಿನಾಕಾರಣ ಜಗಳ ಮಾಡಿ ಹೊಡಿ-ಬಡಿ ಮಾಡುತ್ತಿದ್ದನು. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಹೆಂಡತಿಯೊಂದಿಗೆ ಜಗಳ ಮಾಡಿ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ನಂತರ ತನ್ನ ಇಬ್ಬರು ಮಕ್ಕಳು ಹಾಗೂ ಸಂಬಂಧಿಕರ ಇಬ್ಬರು ಮಕ್ಕಳನ್ನು ಕೊಣೆಯಲ್ಲಿ ಕೂಡಿ ಹಾಕಿದ್ದಾನೆ. ಅನಂತರ ಮನೆಯ ಮುಖ್ಯ ಬಾಗಿಲನ್ನು ಒಳಗಿನಿಂದ ಬಂದ್‌ ಮಾಡಿಕೊಂಡು ಅಡುಗೆ ಕೋಣೆಯ ಚಾವಣಿಯ ಜಂತಿಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜೇವರ್ಗಿ: ಕುಡಿದ ನಶೆಯಲ್ಲಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ

ಘಟನೆಯ ಕುರಿತು ಕುಳಿಮನೆಯ ಗಣೇಶ ನಾಯ್ಕ ಎಂಬವರು ಮಂಕಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಪಿಎಸ್‌ಐ ಪರಮಾನಂದ ಕೊಣ್ಣೂರು ತನಿಖೆ ಕೈಗೊಂಡಿದ್ದಾರೆ.