ಕೊಲ್ಹಾರ(ಜ.22): ರಾಜ್ಯದಲ್ಲಿ ಗೋವು ಹತ್ಯೆ ಕಾನೂನು ಜಾರಿಯಲ್ಲಿದ್ದರೂ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಕಸಾಯಿಖಾನೆಯಲ್ಲಿ ಗುರುವಾರ ಬೆಳಗ್ಗೆ ಗೋವು ಕತ್ತರಿಸಿ ಮಾಂಸ ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೊಲ್ಹಾರದ ಸಂತೆಯಲ್ಲಿ ಬುಧವಾರ ರೈತರೊಬ್ಬರಿಂದ ಕೂಡಗಿ ಗ್ರಾಮದ ಸಿಕಂದರಸಾಬ ರಾಜೇಸಾಬ ಬೇಬಾರಿ ಬಂಧಿತ ಆರೋಪಿ. 

ಗೋಹಂತಕರ ಪರ ನಿಂತ ಕಾಂಗ್ರೆಸ್‌ಗೆ ಗೋಮಾತೆಯ ಶಾಪ: ಕಟೀಲ್‌

ಈ ವ್ಯಕ್ತಿ ಎರಡು ಗೋವುಗಳನ್ನು ಖರೀದಿಸಿ ಒಂದನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಮತ್ತು ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಈ ಸಂಬಂಧ ವಿಎಚ್‌ಪಿಯ ತಮ್ಮಣ್ಣ ಬಡಿಗೇರ ಅವರು ದೂರು ನೀಡಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಕೂಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.