ಬೆಂಗಳೂರು(ಅ.11): ವಾಟ್ಸಾಪ್‌ ಗ್ರೂಪಿನಲ್ಲಿ ಪ್ರಾಧ್ಯಾಪಕರೊಬ್ಬರ ಫೋಟೋಗಳನ್ನು ತೆಗೆದುಕೊಂಡು, ಅದನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿಯನ್ನು ವೈಟ್‌ಫೀಲ್ಡ್‌ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಜಾಲದ ವಿಶ್ವನಾಥ್‌ (40) ಬಂಧಿತ. ಆರೋಪಿಯಿಂದ 2 ಮೊಬೈಲ್‌ ಜಪ್ತಿ ಮಾಡಲಾಗಿದ್ದು, 25ಕ್ಕೂ ಹೆಚ್ಚು ಅಶ್ಲೀಲ ಫೋಟೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಯ್‌ಫ್ರೆಂಡ್‌ ಜತೆಗಿದ್ದ 40 ಯುವತಿಯರ ಮೇಲೆ ರೇಪ್ ಮಾಡಿದ ನಕಲಿ ಪೊಲೀಸ್!

ಅಸ್ಸಾಂ ಮೂಲದ ವಿಶ್ವನಾಥ್‌ ಹಲವು ವರ್ಷಗಳಿಂದ ಚಿಕ್ಕಜಾಲದಲ್ಲಿ ನೆಲೆಸಿ, ಕೋಳಿ ಫಾರಂ ನಡೆಸುತ್ತಿದ್ದಾನೆ. ವಾಟ್ಸಾಪ್‌ ಗ್ರೂಪ್‌ವೊಂದರಲ್ಲಿ ಪ್ರಾಧ್ಯಾಪಕ ಯಲ್ಲಪ್ಪ ಅವರ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಎಡಿಟ್‌ ಮಾಡಿದ್ದ. ಈ ಅಶ್ಲೀಲ ಫೋಟೋಗಳನ್ನು ಯಲ್ಲಪ್ಪ ಅವರಿಗೆ ವಾಟ್ಸಾಪ್‌ ಮಾಡಿ, 70 ಸಾವಿರಕ್ಕೆ ಬೇಡಿಕೆಯಿಟ್ಟಿದ್ದ. ಈ ಸಂಬಂಧ ಯಲ್ಲಪ್ಪ ಅವರು ದಾಖಲಿಸಿದ್ದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.