Asianet Suvarna News

ಬಾಯ್‌ಫ್ರೆಂಡ್‌ ಜತೆಗಿದ್ದ 40 ಯುವತಿಯರ ಮೇಲೆ ರೇಪ್ ಮಾಡಿದ ನಕಲಿ ಪೊಲೀಸ್!

ಪ್ರೇಮಿಗಳೆ ಈತನ ಟಾರ್ಗೆಟ್/ ಲಾರಿ ಮಾಲೀಕ ನಕಲಿ ಪೊಲೀಸ್/ ಪ್ರೇಮಿಗಳನ್ನು ದೋಚುತ್ತಿದ್ದ ಆಸಾಮಿ ಸಿಕ್ಕಿಬಿದ್ದ/ ಅತ್ಯಾಚಾರ ಮಾಡಿ ವಿಡಿಯೋ ಮಾಡುತ್ತಿದ್ದ

35-year-old lorry owner poses as cop, rapes over 40 women mah
Author
Bengaluru, First Published Sep 24, 2020, 3:10 PM IST
  • Facebook
  • Twitter
  • Whatsapp

ಚೆನ್ನೈ(ಸೆ. 24)  ಲಾರಿ ಮಾಲೀಕನೊಬ್ಬ ತಾನು ಪೊಲೀಸ್ ಅಧಿಕಾರಿ ಎಂದು ನಂಬಿಸಿ  40 ಕ್ಕೂ ಅಧಿಕ ಮಹಿಳೆಯರ ಮೇಲೆ ಬ್ಲ್ಯಾಕ್ ಮೇಲೆ ಮಾಡಿ  ಅತ್ಯಾಚಾರ ಎಸಗುತ್ತಿದ್ದ ಲಾರಿ ಮಾಲೀಕನನ್ನು ಬಂಧಿಸಲಾಗಿದೆ.

ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ವಿಡಿಯೋ ಮೂಲಕ ಕುಕೃತ್ಯ ಬಯಲಾಗಿದೆ. ಒಂದೆ ತಂತ್ರ ಬಳಸಿ ಮಹಿಳೆಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಪೂಜಾಲ್ ಮತ್ತು ರೆಡ್ ಹಿಲ್ಸ್ ಭಾಗದ ಪ್ರೇಮಿಗಳು ಈತನ ಟಾರ್ಗೆಟ್. 

ಆರೋಪಿ ಪಿಚ್ಚೈಮಣಿ ಎಂಬಾತನ ಬಂಧನ ಮಾಡಲಾಗಿದ್ದು ಆತನ ಮೊಬೈಲ್ ನಿಂದ ಅನೇಕ ಮಹಿಳೆಯರೊಂದಿಗೆ ಇರುವ ಪೋಟೋ ಮತ್ತು ವಿಡಿಯೋ ವಶಕ್ಕೆ ಪಡೆದುಕೊಳ್ಳಲಾಗಿದೆ.

ಪೊಲೀಸ್ ಅಧಿಕಾರಿಯೊಬ್ಬರು ನನ್ನ  ಬಳಿ 15 ಸಾವಿರ ರೂ. ದೋಚಿದ್ದು ಅಲ್ಲದೆ ಬಾಯ್ ಫ್ರೆಂಡ್ ಜತೆ ಇರುವಾಗ ಮೊಬೈಲ್ ಸಹ ಕಸಿದುಕೊಂಡಿದ್ದಾನೆ  ಎಂದು  ಮಹಿಳೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. 

ತನಿಖೆ ಆರಂಭಿಸಿದ ಪೊಲೀಸರು ಏರಿಯಾದ ಸಿಸಿಟಿವಿ ಚೆಕ್ ಮಾಡಿದ್ದಾರು. ಈ ವೇಳೆ ಆಕೆಯ ಬಾಯ್ ಫ್ರೆಂಡ್ ತನ್ನಿಂದ ತಾನೆ  ತೆರಳುತ್ತಿರುವುದು  ಕಂಡುಬಂದಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಆರೋಪಿ ಬಾಯ್ ಫ್ರೆಂಡ್‌ ಗೆ ನಾನು ಮತ್ತು ಬಾಯ್ ಫ್ರೆಂಡ್ ಖಾಸಗಿಯಾಗಿ ಕಳೆಯುತ್ತಿದ್ದ ಪೋಟೋ ತೋರಿಸಿ ಬೆದರಿಸಿದ. ಆ ಕಾರಣಕ್ಕೆ ಆತ ಅಲ್ಲಿಂದ ಜಾಗ ಖಾಲಿ ಮಾಡಿದ  ಎಂದು ಸತ್ಯ ಒಪ್ಪಿಕೊಂಡಿದ್ದಾಳೆ. ಇದಾದ ಮೇಲೆ ನಿರ್ಜನ ಪ್ರದೇಶಕ್ಕೆ ಮಹಿಳೆಯ ಕರೆದೊಯ್ದ ಲಾರಿ ಮಾಲೀಕ ಅತ್ಯಾಚಾರ ಮಾಡಿ ಆಕೆಯನ್ನು ದೋಚಿದ್ದಾನೆ.

ನಾನು ಪೊಲೀಸರಂತೆ ವೇಷ ಧರಿಸಿ ದ್ವಿಚಕ್ರ ವಾಹನದಲ್ಲಿ ರೆಡ್ ಹಿಲ್ ಏರಿಯಾದಲ್ಲಿ ಓಡಾಡುತ್ತಿದ್ದೆ. ಕಪಲ್ ಗಳು ಕಣ್ಣಿಗೆ ಬಿದ್ದಾಗ ಅವರನ್ನು ಪ್ರಶ್ನೆ ಮಾಡಿ ಹೆದರಿಸುತ್ತಿದ್ದೆ ಎಂದು ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. 

Follow Us:
Download App:
  • android
  • ios