ಪೊಲೀಸರ ಭರ್ಜರಿ ಬೇಟೆ: 91 ಲಕ್ಷ ಮೌಲ್ಯದ 104 ಕೇಜಿ ಗಾಂಜಾ ವಶ
ಕೃತ್ಯಕ್ಕೆ ಬಳಸಿದ ಟೊಯೋಟಾ ಇಟಿಯಾಸ್ ಕಾರು ಹಾಗೂ ಬೆಲೆಬಾಳುವ ಮೊಬೈಲ್ ಫೋನ್ ವಶ| ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು|
ಆನೇಕಲ್(ಏ.29): ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಭರ್ಜರಿ ಬೇಟೆ ನಡೆಸಿ ಲಾಕ್‌ಡೌನ್ ಸಮಯದಲ್ಲಿ ಹಣ ಮಾಡುವ ಉದ್ದೇಶದಿಂದ ಕಾರಿನಲ್ಲಿ ತುಂಬಿಕೊಂಡು ಬಂದಿದ್ದ ಅಂದಾಜು 91.30 ಲಕ್ಷ ಮೌಲ್ಯದ 104 ಕೇಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಟೊಯೋಟಾ ಇಟಿಯಾಸ್ ಕಾರು ಹಾಗೂ ಬೆಲೆ ಬಾಳುವ ಮೊಬೈಲ್ ಫೋನನ್ನು ವಶ ಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ನಲ್ಲೂರು ಜಿಲ್ಲೆ, ರಾಂಪುರ್ ತಾಲೂಕು ಗುಂಡೋಲು ಗ್ರಾಮದ ಅಂತಾರಾಜ್ಯದ ಕುಖ್ಯಾತಿಯ ನಾಗೇಂದ್ರ(39)ನನ್ನು ಆಗ್ನೇಯ ಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀನಾಥ ಮಹದೇವ ಜೋಶಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಠಾಣಾ ಉಪ ಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್.ಪವನ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಅನಿಲ್ ಕುಮಾರ್ ಮತ್ತು ಸಿಬ್ಬಂದಿ ಆರೋಪಿಯನ್ನು ಮಾಲು ಸಹಿತ ಬಂಧಿಸಿದ್ದಾರೆ.
ಬೆಂಗಳೂರು: ಟ್ರಕ್‌ನಲ್ಲಿತ್ತು 1 ಕೋಟಿಯ ಗಾಂಜಾ..!
ಆರೋಪಿ ನಾಗೇಂದ್ರ ಚಿಂತಾಪಲ್ಲಿ ಅರಣ್ಯ ಪ್ರದೇಶದಿಂದ ಕಾರಿನಲ್ಲಿ ಹೊರಟು ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯ ಡಿ.ಮಾರ್ಟ್ ಬಳಿ ಬರುವುದಾಗಿ ಭಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯ ಮೇಲೆ ದಾಳಿ ನಡೆಸಿ ಮಾಲು, ಕಾರು ಹಾಗೂ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.