Asianet Suvarna News Asianet Suvarna News

ರಿಯಲ್ ಎಸ್ಟೇಟ್ ವ್ಯಾಪಾರಿ ಕೊಲೆಗೆ ರೋಚಕ ಟ್ವಿಸ್ಟ್: ಅಪ್ರಾಪ್ತ ಮಗನಿಂದಲೇ ಹತ್ಯೆ

ಅರಮನೆ ನಗರಿಯಲ್ಲಿ ನಡೆದ ರಿಯಲ್ ಎಸ್ಟೇಟ್‌ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ ಸಿಕ್ಕಿದೆ. ಅಪ್ರಾಪ್ತ ಮಗನೇ ತಂದೆಯನ್ನು ಕೊಲೆ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. 

Exciting twist to real estate dealer murder case, father killed by minor son akb
Author
Mysore, First Published Aug 9, 2022, 3:19 PM IST

ಮೈಸೂರು: ಅರಮನೆ ನಗರಿಯಲ್ಲಿ ನಡೆದ ರಿಯಲ್ ಎಸ್ಟೇಟ್‌ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌ ಸಿಕ್ಕಿದೆ. ಅಪ್ರಾಪ್ತ ಮಗನೇ ತಂದೆಯನ್ನು ಕೊಲೆ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಮಗ ಜನ್ಮ ನೀಡಿದ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದಿದ್ದಾನೆ.  

ಕುಟುಂಬದಲ್ಲಿದ್ದ ವೈಮನ್ನಸ್ಸೇ ಕೊಲೆಗೆ ಕಾರಣ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರ ಗುಪ್ತ ಹೇಳಿದ್ದಾರೆ. ಮೃತ ಸಂಪತ್ ಪ್ರತಿನಿತ್ಯ ಪತ್ನಿ ಹಾಗೂ ಮಗನ ಜೊತೆ ಜಗಳವಾಡುತ್ತಿದ್ದರು. ಇದೇ ವಿಚಾರವಾಗಿ ನಿನ್ನೆ ತಂದೆ ಮಗನ ನಡುವೆ ಜಗಳ ನಡೆದಿದೆ. ಜಗಳದ ಮಧ್ಯೆ ಮಗ, ತಂದೆಗೆ ರಾಡ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ನಂತರ ಕೊಲೆ ಮುಚ್ಚಿಹಾಕಲು ಮಗ ನಾಟಕವಾಡಿದ್ದಾನೆ. ಯಾರೋ ಮನಗೆ ನುಗ್ಗಿ ತಂದೆಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಎಸ್ಪಿ ಮಾಹಿತಿ ನೀಡಿದ್ದರು. ಸಂಪತ್ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಮನೆಯಲ್ಲಿ ಅಗರಬತ್ತಿ ವ್ಯಾಪಾರ ನಡೆಸುತ್ತಿದ್ದರು. ದುರ್ಷ್ಕರ್ಮಿಯೊಬ್ಬ ಮನೆಗೆ ಬಂದು ರಾಡ್‌ ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ ಎಂದು 16 ವರ್ಷದ ಮಗ ಕಥೆ ಕಟ್ಟಿದ್ದ. ಈ ವೇಳೆ ಪೊಲೀಸರಿಗೆ ಸಂಶಯ ಬಂದು ಮಗನನ್ನು ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಬಾಲ್ಕನಿಯಿಂದ ದೂಡಿ ಕೊಲೆ: ಕರುಳಬಳ್ಳಿಯನ್ನು ಕೊಂದು ನಾಟಕವಾಡಿದ್ಳಾ ತಾಯಿ?

ಪಾಸಾಗದಿದ್ದರೆ ಮನೆಯಿಂದ ಹೊರ ಹಾಕುವೆ ಎಂದ ತಂದೆಯ ಕೊಲೆ

10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಮನೆಯಿಂದ ಹೊರ ಹಾಕುತ್ತೇನೆ ಎಂದು ಬೆದರಿಸಿದ ತಂದೆಯನ್ನು 15 ವರ್ಷದ ಮಗನೇ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದಿತ್ತು. ಬಾಲಕ ತಂದೆಯನ್ನು ಕೊಲೆ ಮಾಡಿ ನಂತರ ತನ್ನ ಮನೆಯ ನೆರೆಹೊರೆಯವರು ತನ್ನ ತಂದೆಯನ್ನು ಕೊಂದಿದ್ದಾರೆ ಎಂದು ಹದಿಹರೆಯದ ಹುಡುಗ ಗುನಾ ಪೊಲೀಸರಿಗೆ ತಿಳಿಸಿದ್ದ. ಆದರೆ ಕೊಲೆ ನಡೆದಾಗ ಮನೆಗೆ ಒಳಗಿನಿಂದ ಬೀಗ ಹಾಕಲಾಗಿತ್ತು ಎಂಬುದು ತನಿಖೆ ವೇಳೆ ಪೊಲೀಸರಿಗೆ ತಿಳಿದಿದೆ. 

ಬಾಲಕನ ತಂದೆ ಅಂಗಡಿಯೊಂದನ್ನು ನಡೆಸುತ್ತಿದ್ದರು. ಮಗ ಎಸ್‌ಎಸ್‌ಎಲ್‌ಸಿ ಓದುತ್ತಿದ್ದು, ಪರೀಕ್ಷೆ ಚೆನ್ನಾಗಿ ಬರೆಯದಿದ್ದರೆ ಮನೆಯಿಂದ ಹೊರಗೆಸೆಯುವುದಾಗಿ ತಂದೆ ಈತನಿಗೆ ಬೆದರಿಸಿದ್ದರು. ಘಟನೆಯ ಬಳಿಕ ತಂದೆಯ ಕೊಲೆ ಮಾಡಿದ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಬಂಧಿಸಲಾಗಿದೆ ಎಂದು ಗುನಾ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ (Rajeev Mishra) ತಿಳಿಸಿದ್ದರು. ಈತ ತನ್ನ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದು, ಬಳಿಕ ಬೆರಳಚ್ಚಿನ (fingerprints) ಗುರುತು ತಿಳಿಯಬಾರದು ಎಂಬ ಕಾರಣಕ್ಕೆ ತನ್ನ ಕೈಗಳನ್ನು ಸುಟ್ಟುಕೊಂಡಿದ್ದ. ಅಲ್ಲದೇ ನೆರೆಮನೆಯವರು ತನ್ನ ತಂದೆಯನ್ನು ಕೊಂದರು ಎಂದು ಕತೆ ಕಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನ ತಂದೆ 46 ವರ್ಷ ಪ್ರಾಯದವರಾಗಿದ್ದು, ಮೆಡಿಕಲ್ ಶಾಪ್  ಹೊಂದಿದ್ದರು. ಶನಿವಾರ ತಡರಾತ್ರಿ ಇವರು ಶವವಾಗಿ ಪತ್ತೆಯಾಗಿದ್ದರು. ತನ್ನ ತಂದೆಯನ್ನು ನೆರೆಮನೆಯವರು ಕೊಂದಿದ್ದಾರೆ. ನೆರೆಮನೆಯವರು ತನ್ನ ತಂದೆಯೊಂದಿಗೆ ಚರಂಡಿಯ ಬಗ್ಗೆ ಜಗಳವಾಡಿದರು ಮತ್ತು ಘೋರ ಪರಿಣಾಮ ಎದುರಿಸಬೇಕಾಗಬಹುದು ಎಂದು ಬೆದರಿಕೆ ಹಾಕಿದರು ಎಂದು ಬಾಲಕ ಹೇಳಿದ್ದ. ಬಾಲಕನ ಮಾತು ಕೇಳಿ ಪೊಲೀಸರು ನೆರೆಹೊರೆಯವರನ್ನು ಬಂಧಿಸಿದ್ದರು. ಆದರೆ ತನಿಖೆಯಲ್ಲಿ, ಅಪರಾಧ ಸಂಭವಿಸಿದಾಗ ಬಾಗಿಲುಗಳು ಒಳಗಿನಿಂದ ಲಾಕ್ ಆಗಿದ್ದರಿಂದ ಕುಟುಂಬದ ಸದಸ್ಯರೇ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸರಿಗೆ ಖಚಿತವಾಗಿದೆ. ನಂತರ ಕುಟುಂಬ ಸದಸ್ಯರನ್ನು ವಿಚಾರಿಸಿದ ಬಳಿಕ ಪೊಲೀಸರು ಬಾಲಕನ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದಾರೆ ಏಕೆಂದರೆ ಆತ ತನ್ನ ತಂದೆಯ ಮೃತದೇಹವನ್ನು ಮೊದಲಿಗೆ ನೋಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಬಾಲಕನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಿಶ್ರಾ ಹೇಳಿದ್ದಾರೆ.

Follow Us:
Download App:
  • android
  • ios