Asianet Suvarna News Asianet Suvarna News

ವೈಟ್ ಕಾರ್ ಎಡವಟ್ಟು.. ಸಿಗ್ನಲ್ ಕೊಟ್ಟರೂ ನಿಲ್ಲಿಸಲಿಲ್ಲ.. ವಿದ್ಯಾರ್ಥಿ ಮೇಲೆ ಗುಂಡಿನ ಮಳೆ!

ಕಾರು ನಿಲ್ಲಿಸದ ವಿದ್ಯಾರ್ಥಿ/ ದರೋಡೆಕೋರರು ಎಂದು ಭಾವಿಸಿ ಪೊಲೀಸರಿಂದ ಗುಂಡಿನ ಸುರಿಮಳೆ/ ಸ್ಥಳದಲ್ಲೇ ಸಾವಿಗೀಡಾದ ವ್ಯಾಪಾರಿ ಮಗ/  ಪಾಕಿಸ್ತಾನದಲ್ಲಿ ಕೋಲಾಹಲ

Pakistan Outrage as 5 policemen shoot student dead for not stopping car mah
Author
Bengaluru, First Published Jan 4, 2021, 4:33 PM IST

ಇಸ್ಲಾಮಾಬಾದ್ (ಜ. 04)  ಸಿಗ್ನಲ್ ಕೊಟ್ಟರೂ ವಾಹನ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ  22 ವರ್ಷದ ವಿದ್ಯಾರ್ಥಿಯನ್ನು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಸಿಬ್ಬಂದಿ  ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ರಾವಲ್ಪಿಂಡಿ ಮೂಲದ ವ್ಯಾಪಾರಿ ನದೀಮ್ ಯೂನಸ್ ಸಟ್ಟಿ ಅವರ ಪುತ್ರ ಒಸಾಮಾ ನದೀಮ್ ಸಟ್ಟಿ  ಗುಂಡಿಗೆ ಬಲಿಯಾಗಿದ್ದಾನೆ.  ಸೆಕ್ಟರ್ ಹೆಚ್ -11 ಇಸ್ಲಾಮಾಬಾದ್‌ನ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ ತನ್ನ ಸ್ನೇಹಿತನ ಡ್ರಾಪ್ ಮಾಡಿ ಮನೆಗೆ ಹಿಂದಿರುಗುತ್ತಿದ್ದ.

ಶಾಸಕರ ಪುತ್ರನ ಕಾರು ಅಡ್ಡಹಾಕಿ ಅವಾಜ್

ವಾಹನವನ್ನು ಬೆನ್ನು ಹತ್ತಿದ ಐದು ಸಿಟಿಡಿ ಸಿಬ್ಬಂದಿ 22 ಸಾರಿ ಗುಂಡು ಹಾರಿಸಿದ್ದಾರೆ. ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಪಿಮ್ಸ್) ವಕ್ತಾರರ ಪ್ರಕಾರ, ತಲೆ ಮತ್ತು ಎದೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಕನಿಷ್ಠ ಏಳು ಗುಂಡುಗಳು ವಿದ್ಯಾರ್ಥಿಯ ದೇಹ ಸೀಳಿದ್ದವು.

ಈ ಘಟನೆ ಪಾಕಿಸ್ತಾನದಲ್ಲಿ ಕೋಲಾಹಲವನ್ನು ಸೃಷ್ಟಿಸಿತು,  ಶ್ರೀನಗರ ಹೆದ್ದಾರಿ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಬಗ್ಗೆ ದೂರು ದಾಖಲಾಗಿದ್ದು ಘಟನೆ ಸಂಬಂಧ ಐವರು ಪೊಲೀಸ್ ಅಧಿಕಾರಿಗಳನ್ನು ಬಂಧನ ಮಾಡಲಾಗಿದೆ. ನದೀಮ್ ಸಟ್ಟಿ ಮುಂಜಾನೆ 2 ಗಂಟೆ ವೇಳೆ ಸ್ನೇಹಿತನನ್ನು ಡ್ರಾಪ್ ಮಾಡಲು ಹೋಗಿದ್ದರು ಎಂದು ಆರಂಭಿಕ ಮಾಹಿತಿ ಹೇಳಿದೆ.

ಉತ್ತರ ಪ್ರದೇಶದಿಂದ ಬಂದು ಬೆಂಗಳೂರಲ್ಲಿ ದೊಡ್ಡ ರಾಬರಿ

ಆದರೆ ಪೊಲೀಸ್ ಅಧಿಕಾರಿಗಳು ಮಾತ್ರ ಇದನ್ನು ಬೇರೆ ರೀತಿಯಲ್ಲೇ  ಹೇಳುತ್ತಾರೆ.  ಕಾರನ್ನು ನಿಲ್ಲಿಸಲು ಕೇಳಿದರೂ ಆತ ನಿಲ್ಲಿಸಿಲ್ಲ.  ಶಮ್ಸ್ ಕಾಲೋನಿಯ ನಿವಾಸಿಯೊಬ್ಬರು ಪೊಲೀಸರಿಗೆ  ತುರ್ತು ಕರೆ ಮಾಡಿದ್ದಾರೆ. ನಾಲ್ಕು ಶಸ್ತ್ರಸಜ್ಜಿತ ದರೋಡೆಕೋರರು ತಮ್ಮ ಮನೆಗೆ ಪ್ರವೇಶಿಸಿ, ಕುಟುಂಬ ಸದಸ್ಯರನ್ನು ಗನ್‌ಪಾಯಿಂಟ್‌ನಲ್ಲಿ ಹಿಡಿದಿಟ್ಟುಕೊಂಡರು, ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಬಿಳಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.  ಇದೇ ವೇಳೆ ಮೃತ ವಿದ್ಯಾರ್ಥಿ ಸಹ ಅದೇ ಬಣ್ಣದ ಕಾರಿನಲ್ಲಿ ಬಂದಿದ್ದಾರೆ. ನಿಲ್ಲಿಸಲು ಕೇಳಿದರೂ ನಿಲ್ಲಿಸಿಲ್ಲ. ಅನುಮಾನಗೊಂಡ  ಪೊಲೀಸರು ಗುಂಡಿನ ಮಳೆ ಸುರಿಸಿದ್ದಾರೆ.

ನನ್ನ ಮಗ ಯಾವ ತಪ್ಪು ಮಾಡದೆ ಪ್ರಾಣ ಕಳೆದುಕೊಂಡಿದ್ದಾನೆ. ಪೊಲೀಸರು ಕಾರಿನ ಹಿಂಬದಿಯಿಂದ ಶೂಟ್ ಮಾಡುವ ಅಗತ್ಯ ಏನಿತ್ತು ಎಂದು ಮೃತ ವಿದ್ಯಾರ್ಥಿಯ ತಂದೆ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಪಾರದರ್ಶಕ ತನಿಖೆ  ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.,

 

Follow Us:
Download App:
  • android
  • ios