ಧಾರವಾಡ, (ಜ.04): ಕಲಘಟಗಿ ಶಾಸಕ ಸಿ. ಎಮ್. ನಿಂಬಣ್ಣವರ ಪುತ್ರನ ಕಾರು ಅಡ್ಡಗಟ್ಟಿ ಜೀವ ಬೆದರಿಕಿ ಹಾಕಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಲಘಟಗಿಯ ಸಂಗೆದೇವರಕೊಪ್ಪ‌ ಗ್ರಾಮದಲ್ಲಿ ಇಂದು (ಸೋಮವಾರ) ಈ ಘಟನೆ ನಡೆದಿದ್ದು, ಜಮೀನು ವಿವಾದದ ವಿಚಾರವಾಗಿ ನಡೆದಿರುವ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.

ಉತ್ತರಪ್ರದೇಶದಿಂದ ಕಾರಲ್ಲಿ ಬಂದ ಕಳ್ಳರು: ಬೆಂಗ್ಳೂರು ಮನೆಗಳಲ್ಲಿ ಕಳ್ಳತನ

 ಶಾಸಕರ ಪುತ್ರ  ಶಶಿಧರ ನಿಂಬಣ್ಣವರ್‌ ಅವರು ಸಂಗೆದೇವರಕೊಪ್ಪದ ಹೊಲಕ್ಕೆ ಹೋಗಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ದುಷ್ಕರ್ಮಿಗಳು ಕಾರು ಅಡ್ಡಹಾಕಿದ್ದಾರೆ. ಅಲ್ಲದೇ ಕಾರಿನ ಮೇಲೆ ಕಲ್ಲು ಹಾಕಿ, ಗಾಜು ಒಡೆದು ಗಲಾಟೆ ಮಾಡಿದ್ದಾರೆ. ಸಾಲದಕ್ಕೆ  ಜೀವ ಬೆದರಿಕೆ ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸಕರ ಪುತ್ರ  ಶಶಿಧರ  ಅವರು  ಶಂಕ್ರಪ್ಪ, ಮಹಾಂತೇಶ, ಸಂಗಮೇಶ್ ನಿಂಬಣ್ಣವರ ಎನ್ನುವವರ ವಿರುದ್ಧ ದೂರು ನೀಡಿದ್ದು, ಈ ಪೈಕಿ ಕಲಘಟಗಿ ಪೊಲೀಸರು ಮೂವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.