Telangana: ಎಂಗೇಜ್ಮೆಂಟ್ ದಿನವೇ ಮನೆಗೆ ನುಗ್ಗಿ 100ಕ್ಕೂ ಹೆಚ್ಚು ಜನರಿಂದ ಮಹಿಳೆ ಕಿಡ್ನ್ಯಾಪ್..!
ಮಹಿಳೆಯ ನಿಶ್ಚಿತಾರ್ಥದ ದಿನದಂದೇ, ಆಕೆಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂಬುದನ್ನು ವಿಡಿಯೋ ಕ್ಲಿಪ್ ತೋರಿಸುತ್ತದೆ. ಪೊಲೀಸರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ತೆಲಂಗಾಣದ (Telangana) ರಂಗಾರೆಡ್ಡಿ (Ranga Reddy) ಜಿಲ್ಲೆಯ ಆದಿಬಟ್ಲಾದಲ್ಲಿ ಶುಕ್ರವಾರ 24 ವರ್ಷದ ಮಹಿಳೆಯನ್ನು ಆಕೆಯ ಮನೆಯಿಂದ ಅಪಹರಿಸಲಾಗಿದೆ (Kidnap) ಎಂದು ಹೇಳಲಾಗಿದ್ದು, ಕನಿಷ್ಠ 100 ಪುರುಷರು ಮಹಿಳೆಯ ಮನೆಗೆ ನುಗ್ಗಿ ಬಲವಂತವಾಗಿ ಕರೆದೊಯ್ದಿದ್ದಾರೆ. ವೈಶಾಲಿ (Vaishali) ಎಂದು ಗುರುತಿಸಲಾದ ಮಹಿಳೆಯ ಪೋಷಕರ ಪ್ರಕಾರ, ಸುಮಾರು 100 ಪುರುಷರು (Men) ತಮ್ಮ ಮನೆಗೆ ನುಗ್ಗಿ, ಮನೆಯನ್ನು ಧ್ವಂಸಗೊಳಿಸಿದ ನಂತರ ಮಗಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ವಿಡಿಯೋದಲ್ಲಿ (Video) ಪುರುಷರು ಮಹಿಳೆಯ ಸಂಬಂಧಿಕರಿಗೆ ಥಳಿಸುವ ದೃಶ್ಯ ಕಂಡು ಬರುತ್ತಿದೆ. ಮಹಿಳೆಯ ನಿಶ್ಚಿತಾರ್ಥದ ದಿನದಂದೇ, ಆಕೆಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂಬುದನ್ನು ವಿಡಿಯೋ ಕ್ಲಿಪ್ ತೋರಿಸುತ್ತದೆ. ಪೊಲೀಸರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಘಟನೆಯ ಸಂಬಂಧ 10 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ: BENGALURU: ಟೀ ಅಂಗಡಿ ಹುಡುಗರ ಮೇಲಿನ ಹಲ್ಲೆ ಪ್ರಕರಣಕ್ಕೆ ರಿವೇಂಜ್ ಟ್ವಿಸ್ಟ್
ಘಟನೆಯ ವಿವರ..
ತೆಲಂಗಾಣದ ಹೈದರಾಬಾದ್ ಬಳಿಯ ರಂಗಾ ರೆಡ್ಡಿ ಜಿಲ್ಲೆಯ ಆದಿಬಟ್ಲಾ ಗ್ರಾಮದಲ್ಲಿ ಹೌಸ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ಬಿಡಿಎಸ್ (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ಪದವೀಧರ ಮಹಿಳೆಯನ್ನು ಆಕೆಯ ಸ್ವಂತ ಮನೆಯಿಂದ ಅಪಹರಿಸಲಾಗಿತ್ತು. ಸುಮಾರು 100 ಯುವಕರು ತಮ್ಮ ಮನೆಗೆ ನುಗ್ಗಿ ತಮ್ಮ ಮಗಳು ವೈಶಾಲಿಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ. ವಿಡಿಯೊದಲ್ಲಿ ಕನಿಷ್ಠ 30 ಪುರುಷರು ಮನೆಯನ್ನು ಧ್ವಂಸಗೊಳಿಸುವುದು, ಕಾರಿನ ಗಾಜುಗಳನ್ನು ಒಡೆದುಹಾಕುವುದು ಮತ್ತು ಒಬ್ಬ ವ್ಯಕ್ತಿಯನ್ನು ಮನೆಯಿಂದ ಹೊರಗೆ ಎಳೆದು ದೊಣ್ಣೆ ಮತ್ತು ರಾಡ್‌ಗಳಿಂದ ಥಳಿಸುವುದನ್ನು ಕಾಣಬಹುದು.
ಯುವತಿಯನ್ನು ಮದುವೆಯಾಗುವಂತೆ ಕಿರುಕುಳ ನೀಡುತ್ತಿದ್ದ ನವೀನ್ ರೆಡ್ಡಿ ಎಂಬ ವ್ಯಕ್ತಿ ಹೆಚ್ಚು ಜನರನ್ನು ಸೇರಿಸಿ ಆಕೆಯನ್ನು ಅಪಹರಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ನವೀನ್ ಬ್ರ್ಯಾಂಡೆಡ್ ಟೀ ಅಂಗಡಿಯ ಫ್ರಾಂಚೈಸ್ ಅನ್ನು ಹೊಂದಿದ್ದು, ಮತ್ತು ಮಹಿಳೆಯ ಮನೆಯ ಎದುರು ಗಾಜಿನ ಗೋಡೆಯುಳ್ಳ ಕೆಫೆಯನ್ನು ಹಾಕಿದ್ದರು. ವೈಶಾಲಿ ಅಪಹರಣದ ನಂತರ ಆ ಕೆಫೆಯನ್ನು ಮಹಿಳೆಯ ಪೋಷಕರು ಕೆಡವಿದ್ದಾರೆ.
ಇದನ್ನೂ ಓದಿ: Crime: ಗೆಳೆಯರೊಂದಿಗೆ ಪತ್ನಿ ಮಲಗಿಸಿ ವೀಡಿಯೋ ಮಾಡುತ್ತಿದ್ದ ಗಂಡನಿಗೆ ನಾದಿನಿಯೂ ಬೇಕಂತೆ!
ನವೀನ್ ತನ್ನ ಟೀ ಸ್ಟಾಲ್‌ನಿಂದ ಕೆಲಸಗಾರರೊಂದಿಗೆ ಆ ಮನೆಗೆ ಹೋಗಿದ್ದು, ತನ್ನ 'ಪತ್ನಿ' ತನ್ನೊಂದಿಗೆ ವಾಸಿಸಲು ನಿರಾಕರಿಸಿದಳು ಎಂದು ಆತ ಹೇಳಿಕೊಂಡಿದ್ದು, ಈ ಹಿನ್ನೆಲೆ ಅವಳನ್ನು ಮನೆಗೆ ಕರೆದೊಯ್ಯಲು ಬಯಸಿದ್ದಾನೆ. ವೈಶಾಲಿ ನವೀನ್ ಜತೆ ಸಂಬಂಧದಲ್ಲಿದ್ದಳು ಎಂದು ವರದಿಯಾಗಿದ್ದು, ಆದರೆ ಆಕೆ ಅವನನ್ನು ಮದುವೆಯಾಗಿಲ್ಲ ಎಂದು ತಿಳಿದುಬಂದಿದೆ.
ಈ ಪ್ರಕರಣ ಸಂಬಂಧ ಪೊಲೀಸರು 18 ಜನರನ್ನು ಬಂಧಿಸಿದ್ದಾರೆ, ಆದರೆ ಪ್ರಮುಖ ಆರೋಪಿ ನವೀನ್ ಪರಾರಿಯಾಗಿದ್ದು, ಇನ್ನೂ ಸಿಕ್ಕಿಬಿದ್ದಿಲ್ಲ. ಅಲ್ಲದೆ, ಉಳಿದ ಆರೋಪಿಗಳನ್ನು ಗುರುತಿಸಿ ಬಂಧಿಸಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸರು ಹೇಳಿದರು.
ವೈಶಾಲಿ ದಂತವೈದ್ಯೆ ಮತ್ತು ಮಾಜಿ ಸೈನಿಕನ ಮಗಳು ಎಂದು ಇಬ್ರಾಹಿಂಪಟ್ಟಣ ಪೊಲೀಸರು ತಿಳಿಸಿದ್ದಾರೆ. ಆಕೆ ನವೀನ್‌ನನ್ನು ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಭೇಟಿಯಾಗಿದ್ದಳು ಮತ್ತು ಇಬ್ಬರೂ ಕ್ಲೋಸ್ ಆಗಿದ್ದರು. ನವೀನ್ ತನ್ನ ಮಲ್ಟಿಲೆವೆಲ್ ಮಾರ್ಕೆಟಿಂಗ್ ಬ್ಯುಸಿನೆಸ್‌ನಿಂದ ಹಣ ಗಳಿಸಿದ್ದು, ಆಕೆಗೆ ಕಾರನ್ನು ಸಹ ಖರೀದಿಸಿದ್ದನೆಂದು ಹೇಳಲಾಗಿದೆ.
ಇದನ್ನೂ ಓದಿ: Bengaluru: ಪುಡಿ ರೌಡಿಗಳಿಂದ ಬೇಕರಿ ಯುವಕರ ಮೇಲೆ ಹಲ್ಲೆ, ದೃಶ ಸಿಸಿಟಿವಿಯಲ್ಲಿ ಸೆರೆ
ನಂತರ, ನವೀನ್ ವೈಶಾಲಿಗೆ ಮದುವೆಯ ಪ್ರಸ್ತಾಪವಿಟ್ಟಿದ್ದಾನೆ, ಆದರೆ ಆಕೆ ತಿರಸ್ಕರಿಸಿದ್ದಾಳೆ. ನಂತರ ಅವರು ಇನ್ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಿರುಕುಳ ನೀಡಿದ್ದರು ಮತ್ತು ಆತ ತನ್ನನ್ನು ಹಿಂಬಾಲಿಸುತ್ತಿದ್ದಾನೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದರು.
ನಿನ್ನೆ ವೈಶಾಲಿಗೆ ನಿಶ್ಚಿತಾರ್ಥ ನಿಶ್ಚಯವಾಗಿತ್ತು ಎಂದು ಹೇಳಲಾಗಿದ್ದು, ಈ ಹಿನ್ನೆಲೆ ನವೀನ್ ಸುಮಾರು 100 ಮಂದಿಯೊಂದಿಗೆ ನುಗ್ಗಿ ಬಾಲಕಿಯ ಕುಟುಂಬ, ಮನೆ ಮೇಲೆ ದಾಳಿ ನಡೆಸಿ ಕಾರನ್ನು ಧ್ವಂಸಗೊಳಿಸಿದ್ದರು.