Bengaluru: ಪುಡಿ ರೌಡಿಗಳಿಂದ ಬೇಕರಿ ಯುವಕರ ಮೇಲೆ ಹಲ್ಲೆ, ದೃಶ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರಿನ ಹೆಚ್ ಎಎಲ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ ಗೇಟ್ ಮುಖ್ಯರಸ್ತೆಯಲ್ಲೇ ಇರೋ ಒಂದು ಬೇಕರಿಗೆ ನೆನ್ನೆ ತಡರಾತ್ರಿ ಬಂದ ಯುವಕರು ಸಿಗರೇಟ್ ಕೇಳಿದ್ರು ಬಳಿಕ ಅಂಗಡಿ ಮಾಲೀಕ ಎಲ್ಲಿ ಅಂತ ಕೇಳಿದ ಅವರು ನೋಡ ನೋಡುತ್ತಲೇ ದಾಂದಲೆ ನಡೆಸಿದ್ದು, ಸಾವಿರಾರು ರೂಪಾಯಿ ಹಣ ಕಸಿದು ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು (ಡಿ.9): ಯುವಕರು ದೂರದೂರಿಂದ ಬದುಕು ಕಟ್ಟಿಕೊಳ್ಳೊಕೆ ಬೆಂಗಳೂರಿಗೆ ಬಂದವರು. ಹೀಗೆ ಬಂದು ಚಿಕ್ಕದಾಗಿ ಅಂಗಡಿ ತೆಗೆದು ಕೆಲಸ ಮಾಡಿಕೊಂಡಿದ್ರು. ಅಕ್ಕಪಕ್ಕದಲ್ಲಿ ಕೊಂಚ ತಕರಾರು ಇದ್ರು ವ್ಯಾಪಾರ ಕೂಡ ಚೆನ್ನಾಗೆ ನಡಿತಿತ್ತು. ಆದ್ರೆ ನೆನ್ನೆ ಅದೇನಾಯ್ತೋ. ಅಂಗಡಿಗೆ ಬಂದ ಕೆಲ ಯುವಕರು ಪುಂಡಾಡಿಕೆ ಮಾಡೊದ್ರ ಜೊತೆ ಅಂಗಡಿಯನ್ನೇ ಒಡೆದು ಹಾಕಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ಸಮಯ. ನಗರದ ಹೆಚ್ ಎಎಲ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ ಗೇಟ್ ಮುಖ್ಯರಸ್ತೆಯಲ್ಲೇ ಇರೋ ಒಂದು ಬೇಕರಿಗೆ ನೆನ್ನೆ ತಡರಾತ್ರಿ ಬಂದ ಯುವಕರು ಸಿಗರೇಟ್ ಕೇಳಿದ್ರು ಬಳಿಕ ಅಂಗಡಿ ಮಾಲೀಕ ಎಲ್ಲಿ ಅಂತ ಕೇಳಿದ ಅವರು ನೋಡ ನೋಡುತ್ತಲೇ ದಾಂದಲೆ ನಡೆಸಿದ್ರು. ಏನಾಗುತ್ತಿದೆ ಅನ್ನುವಷ್ಟರಲ್ಲೇ ಇಡಿ ಅಂಗಡಿಯ ವಸ್ತುಗಳ ಚೆಲ್ಲಾಡಿದ ಪುಂಡರು ಅಂಗಡಿ ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಿದ್ದಾರೆ. ಜೊತೆಗೆ ಅಂಗಡಿಯಲ್ಲಿಟ್ಟಿದ್ದ ಸಾವಿರಾರು ರೂಪಾಯಿ ಹಣ ಕಸಿದು ಎಸ್ಕೇಪ್ ಆಗಿದ್ದಾರೆ.
ಇನ್ನು ಈ ಹಲ್ಲೆ ಹಿಂದೆ ಕೆಲ ಆರೋಪಗಳು ಕೇಳಿ ಬಂದಿದ್ದು, ಘಟನೆ ಸಂಬಂಧ ಇಂದು ಠಾಣೆಯ ಮುಂದೆ ಹೈಡ್ರಾಮ ನಡೆದಿದೆ. ಅಸಲಿಗೆ ಹಲ್ಲೆಗೊಳಗಾದ ಯುವಕರ ಹೆಸರು ನವೀನ್, ಪ್ರಜ್ವಲ್ ಹಾಗೂ ನಿತಿನ್. ಮೂಲತಃ ಬೈಂದೂರಿನವರಾಗಿದ್ದು, ಒಂದು ವರ್ಷದ ಹಿಂದೆ ಇಲ್ಲಿ ಬೇಕರಿ ತೆರೆದಿದ್ದಾರೆ. ವ್ಯವಹಾರ ಚೆನ್ನಾಗೆ ನಡೆಯುತ್ತಿದೆ. ಆದರೆ ಪಕ್ಕದಲ್ಲೇ ಇರೊ ಮತ್ತೊಂದು ಬೇಕರಿಯವರೊಂದಿಗೆ ಈ ಹಿಂದೆ ಮಾತುಕಥೆಯಾಗಿತ್ತಂತೆ. ಬಳಿಕ ತಮ್ಮ ಪಾಡಿಗೆ ತಾವು ಅಂಗಡಿ ನಡೆಸುತಿದ್ರಂತೆ. ಆದ್ರೆ ನೆನ್ನೆ ನಡೆದ ಗಲಾಟೆ ಯಾರಿಂದ ನಡೆದಿದೆ ಎನ್ನೊದು ತಿಳಿದಿಲ್ಲವಂತೆ. ಪುಂಡರ ಪುಂಡಾಟಿಕೆಯೋ ಅಥವ ಪಕ್ಕದ ಅಂಗಡಿಯವರ ಕೈವಾಡವೇ ಈ ರೀತಿ ಆಗಿದೆ ಅಂತ ಅಂಗಡಿಯಲ್ಲಿ ಹಲ್ಲೆಗೊಳಗಾದ ಯುವಕರು ಆರೋಪ ಮಾಡುತಿದ್ದಾರೆ.
ಆಂಧ್ರದ ರಕ್ತ ಚರಿತ್ರೆ ಸೇಡಿಗೆ ಕರ್ನಾಟಕದಲ್ಲಿ ಸ್ಪಾಟ್ ಫಿಕ್ಸ್..!
ಬೇಕರಿಯಲ್ಲಾದ ಪುಂಡರ ಪುಂಡಾಟ ಖಂಡಿಸಿರೋ ಬೇಕರಿ ಉದ್ಯಮ ಸಂಘದ ವತಿಯಿಂದ ಈ ಹಲ್ಲೆ ಖಂಡಿಸಿದ್ದು, ಹೆಚ್ ಎ ಎಲ್ ಠಾಣೆ ಮುಂದೆ ಇಂದು ಹಲವರು ಜಮಾಯಿಸಿದ್ರು. ಜೊತೆಗೆ ಠಾಣೆ ಮುಂದೆ ಪ್ರತಿಭಟನೆ ಸಹ ನಡೆಸಿದ್ದಾರೆ. ಕೂಡಲೇ ಎಫ್ ಐ ಆರ್ ದಾಖಲಿಸಿ ಪುಡಿರೌಡಿಗಳನ್ನು ಬಂಧಿಸಬೇಕು ಅಂತ ಆಗ್ರಹಿಸಿದ್ದಾರೆ.
ರೌಡಿಗಳ ವಿರುದ್ಧ ಪೊಲೀಸರು ಹೊಸ ಪ್ರಯೋಗ, ಕೈಗೆ ಕೋಳ ತೊಡಿಸಿ ಗಲ್ಲಿ ಮೆರವಣಿಗೆ
ಒಂದು ವೇಳೆ ಇನ್ನು 24 ಗಂಟೆಯಲ್ಲಿ ಆರೋಪಿಗಳ ಬಂಧನವಾಗದಿದ್ದಲ್ಲಿ ಉಗ್ರಹೊರಾಟ ಮಾಡೊದಾಗಿ ಹೇಳಿದ್ದಾರೆ. ಸದ್ಯ ಘಟನೆ ಸಂಬಂಧ ಗಾಯಾಳು ಯುವಕರು ಹೆಚ್ ಎ ಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲನೆ ನಡೆಸುತಿದ್ದಾರೆ. ಆದ್ರೆ ಬೇಕರಿ ಯುವಕರ ಮೇಲೆ ನಡೆದ ಪುಂಡಾಟಿಕೆಯ ಅಸಲಿ ಕಾರಣ ಏನು ಅನ್ನೊದು ಇನ್ನು ಪ್ರಶ್ನೆಯಾಗಿದ್ದು, ಪೊಲೀಸರ ತನಿಖೆಯಿಂದಷ್ಟೇ ಇದಕ್ಕೆ ಉತ್ತರ ಸಿಗಬೇಕಾಗಿದೆ. ಇನ್ನೂ ಘಟನೆ ಬಗ್ಗೆ ಗೃಹ ಸಚಿವರು ಕೂಡ ಪ್ರತಿಕ್ರಿಯೆ ನೀಡಿದ್ದು ಕೂಡಲೇ ಘಟನೆಗೆ ಸಂಬಂಧಪಟ್ಟವರನ್ನು ಬಂಧನ ಮಾಡಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೂ ಬೇಕರಿ ಇಂತಹ ಘಟನೆಗಳನ್ನು ಅಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ರು.