Asianet Suvarna News Asianet Suvarna News

Crime: ಗೆಳೆಯರೊಂದಿಗೆ ಪತ್ನಿ ಮಲಗಿಸಿ ವೀಡಿಯೋ ಮಾಡುತ್ತಿದ್ದ ಗಂಡನಿಗೆ ನಾದಿನಿಯೂ ಬೇಕಂತೆ!

ನಾಡಿನ ಪುರುಷ ಸಮಾಜವೇ ತಲೆ ತಗ್ಗಿಸುವ ನೀಚ ಕಾರ್ಯ ಮಾಡಿದ ಗಂಡ
ಮಹಿಳಾ ಟೆಕ್ಕಿ ಪತ್ನಿಯನ್ನು ಗೆಳೆಯರೊಂದಿಗೆ ಮಲಗಿಸುತ್ತಿದ್ದ ಸೈಕೋಪಾತ್
ವೀಡಿಯೋ ಇಟ್ಟುಕೊಂಡು ಪತ್ನಿಯ ತಂಗಿಯನ್ನೂ ಮಂಚಕ್ಕೆ ಕರೆತರಲು ಯತ್ನ 

Husband was making video of his wife sleeping with his friends sat
Author
First Published Dec 10, 2022, 10:43 AM IST

ಬೆಂಗಳೂರು ( ಡಿ.10): ಮಹಿಳೆಯನ್ನು ಈಗಲೂ ತನ್ನ ಕೈಗೊಂಬೆಯಂತೆಯೇ ನೋಡಿಕೊಳ್ಳುವ ಹಲವು ಪರುಷರಿದ್ದಾರೆ. ಆದರೆ, ಸಮಾಜದ ಎಲ್ಲ ಕಟ್ಟಳೆಗಳು ಹಾಗೂ ಮಿತಿಗಳನ್ನು ಮೀರಿ ಇಲ್ಲೊಬ್ಬ ತನ್ನ ಪತ್ನಿಯನ್ನು ಗೆಳೆಯರೊಂದಿಗೆ ಮಲಗಿಸಿ ವೀಡಿಯೋ ಮಾಡಿ ವಿಕೃತಿ ಮೆರೆಯುತ್ತಿದ್ದ ಸೈಕೋಪಾತ್‌ ಗಂಡನ ಪುಂಡಾಟ ಬಯಲಾಗಿದೆ. ಹಿಂಸೆಯನ್ನು ತಾಳಲಾರದೇ ಗಂಡನ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ತನ್ನ ಗಂಡ ಇನ್ನೂ ಹಲವು ಸೈಕೋಪಾತ್‌ ಚಟುವಟಿಕೆ ನಡೆಸುತ್ತಿದ್ದ ಬಗ್ಗೆ ಪೊಲೀಸರ ಮುಂದೆ ಪತ್ನಿ ಹೇಳಿಕೊಂಡಿದ್ದಾಳೆ.

ನಾಡಿನ ಪುರುಷ ಸಮಾಜವೇ ತಲೆ ತಗ್ಗಿಸುವ ನೀಚ ಕಾರ್ಯ ಮಾಡುತ್ತಿದ್ದ ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ (Psychopath) ಮಾದಕವ್ಯಸನಿ ಗಂಡನ ಪುಂಡಾಟ ಬಟಾ ಬಯಲಾಗಿದೆ. ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ವಿಡಿಯೋ (Video) ಚಿತ್ರಿಕರಿಸಿ ವಿಕೃತಿ ಮೆರೆಯುತ್ತಿದ್ದನು. ಸಂಪಿಗೆಹಳ್ಳಿ ನಿವಾಸಿಯಾಗಿರೋ ಜಾನ್ ಪಾಲ್  (Janpal) ಎಂಬ ಸೈಕೋಪಾಥ್ ಗಂಡನಿಂದ ಈ ಹಿಂಸಾತ್ಮಕ ಕೃತ್ಯ ನಡೆಯುತ್ತಿತ್ತು. 2011 ರ ಏಪ್ರಿಲ್ ನಲ್ಲಿ ಜಾನ್ ಪಾಲ್ ಅವರನ್ನು ಮಹಿಳಾ ಟೆಕ್ಕಿ ವಿವಾಹವಾಗಿದ್ದಳು. ಮೊದಲ ನಾಲ್ಕು ವರ್ಷಗಳು ಚೆನ್ನಾಗಿಯೇ ಸಂಸಾರ ಮಾಡಿಕೊಂಡಸಿದ್ದುಯ, ನಂತರ 2015 ರಿಂದ ಆರೋಪಿ ಪತಿ ಜಾನ್ ಪಾಲ್ ತನ್ನ ವಿಕೃತಿ ಶುರು ಮಾಡಿದ್ದನು ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

Sleep Postureನಲ್ಲೇ ಭಂಗಿಯಿಂದಲೇ ದಂಪತಿ ಸಂಬಂಧ ಹೇಗಿದೆ ಅನ್ನೋದು ತಿಳಿಯುತ್ತೆ!

ಪಾರ್ಟಿಯೊಂದಿಗೆ ಪತ್ನಿಯೊಡನೆ ಬೆಡ್‌ ಶೇರ್‌: ಮನೆಗೆ ತನ್ನ ಗೆಳೆಯರನ್ನ ಕರೆದು ಪಾರ್ಟಿ ಮಾಡಿ ಗೆಳೆಯರೊಂದಿಗೆ ಬೆಡ್ ಶೇರ್ (Bed Share) ಮಾಡುತ್ತಿದ್ದನು. ಪತಿಯ ಹಲ್ಲೆಗೆ ತಾಳಲಾರದೇ ಆತನ ಮಹಿಳಾ ಆತನ ಟೆಕ್ಕಿ ಗೆಳೆಯರೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪಿದ್ದಳು. ತನ್ನ ಸ್ನೇಹಿತರಾದ ಸಜೀಶ್ ಹಾಗೂ ನಾಜಿ ಎಂಬುವವರ ಜೊತೆ ಪತ್ನಿಯನ್ನ ಮಲಗಿಸಿದ್ದನು. ಸ್ವಂತ ಪತ್ನಿಯನ್ನ ಗೆಳೆಯರೊಂದಿಗೆ ಮಲಗಿಸಿ ಪೊಟೋ, ವಿಡಿಯೋ ಚಿತ್ರೀಕರಣವನ್ನೂ ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದನು. ಪ್ರತಿ ವಾರ ಇದೇ ಘಟನೆಗಳಿಂದ ಬೇಸತ್ತಿದ್ದು, ಈ ಬಗ್ಗೆ ಗಲಾಟೆ ಮಾಡಿದರೂ ತನ್ನನ್ನು ಗಂಡ ಬಿಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. 

ಪತ್ನಿಯ ತಂಗಿಯನ್ನೂ ಕೇಳುತ್ತಿದ್ದ ಗಂಡ: ಆರೋಪಿ ಜಾನ್‌ಪಾಲ್‌ ತನ್ನ ಪತ್ನಿಯ ಮೇಲೆ ವಿಕೃತಿ ಮೆರೆದಿದ್ದಲ್ಲದೇ ಪತ್ನಿಯ ತಂಗಿಯನ್ನು (Wife Sister) ತನ್ನೊಡನೆ ಮಲಗುವಂತೆ ಕಿರುಕುಳ ನೀಡುತ್ತಿದ್ದನು. ಗಂಡನ ಕಿರುಕುಳಕ್ಕೆ ಬೇಸತ್ತು ಮಹಿಳಾ ಟೆಕ್ಕಿ ವಿಚ್ಚೇಧನ (Divorse) ನೀಡಲಿಕ್ಕೆ ಮುಂದಾಗಿದ್ದಾಳೆ. ಈ ವೇಳೆ ತನ್ನ ಗೆಳೆಯರೊಂದಿಗೆ ಪತ್ನಿ ಮಲಗಿದ್ದ ಅಶ್ಲೀಲ ಪೊಟೋ, ವಿಡಿಯೋ ವೈರಲ್ ಮಾಡೋದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು.

Andhra Pradesh: ಡ್ರಮ್‌ನಲ್ಲಿ ಸಿಕ್ತು ಮಹಿಳೆಯ ಡೆಡ್‌ಬಾಡಿ ಪೀಸ್‌; ವರ್ಷದ ಹಿಂದೆ ಪತ್ನಿ ಕೊಂದಿದ್ದ ಪಾಪಿ ಪತಿ..!

ಮನೆಯಲ್ಲಿ ಗಾಂಜಾ ಸಸಿ:  ಇಷ್ಟಕ್ಕೆ ಮುಗಿಯದ ಸೈಕೋಪಾತ್‌ ಗಂಡ ಪುಂಡಾಟ ಇನ್ನೂ ಅತಿರೇಕ ತರಿಸುವಂತಿದೆ. ತನ್ನ ಮದ್ಯವಸನದ ಪ್ರಭಾವ ಹೆಚ್ಚಿಸಿಕೊಳ್ಳಲಿಕ್ಕಾಗಿ ಗಾಂಜಾ ಸೇವನೆಯನ್ನೂ ಮಾಡುತ್ತಿದ್ದನು. ತನ್ನ ವ್ಯಸನಕ್ಕಾಗಿ ಮನೆಯಲ್ಲಿಯೇ ಗಾಂಜಾ ಸಸಿಗಳನ್ನ ಫಾಟ್ ಗಳಲ್ಲಿ ಬೆಳೆಸುತ್ತಿದ್ದನು. ಈ ಎಲ್ಲ ವಿಕೃತಿ ಮತ್ತು ಸಮಾಜ ಬಾಹಿರ ಚಟುವಟಿಕೆಗಳ ಬಗ್ಗೆ ನೊಂದ ಪತ್ನಿ ಸಂಪಿಗೆಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳಾ ಟೆಕ್ಕಿ ದೂರಿನ ಅನ್ವಯ ದೂರಿನ ಅನ್ವಯ ಲೈಂಗಿಕ ಕಿರುಕುಳ, ಎನ್.ಡಿ.ಪಿ.ಎಸ್ ಹಾಗೂ ಐಟಿ ಆಕ್ಟ್ ಅರಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Follow Us:
Download App:
  • android
  • ios