Hubballi: ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ಉದ್ಯೋಗಿ!

ಲೋನ್ ಕ್ಯೂಬ್ ಎನ್ನುವ ಆ್ಯಪ್‌ನಲ್ಲಿ ಸಾಲ ಪಡೆದಿದ್ದ ವ್ಯಕ್ತಿ ಕಿರುಕುಳಕ್ಕೆ ತಾಳದೆ ಲಕ್ಷಾಂತರ ರೂಪಾಯಿ ಹಣ ಪಾವತಿಸಿಯೂ ಕಾಟ ತಪ್ಪದೆ ಪೊಲೀಸರ ಮೊರೆ ಹೋಗಿದ್ದಾನೆ.

Online App Loan Fraud Case in Hubballi gvd

ವರದಿ: ಗುರುರಾಜ ಹೂಗಾರ

ಹುಬ್ಬಳ್ಳಿ (ಮಾ.31): ಮೊದಲಿನಂತೆ ಸಾಲ ಪಡೆಯೋಕೆ ಬ್ಯಾಂಕ್‌ಗಳಿಗೆ (Bank) ಅಲಿಯೋದು ಬೇಕಾಗಿಲ್ಲ. ಕುಳಿತಲ್ಲೇ ಆನ್‌ಲೈನ್ (Online) ಮೂಲಕ ಲೋನ್ (Loan) ಕೊಡ್ತೀವಿ ಅಂತ ಹೊಸ ಹೊಸ ಆಪ್‌ಗಳು (App) ಹುಟ್ಟಿಕೊಂಡಿವೆ. ವ್ಯಾಪಾರ ಮಾಡೋಕೆ, ವಾಹನ ಖರೀದಿಗೆ, ಅಂತೇಳಿ ಕ್ಷಣ ಮಾತ್ರದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಮಾಡ್ತಾರೆ. ಹಾಗಂತ ನೀವು ಸಾಲ ತೆಗದುಕೊಂಡರೆ ನಿಮ್ಮ ಜೀವನವೇ ಬರ್ಬಾದ್ ಮಾಡ್ತಾರೆ ಈ ಆನ್‌ಲೈನ್ ಸಾಲ‌ ನೀಡುವ ಆ್ಯಪ್‌ಗಳು. ಅದಕ್ಕೆ ತಾಜ ಉದಾಹರಣೆ ಇಲ್ಲಿದೆ‌ ನೋಡಿ. 

ಇದು ಲೋನ್ ಆ್ಯಪ್‌ನಲ್ಲಿ ಬ್ಯಾಂಕ್ ಸಿಬ್ಬಂದಿಗೇ ಪಂಗನಾಮ ಹಾಕಿರೋ ಘಟನೆ.  ಇದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಲೋನ್ ಕ್ಯೂಬ್ (Loan Cube) ಎನ್ನುವ ಆ್ಯಪ್‌ನಲ್ಲಿ ಸಾಲ ಪಡೆದಿದ್ದ ವ್ಯಕ್ತಿ ಕಿರುಕುಳಕ್ಕೆ ತಾಳದೆ ಲಕ್ಷಾಂತರ ರೂಪಾಯಿ ಹಣ ಪಾವತಿಸಿಯೂ ಕಾಟ ತಪ್ಪದೆ ಪೊಲೀಸರ (Police) ಮೊರೆ ಹೋಗಿದ್ದಾನೆ.  ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ರೋಹನ್ ವಂಚನೆಗೆ ಒಳಗಾದ ವ್ಯಕ್ತಿ. ಲೋನ್ ಕ್ಯೂಬ್ ಆ್ಯಪ್ ಮೂಲಕ ಮೊದಲು 8 ಸಾವಿರ ಲೋನ್ ಪಡೆದಿದ್ದ. 8 ಸಾವಿರಕ್ಕೆ ಆ್ಯಫ್ 4960 ರೂ ಹಣವನ್ನ ಮಾತ್ರ ಲೋನ್ ಆ್ಯಪ್ ನೀಡಿತ್ತು. 

Hubballi Crime: ಆನ್‌ಲೈನ್‌ ಆ್ಯಪ್‌ನಿಂದ ಸಾಲ ಡೇಂಜರ್‌: ಸ್ವಲ್ಪ ಯಾಮಾರಿದ್ರೂ ಅಪಾಯ ಫಿಕ್ಸ್‌..!

8 ಸಾವಿರ ಹಣವನ್ನ 7 ದಿನದಲ್ಲಿ ತೀರಿಸಬೇಕೆಂದು ಕರೆ ಮೂಲಕ ನಿರಂತರ ಕಿರಿಕಿರಿ ನೀಡಿತ್ತು ಎನ್ನಲಾಗಿದೆ.   ಒಂದು ಆ್ಯಪ್‌ ಕಿರಿಕಿರಿ ತಪ್ಪಿಸಿಕೊಳ್ಳೋಕೆ ಮತ್ತೊಂದು ಆ್ಯಪ್‌ನಲ್ಲಿ ರೋಹನ್ ಸಾಲ ಪಡೆದಿದ್ದ. ಲೋನ್ ಆ್ಯಪ್ ಕಿರಿಕಿರ ಗೆ ಬೇಸತ್ತು ಬೇರೆ ಬೇರೆ ಆ್ಯಪ್‌ಗಳಲ್ಲಿ ಲೋನ್ ಪಡೆದಿದ್ದ.  ಒಂಬತ್ತು ಆ್ಯಪ್‌ಗಳ ಮೂಲಕ ರೋಹನ್ 4,26,654 ರೂಪಾಯಿ ಸಾಲ ಪಡೆದಿದ್ದ. ಎಲ್ಲ ಹಣವನ್ನ ಲೋನ್ ಆಪ್‌ಗೆ ಹಿಂತುರುಗಿಸಿದರೂ ಮತ್ತೆ ಆ್ಯಪ್‌ನಿಂದ ತೊಂದರೆ ನಿಂತಿದ್ದಿಲ್ಲ. ಎಲ್ಲ ಸಾಲವನ್ನ ಮರಳಿ ತುಂಬುವಂತೆ ನಿರಂತರ ಒತ್ತಡ ಹೇರಿದ್ದರು. 

ಈ ಹಿನ್ನೆಲೆ ತಮ್ಮ ವೈಯಕ್ತಿಕ 25,20,460 ಹಣವನ್ನ ರೋಹನ್ ಲೋನ್ ಆ್ಯಪ್‌ಗಳಿಗೆ ಮರಳಿ ತುಂಬಿದ್ದ. ಇಷ್ಟಾದರೂ ಕರೆ ಮೂಲಕ ಮತ್ತೆ ಕಿರಿಕಿರಿ ನೀಡುತ್ತಿದ್ದಾರಂತೆ. ಹೀಗೆ ವಿವಿಧ ನಂಬರ್‌ಗಳ ಮೂಲಕ ಕರೆ ಮಾಡಿ ಮತ್ತೆ ಹಣ ತುಂಬುವಂತೆ ಧಮ್ಕಿ ಹಾಕಿದ್ದರು. ಹಣ ನೀಡದಿದ್ದರೆ ನಿನ್ನ ಎಲ್ಲ ಪರಿಚಯಸ್ತರಿಗೆ ನಿನ್ನ ಮೆಸೇಜ್‌ಗಳನ್ನ ಕಳುಹಿಸುತ್ತೇವೆಂದು ಬೆದರಿಕೆ ಹಾಕಿದ್ದರೆಂದು ಆರೋಪಿಸಲಾಗಿದೆ. ಇದರಿಂದ ಮಾನಸಿಕವಾಗಿ ಕುಗ್ಗಿಹೋದ ರೋಹನ್ ಪೊಲೀಸರ ಮೊರೆ ಹೋಗಿದ್ದಾನೆ. ರೋಹನ್ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಯಾವ್ಯಾವ ಆ್ಯಪ್‌?: ರೋಪೇಲೋ, ಗೋಲ್ಡ್‌ ಕ್ಯಾಶ್‌, ಲೋನ್‌ ಕ್ಯೂಬ್‌, ಕ್ಲಿಯರ್‌ ಲೋನ್‌, ಕ್ಯಾಶ್‌ ಪಾರ್ಕ್, ಲೆಂಡ್‌ ಮೇಲ್‌, ಸ್ಮಾಲ್‌ ಒನ್‌, ಕ್ಯಾಶ್‌ ಬಾಸ್‌, ಈಡಿ ಕ್ರೆಡಿಟ್‌, ಗೋ ಲೋನ್‌, ರುಪೇಸ್ಟಾರ್ಚ್‌ ಆ್ಯಪ್‌ನಿಂದ ಸಾಲ ಪಡೆದವರು ಈ ಸಮಸ್ಯೆ ಎದುರಿಸಿದ್ದಾರೆ. ಆದರೆ, ಈ ಆ್ಯಪ್‌ಗಳನ್ನು ರೂಪಿಸಿದವರೆ ಸಾಲ ಪಡೆದವರಿಗೆ ತೊಂದರೆ ನೀಡುತ್ತಿದ್ದಾರಾ? ಅಥವಾ ಇಲ್ಲಿ ದಾಖಲಾಗುವ ದತ್ತಾಂಶಗಳು ಸೋರಿಕೆಯಾಗಿ ದುಷ್ಕರ್ಮಿಗಳಿಗೆ ಸಿಕ್ಕಿದ ಬಳಿಕ ಅವರು ತೊಂದರೆ ನೀಡುತ್ತಾರಾ ಎಂಬುದು ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕಿದೆ.

Bengaluru Crime: ಬಿಟ್‌ ಕಾಯಿನ್‌ ಹೂಡಿಕೆ ನೆಪದಲ್ಲಿ ಧೋಖಾ..!

ದಿಕ್ಕು ತಪ್ಪಿಸಿ ತೊಂದರೆ: ಸಾಲ ಮರುಪಾವತಿ ವೇಳೆ ಬಳಸಿದ ಯುಪಿಐ (UPI) ಐಡಿ ತಮ್ಮದಲ್ಲ ಎಂದು ಆ್ಯಪ್‌ನವರು ತಗಾದೆ ತೆಗೆಯುತ್ತಾರೆ. ನೀವು ನಮ್ಮ ಯುಪಿಐ ಐಡಿಗೆ ಸಾಲದ ಮೊತ್ತ ತುಂಬಿಲ್ಲ. ಬೇರಾರಿಗೊ ಕಳಿಸಿದ್ದೀರಿ. ನಮಗೆ ಹಣ ಪಾವತಿಸಿ ಎಂದು ಕರೆ ಮಾಡಿ ಪೀಡಿಸಲು ಆರಂಭಿಸುತ್ತಾರೆ. ಅವರು ನೀಡಿದ ಹಣ ತುಂಬಿದರೆ ಮತ್ತೊಬ್ಬರು ಕರೆ ಮಾಡಿ ತಾವು ನೀಡುವ ಯುಪಿಐ ಐಡಿಗೆ ಹಣ ತುಂಬುವಂತೆ ಕಾಡಿಸುತ್ತಾರೆ.

Latest Videos
Follow Us:
Download App:
  • android
  • ios