ಮತ್ತೊಂದು ಮರ್ಯಾದಾ ಹತ್ಯೆ: ಹೆತ್ತ ತಾಯಿ, ಮಗನನ್ನೇ ಕೊಚ್ಚಿ ಕೊಲೆ ಮಾಡಿದ ಪಾಪಿ ತಂದೆ!
ಕನ್ನಮ್ಮಾಳ್ ಹಾಗೂ ಸುಭಾಷ್‌ನನ್ನು ಬದುಕಿಸಲು ಅವರಿಗೆ ಸಾಧ್ಯವಾಗಿಲ್ಲ. ಅವರನ್ನು ಸಹ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಜ್ಜಿ ಹಾಗೂ ಮೊಮ್ಮಗ ಮೃತಪಟ್ಟಿದ್ದಾರೆ ಎಂದು ಅಲ್ಲಿ ಘೋಷಿಸಲಾಗಿದೆ. ಸದ್ಯ, ಅನುಸೂಯ ಸ್ಥಿತಿ ಸಹ ಗಂಭೀರವಾಗಿದೆ.
ಚೆನ್ನೈ (ಏಪ್ರಿಲ್ 17, 2023): ನೀವು ಕನ್ನಡದಲ್ಲಿ ಇತ್ತೀಚೆಗೆ ತೆರೆ ಕಂಡ ಗುರುದೇವ್ ಹೊಯ್ಸಳ ಚಿತ್ರವನ್ನು ನೋಡಿರಬಹುದು. ಆ ಚಿತ್ರದಲ್ಲಿ ಮಗಳು ಬೇರೆ ಜಾತಿಯವನನ್ನು ಮದುವೆಯಾಗ್ತಾಳೆ ಎಂದು ಆಕೆಯ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡ್ತಾರೆ. ಮಗಳ ಮೇಲೂ ಅಮಾನುಷವಾಗಿ ಹಲ್ಲೆ ಮಾಡಿದರೂ ಸಹ ಆಕೆ ಅದೃಷ್ಟವಶಾತ್ ಬದುಕುಳಿಯುತ್ತಾಳೆ. ಇದೇ ರೀತಿಯ ಘಟನೆಯೊಂದು ನಿಜವಾಗಿ ನಡೆದಿದೆ ನೋಡಿ.
ತಮಿಳುನಾಡಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಮಗ ತನ್ನ ಇಚ್ಛೆಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ಮದುವೆಯಾಗಿದ್ದಕ್ಕಾಗಿ ಸಿಟ್ಟಿಗೆದ್ದ ತಂದೆ ತನ್ನ ಮಗ ಹಾಗೂ ಆ ಮದುವೆಯನ್ನು ಒಪ್ಪಿಕೊಂಡ್ರು ಎಂಬ ಕಾರಣಕ್ಕೆ ತನ್ನ ತಾಯಿಯನ್ನೇ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಶನಿವಾರ ಈ ಘಟನೆ ನಡೆದಿದೆ.
ಇದನ್ನು ಓದಿ: Honour Killing: ಅಂತರ್ಜಾತಿ ಯುವಕನ ಜತೆ ಪ್ರೀತಿ: ಮಗಳನ್ನೇ ಕೊಂದ ತಾಯಿ..!
ತಿರುಪ್ಪೂರ್‌ನ ಹೆಣಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹಿಂದುಳಿದ ವರ್ಗ ನಾಡರ್ ಸಮುದಾಯಕ್ಕೆ ಸೇರಿದ ಸುಭಾಷ್ (23), ಜೊತೆಗೆ ಕೆಲಸ ಮಾಡುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಅನುಸೂಯ (25) ಎಂಬಾಕೆಯನ್ನು ಪ್ರೀತಿ ಮಾಡುತ್ತಿದ್ದರು. ಈ ವಿಚಾರ ತಂದೆಯ ಗಮನಕ್ಕೆ ಬಂದಿದ್ದು, ಆಕೆಯೊಂದಿಗಿನ ಸಂಬಂಧವನ್ನು ಕಡಿತಗೊಳಿಸುವಂತೆ ತಂದೆ ಮಗನಿಗೆ ಬೆದರಿಕೆ ಹಾಕಿದ್ದಾರೆ. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುಭಾಷ್ ಮತ್ತು ಅನುಸೂಯ 15 ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಕುಟುಂಬದ ನಿವಾಸಕ್ಕೆ ಭೇಟಿ ನೀಡಿರಲಿಲ್ಲ.
ಆದರೆ, ಸುಭಾಷ್ ಅವರ ಅಜ್ಜಿ ಕನ್ನಮ್ಮಾಳ್ ಅವರು ನವವಿವಾಹಿತರನ್ನು ಅರುಣಾಪತಿ ಗ್ರಾಮದ ತಮಿಳು ಹೊಸ ವರ್ಷದ ದಿನದಂದು ತನ್ನ ಮನೆಗೆ ಬರಲು ಆಹ್ವಾನಿಸಿದ್ದ ಕಾರಣ ಸುಭಾಷ್ ಹಾಗೂ ಅನುಸೂಯ ಗುರುವಾರ ರಾತ್ರಿ ಅಲ್ಲಿಗೆ ತಲುಪಿದರು. ಈ ವಿಷಯ ತಿಳಿದ ದಂಡಪಾಣಿ ಅಲ್ಲಿಗೆ ಹೋಗಿ ಸುಭಾಷ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಅಲ್ಲದೆ, ಸುಭಾಷ್ ಮೇಲೆ ಪುತ್ರ ದಂಡಪಾಣಿ ದಾಳಿ ಮಾಡದಂತೆ ತಡೆಯಲು ಯತ್ನಿಸಿದ ಕನ್ನಮ್ಮಾಳ್ ಅವರನ್ನೂ ಕೊಲೆ ಮಾಡುತ್ತಾನೆ.
ಇದನ್ನೂ ಓದಿ: UP Honour Killing: ಹಿಂದುಳಿದ ಜಾತಿಯ ಯುವಕನೊಂದಿಗೆ ಪ್ರೇಮ; ಮಗಳನ್ನು ಕೊಂದು ಬೆಂಕಿಯಿಟ್ಟ ಅಪ್ಪ
ಅಲ್ಲದೆ, ಸೊಸೆ ಅನುಸೂಯ ಮೇಲೂ ಹತ್ಯೆಗೆ ಯತ್ನಿಸುತ್ತಾನೆ. ಆಕೆಗೆ ಗಂಭೀರವಾದ ಗಾಯಗಳಾಗಿದ್ದರೂ, ಸದ್ಯ ಬದುಕುಳಿದಿದ್ದಾಳೆ. ಕನ್ನಮ್ಮಾಳ್ ಅವರ ಮನೆಯಿಂದ ಗಲಾಟೆ ಕೇಳಿದ ನೆರೆಹೊರೆಯವರು ಗಾಯಾಳು ಅನುಸೂಯಳನ್ನು ಉತ್ತಂಗರೈ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಆದರೆ, ಕನ್ನಮ್ಮಾಳ್ ಹಾಗೂ ಸುಭಾಷ್‌ನನ್ನು ಬದುಕಿಸಲು ಅವರಿಗೆ ಸಾಧ್ಯವಾಗಿಲ್ಲ. ಅವರನ್ನು ಸಹ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಜ್ಜಿ ಹಾಗೂ ಮೊಮ್ಮಗ ಮೃತಪಟ್ಟಿದ್ದಾರೆ ಎಂದು ಅಲ್ಲಿ ಘೋಷಿಸಲಾಗಿದೆ. ಸದ್ಯ, ಅನುಸೂಯ ಸ್ಥಿತಿ ಸಹ ಗಂಭೀರವಾಗಿದೆ.
ಇದನ್ನೂ ಓದಿ: ಅನ್ಯಜಾತಿ ಯುವಕರೊಂದಿಗೆ ಪ್ರೀತಿ: ಪೋಷಕರಿಂದಲೇ 18, 16ರ ಇಬ್ಬರು ಹೆಣ್ಣು ಮಕ್ಕಳ ಹತ್ಯೆ
ಇನ್ನು, ಈ ಪ್ರಕರಣ ಸಂಬಂಧ ಉತ್ತಂಗರೈ ಸಬ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಜಿ.ಅಮರ್ ಆನಂದ್ ಉತ್ತಂಗರೈ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಅನಸೂಯಾಳ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ಸಹ ದಾಖಲಾಗಿದ್ದು, ಅನುಸೂಯ ದಾಖಲಾಗಿರುವ ಉತ್ತಂಗರೈ ಆಸ್ಪತ್ರೆ ಎದುರು ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
Crime News: ಬಾಗಲಕೋಟೆಯಲ್ಲಿ ಮರ್ಯಾದೆ ಹತ್ಯೆ: ಅಳಿಯನನ್ನೇ ಕೊಂದ ಪಾಪಿ ಮಾವ