* ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂತು ಹೀನಾಯ ಘಟನೆ* ವ್ಯಕ್ತಿಯ ಜಾತಿ ಕೇಳಿ ಥಳಿಸಿದ ಗುಂಪು* ವೈರಲ್ ಆಯ್ತು ಘಟನೆಯ ವಿಡಿಯೋ

ಲಕ್ನೋ(ಜು.10): ಉತ್ತರ ಪ್ರದೇಶದ ಕಾನ್ಪುರದಲ್ಲಿ ದಲಿತ ವ್ಯಕ್ತಿ ಮೇಲೆ ದಾಳಿ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಕಾನ್ಪುರದಲ್ಲಿ ನಡೆದ ಈ ಅಮಾನವೀಯ ಘಟನೆಯ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮತ್ತೊಬ್ಬನ ಬಳಿ ಜಾತಿ ಯಾವುದೆಂದು ಪ್ರಶ್ನಿಸಿದ್ದು, ಆ ವ್ಯಕ್ತಿ ತಾನು ದಲಿತ ಎನ್ನುತ್ತಿದ್ದಂತೆಯೇ ಆತನನ್ನು ಥಳಿಸುವ ದೃಶ್ಯಗಳಿವೆ. ದಲಿತನೆಂಬ ಕಾರಣಕ್ಕೆ ಗುಂಪೊಂದು ವ್ಯಕ್ತಿಯನ್ನು ಹಿಗ್ಗಮುಗ್ಗಾ ಥಳಿಸಿದ್ದು, ಆತನ ಗುಪ್ತಾಂಗಕ್ಕೂ ದೊಣ್ಣೆಯಿಂದ ಹೊಡೆದಿದ್ದಾರೆ. ಬಳಿಕ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
Scroll to load tweet…

ಕಾನ್ಪುರದ ದೇಹಾತ್‌ನಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ವ್ಯಕ್ತಿ ಓರ್ವ ದಿನಗೂಲಿ ಕಾರ್ಮಿಕ ಎನ್ನಲಾಗಿದೆ. ಆರೋಪಿಗಳು ವ್ಯಕ್ತಿಯನ್ನು ಚಪ್ಪಲಿ, ದೊಣ್ಣೆ ಹೀಗೆ ಕೈಗೆ ಸಿಕ್ಕ ವಸ್ತುಗಳಲ್ಲಿ ಹೊಡೆದಿದ್ದಾರೆ. ಈ ನಡುವೆ ಆರೋಪಿಗಳಲ್ಲೊಬ್ಬಾತ ಸಂಸತ್ರಸ್ತನ ಗುಪ್ತಾಂಗಕ್ಕೆ ದೊಣ್ಣೆ ಹಾಕಲು ಯತ್ನಿಸಿದ್ದಾನೆ. ಹೀಗಿರುವಾಗ ಸಂತ್ರಸ್ತ ನೋವಿನಿಂದ ಅಳುತ್ತಿರುವ ಧ್ವನಿಯೂ ವಿಡಿಯೋದಲ್ಲಿದೆ. ಈ ಘಟನೆ ಎರಡು ದಿನ ಹಿಂದಿನದ್ದೆನ್ನಲಾಗಿದೆ.

ಇನ್ನು ಪ್ರೇಮ ಪ್ರಸಂಗಕ್ಕೆ ಸಂಬಂಧಿಸಿದಂತೆ ಈ ಜಗಳ ನಡೆದಿದೆ ಎಂದೂ ಹೇಳಲಾಗಿದೆ. ಯುವಕ ಮೇಲ್ಜಾತಿ ಯುವತಿಯನ್ನು ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ಆತನಿಗೆ ಥಳಿಸಲಾಗಿದೆ ಎನ್ನಲಾಗಿದೆ.