100 ರೂಪಾಯಿಗಾಗಿ ಸಂಬಲ್ಪುರ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿಯ ಹತ್ಯೆ!
- ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದ ಉಪ ಕುಲಪತಿಯ ಹತ್ಯೆ
- 100 ರೂಪಾಯಿಗೆ ಬೇಡಿಕೆ ಇಟ್ಟು ಹತ್ಯೆ ಮಾಡಿದ ಯುವಕರ ಗುಂಪು
- ಮನೆಗೆ ನುಗ್ಗಿ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಹಂತಕರು
ಒಡಿಶಾ(ಜೂ.27): ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದ, ಪ್ರೋಫೆಸರ್, ಒಡಿಶಾದ ಸಂಬಲ್ಪುರ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಧುರ್ಬ ರಾಜ್ ನಾಯಕ್ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಯುವಕರ ಗುಂಪೊಂದು ರಾಜ್ ನಾಯಕ್ ಮನೆಗೆ ನುಗ್ಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದೆ.
ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ ಕೇಸ್: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ
ಜಾರ್ಸಗುದ ಜಿಲ್ಲೆಯಲ್ಲಿರುವ ವಿಶ್ರಾಂತಿ ಜೀವನದಲ್ಲಿರುವ ಮಾಜಿ ಉಪಕುಲಪತಿ ಧುರ್ಬ ರಾಜ್ ನಾಯಕ್ ಯುವಕರ ಗುಂಪಿನಿಂದ ಕೊಲೆಯಾಗಿರುವುದೇ ಕೇವಲ 100 ರೂಪಾಯಿಗಾಗಿ ಅನ್ನೋದನ್ನು ಪೊಲೀಸರು ಹೇಳಿದ್ದಾರೆ. ಮನೆಯಲ್ಲಿ ಕುಲಪತಿ ಪತ್ನಿ, ಪುತ್ರಿ ಹಾಗೂ ಪುತ್ರಿಯ ಗಂಡ ಮನೆಯಲ್ಲಿದ್ದ ವೇಳೆ ರಾಜ್ ನಾಯಕ್ ಹತ್ಯೆಯಾಗಿದೆ.
ನೇರವಾಗಿ ಮನೆಗೆ ನುಗ್ಗಿದ ಯುವಕರ ಗುಂಪು ಎದುರಿಗಿದ್ದ ಧುರ್ಬ ರಾಜ್ ನಾಯಕ್ ಅವರನ್ನು ಹಿಡಿದು ಥಳಿಸಲು ಆರಂಭಿಸಿದ್ದಾರೆ. ಈ ವೇಳೆ 100 ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಯುವಕರನ್ನು ಮನೆಯಿಂದ ಹೊರಹೋಗುವಂತೆ ಗದರಿಸಿದ ಉಪಕುಲಪತಿಗಳ ಕತ್ತು ಹಿಡಿದು ಮನೆಯೊಳಕ್ಕೆ ಎಳೆದೊಯ್ದು ಯುವಕರ ಗುಂಪು, ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾರೆ.
ಮಾಸ್ಕ್ ಇಲ್ಲದೆ ಬ್ಯಾಂಕ್ ಪ್ರವೇಶ; ಗ್ರಾಹಕನ ಮೇಲೆ ಗುಂಡು ಹಾರಿಸಿದ ಸೆಕ್ಯೂರಿಟಿ ಗಾರ್ಡ್!.
ಮನೆಯೊಳಗಿದ್ದ ಕುಟುಂಬ ಸದಸ್ಯರು ರೂಮಿನತ್ತ ಧಾವಿಸಿದ್ದಾರೆ. ಅಷ್ಟರಲ್ಲಿ ಯುವಕರ ಗುಂಪು ಕೊಲೆಗೈದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜ್ ನಾಯಕ್ ಅವರನ್ನು ಸಮಲೇಶ್ವರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರೊಳಗೆ ಮಾಜಿ ಉಪ ಕುಲಪತಿ ಪ್ರಾಣ ಪಕ್ಷಿ ಹಾರಿಹೋಗಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ಇದೀಗ ಪ್ರಕರಣ ತನಿಖೆ ಚುರುಕುಗೊಳಿಸುವ ಪೊಲೀಸರು ತೀವ್ರ ವಿಚಾರಣೆ ಆರಂಭಿಸಿದ್ದಾರೆ.