Vijayapura: ಪರೀಕ್ಷೆಯಲ್ಲಿ ಕಡಿಮೆ ಅಂಕ, ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!
ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಚಡಚಣ ಪಟ್ಟಣದ ನೇಕಾರ ಕಾಲೋನಿಯ ಕೀರ್ತನಾ ಮಧುಕರ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ (ನ.10): ಪರೀಕ್ಷೆಯಲ್ಲಿ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತಾ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ತಾರೆ. ಪರೀಕ್ಷೆಯಲ್ಲಿ ಫೇಲಾದ್ವಿ ಇಲ್ಲಿಗೆ ಲೈಫ್ ಕೊನೆ ಎಂದು ವಿದ್ಯಾರ್ಥಿಗಳು ಆತ್ಮಹತ್ಯೆ ಶರಣಾಗುವ ತಪ್ಪು ನಿರ್ಧಾರ ತೆಗೆದುಕೊಳ್ತಾರೆ. ಆದ್ರೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ವಿದ್ಯಾರ್ಥಿನಿಯೊಬ್ಬರು ನಿರೀಕ್ಷಿತ ಅಂಕ ಬರಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಡಿಮೆ ಅಂಕ, ನೊಂದ ವಿಧ್ಯಾರ್ಥಿನಿ ಆತ್ಮಹತ್ಯೆ: ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಚಡಚಣ ಪಟ್ಟಣದ ನೇಕಾರ ಕಾಲೋನಿಯ ಕೀರ್ತನಾ ಮಧುಕರ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮನೆಯಲ್ಲಿ ಯಾರು ಇರದೆ ಇದ್ದಾಗ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಯವರು ಬಂದು ನೋಡಿದಾಗ ವಿಚಾರ ಗೊತ್ತಾಗಿದೆ.
Vijayapura: ಗುಮ್ಮಟನಗರಿಯಲ್ಲಿ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ!
ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿ: ಕೀರ್ತನಾ ವಿಜಯಪುರದ ಬಿಎಲ್ಡಿಇ ನರ್ಸಿಂಗ್ ಕಾಲೇಜ್ ನಲ್ಲಿ ಎರಡನೇ ವರ್ಷದ ನರ್ಸಿಂಗ್‌ನಲ್ಲಿ ಓದುತ್ತಿದ್ದರು. ಚೆನ್ನಾಗಿಯೇ ಓದುತ್ತಿದ್ದ ಕೀರ್ತನಾಗೆ ಉತ್ತಮ ಫಲಿತಾಂಶ ಸಿಗುವ ನಿರೀಕ್ಷೆ ಇತ್ತು. ಆದ್ರೆ ರಿಸಲ್ಟ್ ಬಂದಾಗ ಕೀರ್ತನಾ ಮನಸ್ಸಿಗೆ ನೋವಾಗಿತ್ತು. ನಿರೀಕ್ಷೆಯಷ್ಟು ಫಲಿತಾಂಶ ಸಿಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಫ್ಯಾನ್‌ಗೆ ನೇಣು ಹಾಕಿಕೊಂಡ ವಿದ್ಯಾರ್ಥಿನಿ: ಇನ್ನೂ ಪರೀಕ್ಷೆಗಳಲ್ಲಿ ನಿರೀಕ್ಷಿತ ಅಂಕ ಬರದೆ ಇದ್ದಾಗ, ಪರೀಕ್ಷೆಯಲ್ಲಿ ಪಾಸ್ ಆಗದೆ ಇದ್ದಾಗ ನೋವಾಗೋದು ಸಹಜ. ಇದು ಪ್ರತಿ ವಿದ್ಯಾರ್ಥಿಗಳ ಶೈಕ್ಷಣಿಕ ಹಂತದಲ್ಲಿ ಇರೋದೆ. ಹಾಗೇ ಕೀರ್ತನಾಳಿಗು ಪರೀಕ್ಷೆಯ ಫಲಿತಾಂಶ ಬಂದಾಗ ನಿರೀಕ್ಷೆಯಷ್ಟು ಅಂಕಗಳು ಬಂದಿರಲಿಲ್ಲ. ಇದರಿಂದ ಮನನೊಂದಿದ್ದ ಕೀರ್ತನಾ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲು: ಕೀರ್ತನಾ ಅನಿರೀಕ್ಷಿತ ಸಾವಿನಿಂದಾಗಿ ಪೋಷಕರಿಗೆ ಶಾಕ್ ಆಗಿದೆ. ಮುಗಿಲೆ ಕತ್ತರಿಸಿ ತಲೆಯ ಮೇಲೆ ಬಿದ್ದಂತಾಗಿದೆ. ಮಗಳ ಸಾವಿನಿಂದ ಪೋಷಕರು ಕಂಗಾಲಾಗಿದ್ದಾರೆ. ಚಿಕ್ಕವಯಸ್ಸಿನಲ್ಲಿ ಸಾವಿನಂತ ತಪ್ಪು ನಿರ್ಧಾರ ತೆಗೆದುಕೊಂಡ ಕೀರ್ತನಾಳ ಸಾವು ಕುಟುಂಬಸ್ಥರನ್ನ ನೋವಿನಲ್ಲಿ ಮುಳುಗಿಸಿದೆ. ಈ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಬಿಜೆಪಿ ಬಿರುಗಾಳಿಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದೆ'
ಆತ್ಮಹತ್ಯೆಯೊಂದೆ ಪರಿಹಾರ ಅಲ್ಲ: ಇನ್ನೂ ಪರೀಕ್ಷೆಯಲ್ಲಿ ಪಾಸ್ ಆದಾಗ ಇರುವಷ್ಟು ಖುಷಿ ವಿದ್ಯಾರ್ಥಿಗಳಿಗೆ ಪೇಲ್ ಆದಾಗ ನೋವು ಕೂಡ ಅಷ್ಟೆ ಇರುತ್ತೆ. ಹಾಗಂತ ಅದು ಜೀವನದ ಕೊನೆಯಾಗಬಾರದು. ಪರೀಕ್ಷೆಯಲ್ಲಿ ಪಾಸ್ ಆದಾಗ ಗೆಲುವು, ಪೇಲ್ ಆದಾಗ ಸೋಲು ಇದ್ದದ್ದೆ. ಸೋಲೆ ಗೆಲುವಿನ ಮೆಟ್ಟಿಲು ಎನ್ನುವಂತೆ ಎದುರಿಸುವ ಕೆಲಸವನ್ನ ವಿದ್ಯಾರ್ಥಿಗಳು ಮಾಡಬೇಕು. ಆದ್ರೆ ಈ ಪ್ರಕರಣದಲ್ಲಿ ಕೀರ್ತನಾ ಪ್ರಾಣ ಬಿಡುವಂತ ಗಂಭೀರತೆ ಏನು ಇರಲಿಲ್ಲ. ಪರೀಕ್ಷೆಯಲ್ಲಿ ಫೇಲ್ ಆಗಿಲ್ಲ ಬದಲಿಗೆ ಕಡಿಮೆ ಅಂಕ ಬಂದಿವೆ. ಇದನ್ನ ಸರಿ ಮಾಡಿಕೊಳ್ಳಲು ಮುಂದೆ ಅವಕಾಶಗಳಿದ್ದವು. ಸಾಧನೆ ನೂರು ದಾರಿಗಳಿದ್ದವು. ಈ ರೀತಿಯ ನಿರ್ಧಾರ ತೆಗೆದುಕೊಂಡಿರೋದು ಇತರೆ ವಿದ್ಯಾರ್ಥಿಗಳ ಮನೋಬಲವನ್ನೆ ಕುಸಿಯುವ ಹಾಗೇ ಮಾಡಿದೆ. ಪೋಷಕರು ಸಹ ಪರೀಕ್ಷೆಯಲ್ಲಿ ಮಕ್ಕಳು ಕಡಿಮೆ ಅಂಕ ತೆಗೆದಾಗ, ಅಥವಾ ಫೇಲ್ ಆದಾಗ ಬಯ್ಯದೆ ಧೈರ್ಯ ಹೇಳಿ ಮುನ್ನಡೆಸಬೇಕು. ಇಲ್ಲದೇ ಹೋದ್ರೆ ಇಂಥ ಅನಾಹುತಗಳು ತಪ್ಪಿದಲ್ಲ.