ಗಂಡನ ಮನೆಯಲ್ಲಿ ಟಾಯ್ಲೆಟ್ ಇಲ್ಲದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ!

ಮಹಿಳೆಗೆ ಶೌಚಗೃಹ ಇಲ್ಲದ ಕಾರಣ ಕಡಲೂರಿನಲ್ಲಿರುವ ತನ್ನ ಗಂಡನ ಮನೆಯಲ್ಲಿ ಇರಲು ಸಾಧ್ಯವಾಗಲಿಲ್ಲ. ಇದು ಆಕೆ ಆತ್ಮಹತ್ಯೆಯಂಥ ನಿರ್ಧಾರ ತೆಗೆದುಕೊಳ್ಳಲು ಪ್ರೇರಣೆ ನೀಡಿದೆ.
 

No toilet at husbands house Newly wed woman dies by suicide in Tamil Nadu san

ಚೆನ್ನೈ (ಮೇ.10): ಗಂಡನ ಮನೆಯಲ್ಲಿ ಶೌಚಾಲಯ (Toilet) ಇಲ್ಲದಿರುವ ಕಾರಣಕ್ಕೆ ಮನನೊಂದ 27 ವರ್ಷದ ಮಹಿಳೆಯೊಬ್ಬರು ತಮಿಳುನಾಡಿನ (Tamilnadu) ಕಡಲೂರಿನಲ್ಲಿ (cuddalore ) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ (Ramya) ಏಪ್ರಿಲ್ 6 ರಂದು ಕಾರ್ತಿಕೇಯನ್ ಅವರನ್ನು ವಿವಾಹವಾಗಿದ್ದರು. ಈಕೆ ಕಡಲೂರು ಜಿಲ್ಲೆಯ ಅರಿಸಿಪೆರಿಯಂಕುಪ್ಪಂ ಗ್ರಾಮದವರಾಗಿದ್ದಾರೆ.

ಮೂಲಗಳ ಪ್ರಕಾರ, ರಮ್ಯಾ ತನ್ನ ಗಂಡನ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಮದುವೆಯ ನಂತರ ತನ್ನ ತಾಯಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದಳು. ರಾಜ್ಯದ ರಾಜಧಾನಿಯಿಂದ ಸುಮಾರು 4 ಗಂಟೆಗಳ ದೂರದಲ್ಲಿರುವ ಕಡಲೂರು ನಗರದಲ್ಲಿ ಶೌಚಾಲಯವಿರುವ ಮನೆಯನ್ನು ಹುಡುಕುವಂತೆ ಕಾರ್ತಿಕೇಯನ್ ಅವರನ್ನು ಕೇಳಿದ್ದಳು, ಇದು ಅವರ ನಡುವೆ ಪದೇ ಪದೇ ವಾದಗಳನ್ನು ಉಂಟುಮಾಡಿತು.

ಸೋಮವಾರ, ರಮ್ಯಾ ಅವರು ಮನೆಯ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ತಾಯಿ ನೋಡಿದ್ದಾರೆ. ಕೂಡಲೇ ಆಕೆಯನ್ನು ಕಡಲೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ರಮ್ಯಾ ಅವರನ್ನು ಪಾಂಡಿಚೇರಿಯ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (ಜಿಪ್‌ಮರ್) ಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು  ಸಾವು ಕಂಡಿದ್ದಾರೆ.

JUNIOR RAVICHANDRAN ವಿದ್ಯುತ್ ತಗುಲಿ ಜ್ಯೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಸಾವು!

ರಮ್ಯಾ ಕಡಲೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು, ಎರಡು ವರ್ಷಗಳಿಂದ ಕಾರ್ತಿಕೇಯನ್ ರನ್ನು ಪ್ರೀತಿಸುತ್ತಿದ್ದ ಈಕೆ,  ಪೋಷಕರ ಒಪ್ಪಿಗೆ ಪಡೆದು ಎಪ್ರಿಲ್ 6ರಂದು ಮದುವೆ ಮಾಡಿಕೊಂಡಿದ್ದರು. ಮದುವೆಯಾದ ಮರುದಿನವೇ ಗಂಡನ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ರಮ್ಯಾ ಮತ್ತೆ ಅಮ್ಮನ ಮನೆಗೆ ತೆರಳಿದ್ದರು.

ಮರಳು ಅಡ್ಡೆ ಕಿಂಗ್ ಪಿನ್‌ಗೆ ಮತ್ತೊಂದು ಸಂಕಷ್ಟ, ಕೋಟಿ-ಕೋಟಿ ಹಣ ಹೋಗಿದ್ದು ಎಲ್ಲಿಗೆ?

ಆಕೆಯೊಂದಿಗೆ ಮಾತನಾಡಿದ್ದ ಕಾರ್ತಿಕೇಯನ್ ಆದಷ್ಟು ಬೇಗ ಶೌಚಾಲಯವಿರುವ ಮನೆಯನ್ನು ಬಾಡಿಗೆಗೆ ಪಡೆದುಕೊಳ್ಳುವುದಾಗಿ ಹೇಳಿದ್ದರು. ಆದರೆ, ಕಾರ್ತಿಕೇಯನ್ ಹೊಸ ಮಡೆ ಬಾಡಿಗೆಗೆ ಪಡೆದುಕೊಳ್ಳುವ ಪ್ರಯತ್ನವಾಗಲಿ, ಮನೆಯಲ್ಲೇ ಶೌಚಾಲಯ ಕಟ್ಟುವ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದ ಮನನೊಂದ ರಮ್ಯಾ ಮೇ 10ರಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗಳನ್ನು ನೋಡಿದ ಆಕೆಯ ತಾಯಿ ಮಂಜುಳಾ ಅವರು ನೆರೆಹೊರೆಯವರ ಸಹಾಯದಿಂದ ಮಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆರಂಭದಲ್ಲಿ ಆಕೆಯನ್ನು ಕಡಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಪಾಂಡಿಚೇರಿಯ ಜಿಪ್ಮರ್‌ಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಮಂಗಳವಾರ ನಿಧನರಾದರು.  ರಮ್ಯಾಳ ತಾಯಿ ಮಂಜುಳಾ ತಿರುಪತಿರುಪುಲಿಯೂರು ಪೊಲೀಸ್ ಠಾಣೆಗೆ ಅಳಿಯನ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ವರದಕ್ಷಿಣೆ-ಕೋನದಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios