ಬೆಂಗಳೂರು: ವಂಶಿಕಾ, ನಟರ ಹೆಸರಿನಲ್ಲಿ 40 ಲಕ್ಷ ವಂಚಿಸಿದ ನಿಶಾ

ಚಲನಚಿತ್ರ ನಟ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಿನಲ್ಲಿ ನಿಶಾ ನರಸಪ್ಪ ವಂಚಿಸಿರುವ ಬಗ್ಗೆ ತನಿಖೆ ಮುಂದುವರೆದಿದೆ. ತನಿಖೆ ಪೂರ್ಣಗೊಂಡ ಬಳಿಕ ಎಷ್ಟುಮಂದಿ ಹಣ ಕಳೆದುಕೊಂಡಿದ್ದಾರೆ ಎಂದು ಸ್ಪಷ್ಟವಾಗಿ ಗೊತ್ತಾಗಲಿದೆ: ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ 

Nisha Cheated 40 Lakhs in the Name of Actors in Bengaluru grg

ಬೆಂಗಳೂರು(ಜು.26):  ಚಲನಚಿತ್ರ ನಟರ ಹೆಸರು ಬಳಸಿಕೊಂಡು ಕಿರುತೆರೆ ಹಾಗೂ ರಿಯಾಲಿಟಿ ಶೋಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಪೋಷಕರಿಂದ ಸುಮಾರು 30 ರಿಂದ 40 ಲಕ್ಷ ರುಪಾಯಿ ಪಡೆದು ಆರೋಪಿ ನಿಶಾ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸಗೌಡ ಅವರು, ಚಲನಚಿತ್ರ ನಟ ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಿನಲ್ಲಿ ನಿಶಾ ನರಸಪ್ಪ ವಂಚಿಸಿರುವ ಬಗ್ಗೆ ತನಿಖೆ ಮುಂದುವರೆದಿದೆ. ತನಿಖೆ ಪೂರ್ಣಗೊಂಡ ಬಳಿಕ ಎಷ್ಟುಮಂದಿ ಹಣ ಕಳೆದುಕೊಂಡಿದ್ದಾರೆ ಎಂದು ಸ್ಪಷ್ಟವಾಗಿ ಗೊತ್ತಾಗಲಿದೆ ಎಂದರು.

ನಿಶಾ ವಂಚನೆ ಪುರಾಣ ಮತ್ತಷ್ಟು ಬಯಲು: ಹಣ ಕೊಟ್ಟವರಿಗೆ ರಾಜಕಾರಣಿಗಳ ಹೆಸರಲ್ಲಿ ಬೆದರಿಕೆ..?

ಈವರೆಗೆ ನಿಶಾ ಅವರಿಂದ ಮೋಸ ಹೋಗಿರುವುದಾಗಿ 50 ರಿಂದ 60 ದೂರುಗಳು ದಾಖಲಾಗಿವೆ. ಇವುಗಳನ್ನು ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಇದುವರೆಗೆ ನಿಶಾ ಸುಮಾರು .40 ಲಕ್ಷ ವಂಚಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಹಣವನ್ನು ಐಷರಾಮಿ ಜೀವನಕ್ಕೆ ಆರೋಪಿ ವಿನಿಯೋಗಿಸಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.

ತಮ್ಮ ಮಗಳ ಮತ್ತು ಬಾಲನಟಿ ವಂಶಿಕಾ ಹೆಸರು ಬಳಸಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದಾಳೆ ಎಂದು ಆರೋಪಿಸಿ ಇವೆಂಟ್‌ ಮ್ಯಾನೇಜ್ಮೆಂಟ್‌ ಸಂಸ್ಥೆಯ ಮುಖ್ಯಸ್ಥೆ ನಿಶಾ ನರಸಪ್ಪ ವಿರುದ್ಧ ಸದಾಶಿವನಗರ ಠಾಣೆಗೆ ಮಾಸ್ಟರ್‌ ಆನಂದ್‌ ಪತ್ನಿ ಯಶಸ್ವಿನಿ ದೂರು ನೀಡಿದ್ದರು. ಈ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

Latest Videos
Follow Us:
Download App:
  • android
  • ios