ನೈಜೀರಿಯಾ ಮೂಲದ ವನೂಕ್‌ ಅಕ್ಬೂಯ್‌ ಬಂಧಿತ ಆರೋಪಿಯಿಂದ 3 ಲಕ್ಷ ರು. ಮೌಲ್ಯದ ಡ್ರಗ್ಸ್‌ ಜಪ್ತಿ ಯಲಹಂಕದ ಕಾಲೇಜೊಂದರ ಬಳಿ ಡ್ರಗ್ಸ್ ಮಾರಾಟ

ಯಲಹಂಕ(ಜ.24): ಕಾಲೇಜುವೊಂದರ ಬಳಿ ಡ್ರಗ್ಸ್‌ ಮಾರಾಟ(Drugs sale) ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಮಾದಕ ದ್ರವ್ಯ ನಿಗ್ರಹ ವಿಶೇಷ ದಳ ಬಂಧಿಸಿದೆ. ನೈಜೀರಿಯಾ(nigeria ) ಮೂಲದ ವನೂಕ್‌ ಅಕ್ಬೂಯ್‌ ಬಂಧಿತ. ಆರೋಪಿಯಿಂದ 3 ಲಕ್ಷ ರು. ಮೌಲ್ಯದ ಡ್ರಗ್ಸ್‌ ಜಪ್ತಿ(drugs seized) ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೆಡಿಕಲ್‌ ವೀಸಾ ಮೇಲೆ ಬೆಂಗಳೂರಿಗೆ ಬಂದಿದ್ದ ವನೂಕ್‌, ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ದಂಧೆ ನಡೆಸುತ್ತಿದ್ದ.

ರಾಜಾನುಕುಂಟೆ ಪೊಲೀಸ್‌(Police) ಠಾಣಾ ವ್ಯಾಪ್ತಿಯ ಪ್ರೆಸಿಡೆನ್ಸಿ ಕಾಲೇಜು(College) ಬಳಿ ಆರೋಪಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸರ ತಂಡ ಡ್ರಗ್ಸ್‌ ಖರೀದಿ ನೆಪದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಹಿಂದೆ ವ್ಯವಸ್ಥಿತ ಜಾಲ ಕಾರ್ಯ ನಿರ್ವಹಿಸುತ್ತಿದ್ದು, ದಂಧೆಯ ಕಿಂಗ್‌ಪಿನ್‌ ಫಿನ್ನಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru Drug Bust: ಜೈಲು ಪಾಲಾದ ಲೀಡರ್‌ಗೆ ಬೇಲ್‌ ಕೊಡಿಸಲು ಶಿಷ್ಯರಿಂದ ಡ್ರಗ್ಸ್‌ ದಂಧೆ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಡ್ರಗ್ಸ್ ಪ್ರಕರಣ ಪಟ್ಟಿ:
ಆಂಧ್ರದಿಂದ ಗಾಂಜಾ ತರಿಸಿ ನಗರದಲ್ಲಿ ಮಾರ್ತಿದ್ದವರ ಸೆರೆ
ಡ್ರಗ್ಸ್ ಮಾರಾಟ ಜಾಲ ಕುರಿತು ಹಲವು ಪ್ರಕರಣಗಳು ವರದಿಯಾಗುತ್ತಲೇ ಇದೆ. ಮಾದನಾಯಕಹಳ್ಳಿ ಪೊಲೀಸರು ಇಬ್ಬರು ಪೆಡ್ಲರ್‌ಗಳನ್ನು ಇತ್ತೀಚೆಗೆ ಬಂಧಿಸಲಾಗಿದೆ. ಆರೋಪಿಗಳಿಂದ 3 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ವಿ.ಕೋಟಾ ಮೂಲದ ಮೊಯಿನ್‌(28), ಹೊಸಕೋಟೆಯ ರಿಯಾಜ್‌(40) ಬಂಧಿತರು. ಆರೋಪಿಗಳು ಆಂಧ್ರದಿಂದ ಗಾಂಜಾ ತರಿಸಿ, ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ದೊರೆತ ಖಚಿತ ಮಾಹಿತಿ ಆಧರಿಸಿ ಮಾದನಾಯಕನಹಳ್ಳಿ ಠಾಣೆ ವೃತ್ತ ನಿರೀಕ್ಷಕ ಬಿ.ಎಸ್‌.ಮಂಜುನಾಥ್‌ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ, ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Drugs Cases: ಕಳೆದ ವರ್ಷ ಅತೀ ಹೆಚ್ಚು ಡ್ರಗ್ಸ್‌ ಕೇಸ್‌ ದಾಖಲು!

ಡ್ರಗ್ಸ್‌ ದಂಧೆಗಿಳಿದಿದ್ದ ಸಪ್ಲೈಯರ್‌ ಬಂಧನ
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಕರಣವಿದು. ನಗರದಲ್ಲಿ ಹೆರಾಯಿನ್‌ ಮಾರಾಟಕ್ಕೆ ಯತ್ನಿಸಿದ್ದ ವ್ಯಕ್ತಿಯೊಬ್ಬ ಹಲಸೂರು ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಮಣಿಪುರ ಮೂಲದ ಬುಗಿ ದೌಲತ್‌ ಖಾನ್‌ ಬಂಧಿತನಾಗಿದ್ದು, ಆರೋಪಿಯಿಂದ 1.3 ಲಕ್ಷ ರು. ಮೌಲ್ಯದ 60 ಗ್ರಾಂ ಹೆರಾಯಿನ್‌ ಜಪ್ತಿ ಮಾಡಲಾಗಿದೆ. ತನ್ನ ಗ್ರಾಹಕರಿಗೆ ಹಲಸೂರು ಬಸ್‌ ನಿಲ್ದಾಣ ಸಮೀಪ ಡ್ರಗ್ಸ್‌ ಪೂರೈಸಲು ಗುರುವಾರ ಬಂದಿದ್ದಾಗ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಣಿಪುರ ಮೂಲದ ದೌಲತ್‌ ಖಾನ್‌, ಶಿವಾಜಿನಗರ ಸಮೀಪ ಬಾಡಿಗೆ ರೂಮ್‌ನಲ್ಲಿ ನೆಲೆಸಿದ್ದ. ಹೋಟೆಲ್‌ನಲ್ಲಿ ಸಪ್ಲೈಯರ್‌ ಆಗಿದ್ದ ಆತ, ಸುಲಭವಾಗಿ ಹಣ ಸಂಪಾದನೆ ಸಲುವಾಗಿ ಡ್ರಗ್ಸ್‌ ದಂಧೆಗಳಿದಿದ್ದಾನೆ. ತನ್ನೂರು ಮಣಿಪುರದಲ್ಲಿ ಕಡಿಮೆ ಬೆಲೆಗೆ ಹೆರಾಯಿನ್‌ ಖರೀದಿಸಿ ಬಳಿಕ ರೈಲಿನಲ್ಲಿ ನಗರಕ್ಕೆ ಆರೋಪಿ ತರುತ್ತಿದ್ದ. ಹೋಟೆಲ್‌ನಲ್ಲಿ ಕೆಲಸ ಮಾಡುವವರ ಮೂಲಕ ಗ್ರಾಹಕರಿಗೆ ಆತ ದುಬಾರಿ ಬೆಲೆಗೆ ಹೆರಾಯಿನ್‌ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಈ ಬಗ್ಗೆ ಖಚಿತ ಸುಳಿವು ಲಭ್ಯವಾಯಿತು. ಎರಡು ದಿನಗಳ ಹಿಂದಷ್ಟೇ ಮಣಿಪುರಕ್ಕೆ ಹೋಗಿದ್ದ ಖಾನ್‌ ನಗರಕ್ಕೆ ಮರಳಿದ್ದ. ಆಗ ಬಾತ್ಮೀದಾರರು ಹಲಸೂರು ಬಸ್‌ ನಿಲ್ದಾಣದ ಬಳಿ ಆರೋಪಿ ಬರುವ ಬಗ್ಗೆ ನೀಡಿದ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಡ್ರಗ್ಸ್ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಬಹುದೊಡ್ಡ ಜಾಲವೊಂದು ಇದರ ಹಿಂದಿದೆ ಅನ್ನೋದು ಜಗಜ್ಜಾಹೀರಾಗಿರುವ ಸತ್ಯ. ಈ ಕುರಿತು ಕಠಿಣ ಕ್ರಮದ ಅಗತ್ಯವಿದೆ.