Asianet Suvarna News Asianet Suvarna News

ಯಮನಾಗಿ ಬಂದ ಕಾಂಕ್ರೀಟ್ ಮಿಕ್ಸರ್ ಟ್ರಕ್.. ತಪ್ಪಿಲ್ಲದಿದ್ದರೂ ನವದಂಪತಿ ದುರಂತ ಅಂತ್ಯ

* ಭೀಕರ ರಸ್ತೆ ಅಪಘಾತದಲ್ಲಿ ದಂಪತಿ ದುರ್ಮರಣ
* ಮೂರು ದಿನದ  ಹಿಂದೆ ವಿವಾಹವಾಗಿದ್ದ ದಂಪತಿ
* ಯಮನ ರೂಪದಲ್ಲಿ ಬಂದ ಕಾಂಕ್ರೀಟ್ ಮಿಕ್ಸರ್ ಟ್ರಕ್
* ಕಾರಿನ ಮೇಲೆ ಪಲ್ಟಿಯಾದ ಟ್ರಕ್

Newly weds crushed to death after concrete mixer falls on car mah
Author
Bengaluru, First Published Nov 2, 2021, 9:41 PM IST
  • Facebook
  • Twitter
  • Whatsapp

ಚೆನ್ನೈ(ನ. 02)  ಘೋರ ದುರಂತ ನಡೆದು ಹೋಗಿದೆ. ನವದಂಪತಿ(Couple) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.  ಮೂರು ದಿನದ ಹಿಂದಷ್ಟೇ ಮದುವೆಯಾಗಿದ್ದ(Marriage) ಜೋಡಿ ತಮಿಳುನಾಡಿನ (Tamilnadu) ಮಪ್ಪೆಡು ಬಳಿಯ ಪೆರುಂಬಕ್ಕಂ-ಅರಕ್ಕೋಣಂ ರಸ್ತೆಯಲ್ಲಿ ನಡೆದ ಘೋರ ಅಪಘಾತದಲ್ಲಿ (Death) ಮೃತರಾಗಿದ್ದಾರೆ.

ಅರಕ್ಕೋಣಂನ ಎಂ.ಮನೋಜ್ ಕುಮಾರ್(31), ಚೆನ್ನೈನ ಪೆರುಂಬಕ್ಕಂನ ಕಾರ್ತಿಕಾ(30) ಸಾವನ್ನಪ್ಪಿದ್ದಾರೆ.  ದಂಪತಿ ಚೆನ್ನೈನಿಂದ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಯಮನ ರೂಪದಲ್ಲಿ ಬಂದ ಕಾಂಕ್ರೀಟ್ ಮಿಕ್ಸರ್ ಟ್ರಕ್  ಇವರು ಸಂಚರಿಸುತ್ತಿದ್ದ ಕಾರಿನ ಮೇಲೆ  ಬಿದ್ದಿದೆ.  ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ

ಭೀಕರ ರಸ್ತೆ ಅಪಘಾತ: ಮಾಜಿ ಮಿಸ್ ಕೇರಳ ಅನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಬಲಿ!

ಸುಮಾರು ಎರಡು ಗಂಟೆಗೂ ಅಧಿಕ ಕಾಲ  ಹರಸಾಹಸ ಮಾಡಿ ಕಾಂಕ್ರಿಟ್ ತುಂಬಿದ ಲಾರಿಯನ್ನು ತೆರವು ಮಾಡಲಾಯಿತು. ಮಪ್ಪೆಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ತಿರುವಳ್ಳೂರು ಆಸ್ಪತ್ರೆಗೆ  ರವಾನಿಸಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಕೇರಳದ ಭೀಕರ ಅಪಘಾತ;  2019ರ ಮಿಸ್ ಕೇರಳ(Miss Kerala-2019) ವಿಜೇತೆ ಅನ್ಸಿ ಕಬೀರ್(Ansi Kabeer) ಹಾಗೂ ರನ್ನರ್-ಅಪ್ ಅಂಜನಾ ಶಾಜನ್ (Anjana Shajan) ಕೊಚ್ಚಿ ಸಮೀಪದ ವಿಟಿಲ್ಲಾದಲ್ಲಿ ಸೋಮವಾರ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು.

ಎರ್ನಾಕುಲಂನ ವೈಟ್ಟಿಲಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ (Ansi Kabeer) ಮತ್ತು ರನ್ನರ್ ಅಪ್ ಅಂಜನಾ ಶಾಜನ್ (Anjana Shajan) ಮೃತಪಟ್ಟಿದ್ದಾರೆ. ಎರ್ನಾಕುಲಂನ ವೈಟ್ಟಿಲಾದಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಕಾರು ಪಲ್ಟಿಯಾಗಿತ್ತು.

2019 ರ ಸೌಂದರ್ಯ ಸ್ಪರ್ಧೆಯಲ್ಲಿ ಅನ್ಸಿ ಮತ್ತು ಅಂಜನಾ ವಿಜೇತರು ಮತ್ತು ರನ್ನರ್ ಅಪ್ ಆಗಿದ್ದರು. 25 ವರ್ಷದ ಅನ್ಸಿ ತಿರುವನಂತಪುರಂನ ಅಲಂಕೋಡ್‌ ಹಾಗೂ 26 ವರ್ಷದ ಅಂಜನಾ ತ್ರಿಶೂರ್‌ ಮೂಲದವರು. ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿತ್ತು.

ಬೆಂಗಳೂರಿನ ಘಟನೆಗಳು;  ಬೆಂಗಳೂರಿನಲ್ಲಿ ಐಷಾರಾಮಿ ಕಾರು ಅಅಪಘಾತಕ್ಕೆ ಗುರಿಯಾ ಐದು ಮಂದಿ ಸಾಔನ್ನಪ್ಪಿದ್ದರು. ಇದಾದ ಮೇಲೆ ಮೇತ್ಸೇತುವೆ ಮೇಲೆ ನಡೆದ ದುರಂತ ಸಹ ಮಾಸಿಲ್ಲ. ಕೆಲವೊಮ್ಮೆ ತಮ್ಮ ತಪ್ಪು ಇಲ್ಲದಿದ್ದರೂ ಅಮಾಯಕರು ರಸ್ತೆ ಅಪಘಾಥದಲ್ಲಿ ಬಲಿಯಾಗಬೇಕಾಗುತ್ತದೆ. 

Follow Us:
Download App:
  • android
  • ios