Chamarajanagar: ಪ್ರಾಣ ಭಯದಿಂದ ಕಂಗಾಲಾದ ಜೋಡಿ ಹಕ್ಕಿ: ಪೊಲೀಸರಿಗೆ ಮೊರೆ ಇಟ್ಟ ನವದಂಪತಿ

*  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಘಟನೆ
*  ವಿವಾಹಿತ ಪ್ರೇಮಿಗಳಿಗೆ ಜೀವ ಬೆದರಿಕೆ
*  ಇಬ್ಬರೂ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಮದುವೆಗೆ ವಿರೋಧ

Newly Married Couple Request to Police For Protection in Chamarajanagar grg

ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಮಾ.25): ಇವರು ಪ್ರೀತಿಸಿ(Love) ಓಡಿ ಹೋಗಿ ಮನೆಯವರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳು. ಆದರೀಗ ಹುಡುಗಿಯ ಪೋಷಕರಿಂದ ಈಗ ಈ ವಿವಾಹಿತ ಪ್ರೇಮಿಗಳಿಗೆ ಜೀವ ಬೆದರಿಕೆ(Life Threatening) ಇದೆ. ಸ್ವಚ್ಚಂದವಾಗಿ ಓಡಾಡಿಕೊಂಡಿರಬೇಕಾದ ಈ ಜೋಡಿ ಹಕ್ಕಿ ಸದಾ ಭಯದಲ್ಲೇ ಅಡ್ಡಾಡುತ್ತಾ ಕಂಗಾಲಾಗಿದೆ.ವ ಈ ರಕ್ಷಣೆಗಾಗಿ ಅಲೆದಾಡುತ್ತಿರುವ ಈ ವಿವಾಹಿತ ಪ್ರೇಮಿಗಳು ಇದೀಗ  ಪೊಲೀಸರ(Police) ಮೊರೆ ಹೋಗಿದ್ದಾರೆ.

ಕಾರಣ ಎನು ಅಂತೀರಾ?.

ಚಾಮರಾಜನಗರ(Chamarajanagar) ಜಿಲ್ಲೆ ಹನೂರು ತಾಲೂಕಿನ ಹುತ್ತೂರು ಗ್ರಾಮದ ಗೌರಿ(ಹೆಸರು ಬದಲಾಯಿಸಲಾಗಿದೆ) ಹಾಗೂ ಪಿ.ಜಿ.ಪಾಳ್ಯ ಗ್ರಾಮದ ಪ್ರೇಮ್‌ಕುಮಾರ್ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದು ಇವರಿಬ್ಬರ ಮದುವೆಗೆ ಪೋಷಕರ ವಿರೋಧವಿತ್ತು. ಹಾಗಾಗಿ ಗೌರಿ ಅವರ ಪೋಷಕರು ಬೇರೊಬ್ಬ ಹುಡುಗನೊಂದಿಗೆ ಮದುವೆ ಮಾಡಲು ನಿರ್ಧರಿಸಿ ಎಂಗೇಜ್‌ಮೆಂಟ್ ಸಹ ಆಗಿತ್ತು. ಬಳಿಕ ಗುಂಡಾಲ್ ಜಲಾಶಯದ ಬಳಿ ಪ್ರೀ ವೆಡ್ಡಿಂಗ್ ಶೂಟ್‌ಗು(Pre Wedding Shoot) ಕಳುಹಿಸಿದ್ದರು. ಇದೇ ವೇಳೆ ಗೌರಿ ತನ್ನ ಪ್ರೇಮಿ ಪ್ರೇಮ್‌ಕುಮಾರ್‌ಗೆ ಕರೆ ಮಾಡಿ ಸಿನಿಮೀಯ ರೀತಿಯಲ್ಲಿ ಆತನೊಂದಿಗೆ ಓಡಿ ಹೋಗಿ ರಾಮನಗರದಲ್ಲಿ ಮದುವೆಯಾಗಿದ್ದರು.

Bengaluru: ಮನೆಯಲ್ಲಿ ಯಾರೂ ಇಲ್ಲದಾಗ ಮಹಿಳಾ ಟೆಕ್ಕಿ ಆತ್ಮಹತ್ಯೆ: ಕಾರಣ ನಿಗೂಢ..?

ಇತ್ತ ಗೌರಿ ಪೋಷಕರು ತಮ್ಮ ಮಗಳನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಪ್ರಕರಣ ದಾಖಲಿಸಿಕೊಂಡ ಕೊಳ್ಳೇಗಾಲ ಪೊಲೀಸರು ವಿವಾಹಿತ ಪ್ರೇಮಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ತನ್ನನ್ನು ಯಾರು ಬಲವಂತ ವಾಗಿ ಕರೆದೊಯ್ದಿಲ್ಲ, ಪ್ರೇಮ್‌ಕುಮಾರ್‌ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ, ಆತನ ಜೊತೆಯೇ ಹೋಗುವುದಾಗಿ ಗೌರಿ  ಹೇಳಿಕೆ ನೀಡಿದ್ದಳು. ಇದಕ್ಕೆ ಈಕೆಯ ಪೋಷಕರು ಒಲ್ಲದ  ಮನಸ್ಸಿನಿಂದಲೇ ಒಪ್ಪಿಕೊಂಡಿದ್ದರು. ಆದರೆ ಇದೀಗ ಗೌರಿ ಪೋಷಕರು ತಿರುಗಿಬಿದ್ದಿದ್ದು ಈ ಜೋಡಿ ಹಕ್ಕಿಗೆ ಜೀವ ಬೆದರಿಕೆ ಹಾಕಿದ್ದಾರಂತೆ.

ಅಷ್ಟೇ ಅಲ್ಲ, ನಮ್ಮ ಹುಡುಗಿಯನ್ನು ವಾಪಸ್ ಕಳುಹಿಸಿ, ಇಲ್ಲದಿದ್ದರೆ ಮನೆಗೆ ನುಗ್ಗಿ ಎಲ್ಲರನ್ನೂ ಮುಗಿಸಿಬಿಡುವುದಾಗಿ ಗೌರಿ ಪೋಷಕರು, ಪ್ರೇಮ್‌ಕುಮಾರ್ ಪೋಷಕರಿಗೆ ಧಮ್ಕಿ ಹಾಕಿದ್ದಾರಂತೆ. ಪ್ರೀತಿಸಿ ಮದುವೆಯಾದ ಈ ಜೋಡಿಗೆ ಈಗ ಜೀವಭಯ ಕಾಡತೊಡಗಿದೆ.ಸದಾ ಜೀವಭಯದಲ್ಲೇ ಕಾಲ ಕಳೆಯುತ್ತಿರುವ ಈ ಪ್ರೇಮಿಗಳು ಪ್ರಾಣ ರಕ್ಷಣೆಗೆ ಅಲೆದಾಡುತ್ತಾ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. 

Bengaluru Crime: ಚಿನ್ನ ದೋಚಿದ್ದವರ ಸುಳಿವು ನೀಡಿದ ವಿಸಿಟಿಂಗ್‌ ಕಾರ್ಡ್‌!

ಚಪ್ಪಲಿ ಸ್ಟ್ಯಾಂಡಲ್ಲಿ ಕೀ ಇಡೋರ ಮನೆಗೆ ಕನ್ನ ಹಾಕ್ತಿದ್ದ ಖತರ್ನಾಕ್‌ ಕಳ್ಳಿ ಅರೆಸ್ಟ್‌..!

ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕೀ ಹುಡುಕಿ ಬಾಗಿಲು ತೆರೆದು ಹಾಡಹಗಲೇ ಕಳವು(Theft) ಮಾಡಿ ಪರಾರಿಯಾಗುತ್ತಿದ್ದ ಖತರ್ನಾಕ್‌ ಕಳ್ಳಿಯೊಬ್ಬಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ಕಾವಲು ಬೈರಸಂದ್ರದ ಜಯಂತಿ ಅಲಿಯಾಸ್‌ ಕುಟ್ಟಿಯಮ್ಮ(31) ಬಂಧಿತ ಕಳ್ಳಿ. ಈಕೆ ನೀಡಿದ ಮಾಹಿತಿ ಮೇರೆಗೆ 75 ಗ್ರಾಂ ಚಿನ್ನಾಭರಣ, 638 ಗ್ರಾಂ ಬೆಳ್ಳಿ ಅಭರಣಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬೈರಪ್ಪ ಗಾರ್ಡನ್‌ ಮತ್ತು ಎಎಂಎಸ್‌ ಲೇಔಟ್‌ನ ಎರಡು ಮನೆಗಳಲ್ಲಿ ಹಾಡಹಗಲೇ ಮನೆಗಳ್ಳತನ(House Theft) ನಡೆದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು(Accused) ಬಂಧಿಸಲಾಗಿದೆ(Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಜಯಂತಿ ವೃತ್ತಿಪರ ಕಳ್ಳಿಯಾಗಿದ್ದು, ವಿದ್ಯಾರಣ್ಯಪುರ, ಡಿ.ಜೆ.ಹಳ್ಳಿ ಸೇರಿದಂತೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 23 ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಈಕೆ, ಜಾಮೀನು(Bail) ಪಡೆದು ಹೊರಬಂದ ಬಳಿಕವೂ ತನ್ನ ಕೆಟ್ಟಚಾಳಿ ಮುಂದುವರಿಸಿದ್ದಳು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
 

Latest Videos
Follow Us:
Download App:
  • android
  • ios