ಮಗುವಿಗೆ ಜನ್ಮ ನೀಡಿದ ಬೆನ್ನಲ್ಲಿಯೇ ಸಾವು ಕಂಡ ತಾಯಿ, ನವಜಾತ ಶಿಶುವನ್ನು ಬೇರೊಬ್ಬರಿಗೆ ಮಾರಿದ ನರ್ಸ್!
ಸೆಪ್ಟೆಂಬರ್ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಅಕ್ಟೋಬರ್ 1 ರಂದು ಸಾವು ಕಂಡಿದ್ದಾಳೆ. ಇಬ್ಬರು ನರ್ಸ್‌ಗಳು ಆಕೆಯ ಹೆರಿಗೆಯನ್ನು ಮನೆಯಲ್ಲಿಯೇ ಮಾಡಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ರಾಂಚಿ (ಅ.6): ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಸಾವು ಕಂಡಿದ್ದಾಳೆ. ಇದರ ಬೆನ್ನಲ್ಲಿಯೇ ಮಗುವನ್ನು ಬೇರೊಬ್ಬರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ರಾಂಚಿನ ಪೊಲೀಸರು ಇಬ್ಬರು ನರ್ಸ್‌ಗಳು ಸೇರಿದಂತೆ ಮೂವರು ಮಹಿಳೆಯನ್ನು ಬಂಧಿಸಿದ್ದಾರೆ. ಶುಕ್ರವಾರಸ ಸಂಜೆಯ ವೇಳೆಗೆ ಇವರನ್ನು ರಾಂಚಿಯಲ್ಲಿಯೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಮನೋಹರಪುರದಲ್ಲಿ ಪ್ರಕರಣ ದಾಖಲಾಗಿದೆ. ಮುನ್ನಿ ಚಾಂಪಿಯಾ ಎಂಬ ಯುವತಿ ಹೆರಿಗೆಯಾದ ಕೂಡಲೇ ಸಾವನ್ನಪ್ಪಿದ್ದಾಳೆ. ಈ ಪ್ರದೇಶದಲ್ಲಿ ನರ್ಸ್ ಆಗಿರುವ ಇಬ್ಬರು ಮಹಿಳೆಯರು ಮನೆಯಲ್ಲಿಯೇ ಆಕೆಗೆ ಹೆರಿಗೆ ಮಾಡಿಸಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಸೆಪ್ಟೆಂಬರ್ 30 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಆಕೆ, ಅಕ್ಟೋಬರ್ 1 ರಂದು ಸಾವು ಕಂಡಿದ್ದರು. ಆ ಬಳಿಕ ಈ ಇಬ್ಬರು ನರ್ಸ್‌ಗಳು ಮಗುವನ್ನು ನೆರೆಯ ಜಿಲ್ಲೆಯಲ್ಲಿ ವಾಸಿಸುವ ಗುಡ್ಡಿ ಗುಪ್ತಾ ಎಂಬ ಮಹಿಳೆಗೆ ಮಾರಾಟ ಮಾಡಿದ್ದಾರೆ. ಆದರೆ, ದಿನಗಳು ಕಳೆದರೂ ಮಗು ಒಂದೇ ಸಮನೆ ಅಳುವುದು ಹಾಗ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಗುಡ್ಡಿ ಗುಪ್ತಾ ಮಗುವನ್ನು ಹಿಂತಿರುಗಿಸಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಶುಗಳನ್ನು ಖರೀದಿಸಿದ ಮಹಿಳೆ ಮತ್ತು ಮಾರಾಟ ಮಾಡಿದ ಇಬ್ಬರು ನರ್ಸ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಉಪ ಪೊಲೀಸ್ ಆಯುಕ್ತರು, ಹೆರಿಗೆ ಬಳಿಕ ಮೃತಪಟ್ಟ ಮಹಿಳೆ ಅವಿವಾಹಿತೆಯಾಗಿದ್ದು, ತಂದೆ-ತಾಯಿಯ ಮರಣದ ನಂತರ ಆಕೆ ತನ್ನ ತಾಯಿಯ ಸಂಬಂಧಿಯೊಂದಿಗೆ ವಾಸಿಸುತ್ತಿದ್ದಳು ಎಂದು ತಿಳಿಸಿದ್ದಾರೆ.
ಬಡ್ಡಿ ಹಣದ ವಿಚಾರವಾಗಿ ಗಲಾಟೆ: ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು
ಕೆಲವು ತಿಂಗಳ ಹಿಂದೆ ನಡೆದ ಕೇರಳದಲ್ಲಿ ಇಂಥದ್ದೇ ಘಟನೆ ನಡೆಸಿತ್ತು. ತಿರುವನಂತಪುರಂ ಥೈಕ್ಕಾಡ್‌ನಲ್ಲಿ ತಾಯಿ ಮತ್ತು ಮಗು ಹೆರಿಗೆಯಾದ ತಕ್ಷಣ ತಮ್ಮ ನವಜಾತ ಶಿಶುವನ್ನು ಮಾರಾಟ ಮಾಡಿದ್ದರು. ನೆರೆಮನೆಯ ಮಹಿಳೆಯೊಬ್ಬರು ಹಣ ಕೊಟ್ಟು ಮಗುವನ್ನು ಖರೀದಿ ಮಾಡಿದ್ದರು. ಮಾರಾಟ ಮಾಡುತ್ತಿರುವ ವಿಷಯ ತಿಳಿದ ಚೈಲ್ಡ್ ಲೈನ್ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 3 ಲಕ್ಷ ಕೊಟ್ಟು ಮಗುವನ್ನು ಖರೀದಿಸಿರುವುದಾಗಿಯೂ ಮಹಿಳೆ ಒಪ್ಪಿಕೊಂಡಿದ್ದಳು.
ಅಪರಿಚಿತರನ್ನು ಕೆಲಸಕ್ಕೆ ಸೇರಿಸಿಕೊಳ್ಳೋ ಮುನ್ನ ಹುಷಾರ್: ಉಂಡ ಮನೆಗೆ ದ್ರೋಹ ಬಗೆದ ಖದೀಮರು ಅರೆಸ್ಟ್