* ಕಾಲೇಜು ಮುಂಭಾಗ ಹಸುಗೂಸು ಪತ್ತೆ* 2 ದಿನದ ಹೆಣ್ಣು ಮಗುವನ್ನು ಕಾಲೇಜು ಮುಂಭಾಗ ಬಿಟ್ಟು ಹೋಗಿರುವ ಪಾಪಿ ಪೋಷಕರು* ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ* ಮಂಗಳವಾರ ರಾತ್ರಿ ಪತ್ತೆಯಾದ 2 ದಿನದ ಕಂದಮ್ಮ

ಬೆಂಗಳೂರು(ಆ. 25) ಕಾಲೇಜು ಮುಂಭಾಗ ಹಸುಗೂಸು ಪತ್ತೆಯಾಗಿದೆ. 2 ದಿನದ ಹೆಣ್ಣು ಮಗುವನ್ನು ಕಾಲೇಜು ಮುಂಭಾಗ ಪಾಪಿ ಪೋಷಕರು ಬಿಟ್ಟು ಹೋಗಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಿಸಿ ಕಬ್ಬಿಣ ಇಟ್ಟ ತಾಯಿ; ಹೆಣ್ಣು ಮಗು ಸಾವು

ಮಂಗಳವಾರ ರಾತ್ರಿ ಹಸುಗೂಸು ಪತ್ತೆಯಾಗಿದೆ ಸದ್ಯ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಿರುವ ಪೊಲೀಸರು ರಕ್ಷಣೆ ಮಾಡಿದ್ದಾರೆ ಹೆಣ್ಣು ಮಗು ಜನನ ಹಿನ್ನೆಲೆ ಬಿಟ್ಟು ಹೋಗಿಗಿರುವ ಅನುಮಾನ ವ್ಯಕ್ತವಾಗಿದೆ. ಯಾವ ಆಸ್ಪತ್ರೆಯಿಂದ ತರಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ. 

ಹಿಂದೊಮ್ಮೆ ಇದೇ ರೀತಿ ಪ್ರಕರಣ ನಡೆದಿದ್ದು ಪಾಪಿ ಪೋಷಕರು ಮಗುವನ್ನು ರಾಜಕಾಲುವೆಯಲ್ಲಿ ಎಸೆದು ಪರಾರಿಯಾಗಿದ್ದರು