ಶಿಕಾ​ರಿ​ಪು​ರ​ದಲ್ಲಿ ಪೊಲೀ​ಸರ ನಿರ್ಲ​ಕ್ಷ್ಯ: ಹೆಚ್ಚಿದ ಮೊಬೈಲ್‌ ಕಳವು ಪ್ರಕ​ರ​ಣ!

ಕಿಡಿ​ಗೇ​ಡಿ​ಯೊಬ್ಬ ಹೋಟೆಲ್‌ ಮಾಲೀಕರ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡು ಪರಾರಿಯಾದ ಘಟನೆ ಬುಧವಾರ ಬೆಳಗ್ಗೆ 10 ಗಂಟೆ ವೇಳೆಯಲ್ಲಿ ಪಟ್ಟಣದಲ್ಲಿ ನಡೆದಿದೆ. ಪುರಸಭೆ ಎದುರಿನ ಸಣ್ಣ ಹೋಟೆಲ್‌ ಮಾಲೀಕ ಗೋಪಾಲಕೃಷ್ಣ ಹೆಬ್ಬಾರ್‌ ಕೌಂಟರ್‌ನಲ್ಲಿ ಪೋನ್‌ ಹಿಡಿದು ಕೂತಿದ್ದರು.

Negligence of the police in Shikaripur case of increased mobile theft gvd

ಶಿಕಾರಿಪುರ (ಮೇ.19): ಕಿಡಿ​ಗೇ​ಡಿ​ಯೊಬ್ಬ ಹೋಟೆಲ್‌ ಮಾಲೀಕರ ಕೈಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡು ಪರಾರಿಯಾದ ಘಟನೆ ಬುಧವಾರ ಬೆಳಗ್ಗೆ 10 ಗಂಟೆ ವೇಳೆಯಲ್ಲಿ ಪಟ್ಟಣದಲ್ಲಿ ನಡೆದಿದೆ. ಪುರಸಭೆ ಎದುರಿನ ಸಣ್ಣ ಹೋಟೆಲ್‌ ಮಾಲೀಕ ಗೋಪಾಲಕೃಷ್ಣ ಹೆಬ್ಬಾರ್‌ ಕೌಂಟರ್‌ನಲ್ಲಿ ಪೋನ್‌ ಹಿಡಿದು ಕೂತಿದ್ದರು. ‘ದೋಸೆ ಇದೆಯಾ?’ ಎಂದು ವಿಚಾರಿಸಿದ ಅಪರಿಚಿತ ವ್ಯಕ್ತಿ ಮಾಲೀಕರು ಅತ್ತ ತಿರುಗಿದಾಗ ಕೈಯಲ್ಲಿನ ಫೋನ್‌ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಇಂಥದ್ದೇ ಘಟನೆ ಇದೇ ರಸ್ತೆಯ ಭೂತಪ್ಪ ದೇವರ ಎದುರಿನಲ್ಲಿ ಬಸವ ಜಯಂತಿ ರಾತ್ರಿ ನಡೆದಿದೆ. 

ಮಂಜುನಾಥ್‌ ಎಂಬವರು ಬೈಕ್‌ನಲ್ಲಿ ಫೋನ್‌ನಲ್ಲಿ ಮಾತನಾಡುತ್ತ ಸಾಗುತ್ತಿರುವಾಗಲೆ ಫೋನ್‌ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಕಳ್ಳರ ಬೈಕ್‌ ಬೆನ್ನತ್ತಿದರೂ ಪ್ರಯೋಜನ ಆಗಿಲ್ಲ. ಪಲ್ಸರ್‌ ಬೈಕ್‌ನಲ್ಲಿದ್ದ ಇಬ್ಬರೂ ವೇಗವಾಗಿ ಹೋಗಿದ್ದಾರೆ. ರಾಘವೇಂದ್ರಸ್ವಾಮಿ ಮಠ ಸಮೀಪ ಶಿವು ಎಂಬವರ ಮೊಬೈಲ್‌ ಕಿತ್ತುಕೊಳ್ಳುವ ಕಿಡಿ​ಗೇ​ಡಿ​ಗಳ ಪ್ರಯತ್ನ ವಿಫಲವಾಗಿದೆ. ಮೇ 8ರಂದು ಚಿತ್ರನಟ ಸುದೀಪ್‌ ನಡೆಸಿದ ಚುನಾವಣೆ ಪ್ರಚಾರದಂದು ನಾಗರಾಜ್‌ ಎಂಬವರ ಮೊಬೈಲ್‌ ಕಿತ್ತುಕೊಂಡುಹೋಗಿದ್ದಾರೆ. ರೋಡ್‌ ಶೋ ಸಂದರ್ಭದಲ್ಲಿ 10ಕ್ಕೂ ಹೆಚ್ಚು ಮೊಬೈಲ್‌ಗಳ ಕಳ್ಳತನ ಆಗಿದೆ. ಮೇ 6ರ ಸಂತೆಯಂದೂ ಅಶೋಕ್‌ ಎಂಬವವರ ಮೊಬೈಲ್‌ ಕದಿಯಲಾಗಿದೆ. 

ಒಳಒಪ್ಪಂದವೆಂಬ ಬಿಜೆಪಿ ಆರೋ​ಪ​ ಸತ್ಯಕ್ಕೆ ದೂರ: ಜೆಡಿ​ಎಸ್‌ ಶಾಸಕಿ ಶಾರದಾ ಪೂರ್ಯನಾಯ್ಕ್

ಶಿರಾಳಕೊಪ್ಪದಲ್ಲಿ ವಿಮಲ್‌ ಗುಟ್ಕಾ ಮಾರಾಟ ಮಾಡಿದ ಹಣ ತೆಗೆದುಕೊಂಡು ಬರುತ್ತಿದ್ದ ವಾಹನದಲ್ಲಿದ್ದ .9 ಲಕ್ಷ ಹಣವಿದ್ದ ಬ್ಯಾಗ್‌ ಬೈಕ್‌ ಸವಾರರು ಎಗ​ರಿ​ಸಿ​ಕೊಂಡು ಹೋಗಿದ್ದಾರೆ. ತಾಲೂಕಿನಲ್ಲಿ ಹೆಲ್ಮೆಟ್‌ ಧರಿಸಿದ ಇಬ್ಬರು ಪಲ್ಸರ್‌ ಬೈಕ್‌ ಸವಾರರು ಇನ್ನೆಷ್ಟು ಮೊಬೈಲ್‌, ಹಣ ಕದ್ದಿರಬಹುದು ಎನ್ನುವ ಅನುಮಾನ ಸಾರ್ವಜನಿಕರಿಗೆ ಕಾಡುತ್ತಿದೆ. .9 ಲಕ್ಷ ನಗದು ಕಳ್ಳತನ ಹೊರತುಪಡಿಸಿ ಇನ್ನಾವುದೇ ಪ್ರಕರಣ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿಲ್ಲ ಎನ್ನುವುದು ಹಲವು ಅನುಮಾನಗಳಿ​ಗೆ ಕಾರಣವಾಗಿದೆ. ಮೊಬೈಲ್‌ ಕಳೆದುಕೊಂಡು ಠಾಣೆಗೆ ಹೋದ ಯಾರಿಂದಲೂ ಪೊಲೀಸರು ದೂರು ಪಡೆದಿಲ್ಲ. ಎಲ್ಲರಿಗೂ ಆನ್‌ಲೈನ್‌ನಲ್ಲಿ ದೂರು ದಾಖಲಿಸಲು ಸೂಚಿಸಲಾಗಿದೆ. ಕೆಎಸ್‌ಪಿ ಇ-ಲಾಸ್ಟ್‌ನಲ್ಲಿ ದೂರು ದಾಖಲಿಸಿ, ಸಿಇಐಆರ್‌ ಆಪ್‌ನಲ್ಲಿ ವಿವರ ದಾಖಲಿಸಲು ಸೂಚಿಸಲಾಗುತ್ತಿದೆ.

ಬಿಜೆಪಿ ಸೋಲಿಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಕಾರಣ: ಕುಮಾರ್‌ ಬಂಗಾರಪ್ಪ

ವಿವಿ​ಧೆಡೆ ಕಳ್ಳರು ಮೊಬೈಲ್‌ ಕಿತ್ತುಕೊಂಡು ಹೋಗಿರು​ವ ಘಟನೆಗಳು ನಾಗರಿಕರಿಗೆ ಭಯ ಉಂಟುಮಾಡಿವೆ. ಪೊಲೀಸ್‌ ಠಾಣೆಗೆ ದೂರು ಕೊಡಲು ಹೋಗು​ವ​ವ​ರಿಗೆ ಪೊಲೀ​ಸರು ಆಪ್‌, ಆನ್‌ಲೈನ್‌ ಕಥೆ ಹೇಳುತ್ತಿದ್ದಾರೆ. ಮೊಬೈಲ್‌ ಕಳೆದುಕೊಂಡವರು ಹೊಸ ಫೋನ್‌ ತೆಗೆದುಕೊಂಡು ನಂತರ ಆನ್‌ಲೈನ್‌ನಲ್ಲಿ ದೂರು ದಾಖಲಿಸಬೇಕು. ಇದು ಪೊಲೀಸರ ನೀತಿಯಾಗಿ​ದ್ದು, ಅದು ಬದಲಾಗಬೇಕು. ತಪ್ಪಿದಲ್ಲಿ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ಅನಿವಾರ್ಯ
- ಗೋಪಾಲಕೃಷ್ಣ ಹೆಬ್ಬಾರ್‌, ಶಿಕಾರಿಪುರ

Latest Videos
Follow Us:
Download App:
  • android
  • ios