* ಸುಶಾಂತ್ ಸಿಂಗ್ ಸಾವು ಮತ್ತು ಬಾಲಿವುಡ್ ಡ್ರಗ್ಸ್ ಪ್ರಕರಣ * ಸುಶಾಂತ್ ಒಂದು ಕಾಲದ ಗೆಳೆಯ ಸಿದ್ಧಾರ್ಥ್ ಪಿಠಾಣಿ ಬಂಧನ* ಸಿದ್ಧಾರ್ಥ್ 14 ದಿನ ನ್ಯಾಯಾಂಗ ಬಂಧನಕ್ಕೆ
ಮುಂಬೈ (ಜೂ. 04) ನಟ ಸುಶಾಂತ್ ಸಿಂಗ್ ರಾಜಪೂತ್ ಸಾವು ಮತ್ತು ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸುಶಾಂತ್ ಒಂದು ಕಾಲದ ಗೆಳೆಯ ಸಿದ್ಧಾರ್ಥ್ ಪಿಠಾಣಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ವಾರ ಪಿಠಾಣಿಯನ್ನು ಹೈದ್ರಾಬಾದ್ ನಲ್ಲಿ NCB(ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ತಂಡ ಬಂಧಿಸಿತ್ತು. ನಂತರ ಮುಂಬೈಗೆ ಕರೆದುಕೊಂಡು ಹೋಗಿ ವಿಚಾರಣೆ ಆರಂಭಿಸಿತ್ತು. ಇದಕ್ಕೂ ಒಂದು ವಾರ ಮುನ್ನ ಸಿದ್ಧಾರ್ಥ್ ಪಿಠಾಣಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಒಂದು ಕಾಲದ ಗೆಳತಿ ರಿಯಾ ಹಂಚಿಕೊಂಡ ಸಂದೇಶ
ಸುಶಾಂತ್ ಸಾವಿನ ಬಳಿಕ ಅವರ ಡೆಡ್ ಬಾಡಿಯನ್ನು ಮೊದಲಿಗೆ ನೋಡಿದ್ದು ಸಿದ್ಧಾರ್ಥ್ ಎಂಬ ಮಾಹಿತಿ ಇದೆ. ಪೊಲೀಸರಿಗೆ ಆಸ್ಪತ್ರೆಗೆ ಫೋನ್ ಮಾಡಿ ವಿಚಾರ ತಿಳಿಸಿದ್ದವ ಈತನೇ.
ಸುಶಾಂತ್ ಸಿಂಗ್ ನಿಗೂಢ ಸಾವಿನ ಬಳಿಕ ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಸ್ಫೋಟಗೊಂಡಿತ್ತು. ಸೆಲೆಬ್ರಿಟಿಗಳು ಡ್ರಗ್ಸ್ ಪೆಡ್ಲರ್ ಜತೆ ಸಂಪರ್ಕದಲ್ಲಿದ್ದಾರೆ, ಸರಬರಾಜು ಮಾಡುವ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪಗಳು ಬಂದಿದ್ದವು. ಸುಶಾಂತ್ ಒಂದು ಕಾಲದ ಗೆಳತಿ ರಿಯಾ ಚಕ್ರವರ್ತಿ ಡ್ರಗ್ಸ್ ಕೇಸಿಗೆ ಸಂಬಂಧಿಸಿ ಜೈಲುವಾಸ ಅನುಭವಿಸಿ ಬಂದಿದ್ದರು. ವಿವಿಧ ಕೋನದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಿಚಾರಣೆ ನಡೆಸುತ್ತಲೆ ಇದೆ.
