ದಕ್ಷಿಣ ನೇವಲ್ ಕಮಾಂಡ್‌ನ ಆಸ್ಪತ್ರೆಯಲ್ಲಿ ಒಡಿಶಾ ಮೂಲದ ನೌಕಾಸೇನೆಯ ಅಧಿಕಾರಿ ಅನುಮಾನಾಸ್ಪದವಾಗಿ ಸಾವು ಕಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಕೊಚ್ಚಿ (ಜೂನ್ 20): ಒಡಿಶಾ ಮೂಲಕ 44 ವರ್ಷದ ನೌಕಾಪಡೆಯ ಅಧಿಕಾರಿ ಸೋಮವಾರ ಇಲ್ಲಿನ ನೌಕಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ದಕ್ಷಿಣ ನೇವಲ್ ಕಮಾಂಡ್ (SNC) ತಿಳಿಸಿದೆ.
ಒಡಿಶಾ ಮೂಲದ ಲೆಫ್ಟಿನೆಂಟ್ ಕಮಾಂಡರ್ ಸಂತೋಷ್ ಕುಮಾರ್ ಪಾತ್ರೋ ಸೋಮವಾರ ಮುಂಜಾನೆ ನೌಕಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ನೌಕಾಪಡೆಯ ಪ್ರಕಟಣೆ ತಿಳಿಸಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಸ್ಥಳೀಯ ಪೊಲೀಸರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನೌಕಾಪಡೆ ತಿಳಿಸಿದೆ. ಈ ಬಗ್ಗೆ ದಕ್ಷಿಣ ನೇವಲ್ ಕಮಾಂಡ್ ಕೂಡ ತನಿಖೆಗೆ ಆದೇಶಿಸಿದೆ.
ಕಳೆದ ವರ್ಷ 19 ವರ್ಷದ ಉತ್ತರ ಪ್ರದೇಶ ಆಲಿಗಢ ಮೂಲದ ಸೈಲರ್, ಕೊಚ್ಚಿಯ ನೇವಲ್ ಬೇಸ್ ನಲ್ಲಿ ಬುಲೆಟ್ ಗಳಿಂದ ಆದ ಗಾಯದಿಂದಾಗಿ ಸಾವು ಕಂಡಿದ್ದರು.
