Asianet Suvarna News Asianet Suvarna News

ಚಿಕ್ಕಮಗಳೂರು: ನ್ಯಾಷನಲ್ ಕಬ್ಬಡಿ ಆಟಗಾರ ನೇಣಿಗೆ ಶರಣು

ಚಿಕ್ಕಮಗಳೂರು ನಗರದ ಹೊರವಲಯದ ತೇಗೂರು ಗ್ರಾಮದ ವಿನೋದ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ತೇಗೂರು ಗ್ರಾಮದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 

National Kabbadi player Committed Suicide in Chikkamagaluru grg
Author
First Published Feb 6, 2024, 9:04 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.06): ದಾಂಪತ್ಯ ಜೀವನದಲ್ಲಿ ವೈಫಲ್ಯ ಕಂಡ ರಾಷ್ಟ್ರಮಟ್ಟದ ಕಬ್ಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಹೊರವಲಯದ ತೇಗೂರು ಗ್ರಾಮದ ವಿನೋದ್ (24) ಆತ್ಮಹತ್ಯೆಗೆ ಶರಣಾಗಿದ್ದಾನೆ. ತೇಗೂರು ಗ್ರಾಮದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 

ಮದುವೆಯಾದ ತಿಂಗಳಲ್ಲಿಯೇ ಆತ್ಮಹತ್ಯೆಗೆ ಶರಣು : 

ವಿನೋದ್ ರಾಜ್ ಅರಸ್ ಕಾಫಿನಾಡು ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ತೇಗೂರಿನವ್ನು..ಈತ ಚಿಕ್ಕಮಗಳೂರಿನ ಸ್ನೇಹಿತರು ಆಪ್ತರೆಲ್ಲರೂ ಹೇಳ್ತಿದ್ದೇ ಇತನ ಕಬ್ಬಡಿ ರೈಡ್ ನದ್ದೇ..ಜಿಲ್ಲೆಯಾಯ್ತು.ರಾಜ್ಯ ಮಟ್ಟದಲ್ಲಿಯೂ ಹೋದ.ಕೊನೆಗೆ ಹರಿಯಾಣದಲ್ಲಿ ರಾಷ್ಟ್ರೀಯ  ಮಟ್ಟದಲ್ಲಿಯೂ ಆಟವಾಡಿದ..ಇದೊಂದು ಕಾಫಿ ನಾಡಿನ ಕಬ್ಬಡಿ ಪ್ರತಿಭೆಯಾಗಿ ಒಂದಲ್ಲ ಒಂದು ದಿನ ಆರಳುತ್ತೇ ಅಂತಾ ಅಂದುಕೊಂಡವರಿಗೆಲ್ಲರೂ ಶಾಕ್ ಅಗಿರೋದು ಅತನ ಅದೊಂದು ನಿರ್ಧಾರ.ಆ ನಿರ್ಧಾರೇ ಅತ್ಮಹತ್ಯೆಗೆ ಶರಣಾಗಿದ್ದು...ಹೌದು ನ್ಯಾಷಿನಲ್ ಕಬ್ಬಡಿ ಆಟಗಾರ ವಿನೋದ್ ರಾಜ್ ಅರಸ್ ಅತ್ಮಹತ್ಯೆಗೆ ಕಾರಣವೇ ಅತ ಪ್ರೀತಿಸಿ ಮದ್ವೇಯಾಗಿದ್ದಳೇ ಅನ್ನೋದು ಕುಟುಂಬಸ್ಥರ ಆರೋಪ. 

ಕನಕಪುರ: ತಾಲೂಕು ಕಚೇರಿಯಲ್ಲೇ ಚುನಾವಣಾ ಶಾಖಾ ಸಿಬ್ಬಂದಿ ನೇಣು ಬಿಗಿದು ಆತ್ಮಹತ್ಯೆ!

ಮದುವೆಯಾದ ತಿಂಗಳಲ್ಲಿಯೇ ಆತ್ಮಹತ್ಯೆಗೆ ಶರಣು : 

ವಿನೋದ್ ರಾಜ್ ಅರಸ್ ತೇಗೂರು ಮೂಲದ ಯುವತಿಯನ್ನ ನಾಲ್ಕು  ವರ್ಷದಿಂದ ಪ್ರೀತಿಸ್ತಾ ಇದ್ನಂತೆ ಆ ಪ್ರೀತಿ ಮದ್ವೆ ಹಂತಕ್ಕೂ ಬಂದಿತ್ತು..ಡಿಸೆಂಬರ್ 10 ರಂದು ಆಕೆಯೊಂದಿಗೆ ಮದ್ವೆಯು ಅದ..ಆಕೆಯ ಮನೆಯವ್ರ ಒಪ್ಪಿಗೆ ಇಲ್ಲದೇ ಮದ್ವೇ ಅದ್ನಂತೆ..ವಿನೋದ್ ಮನೆಯಲ್ಲಿ 20 ದಿನವಿದ್ದ ಪ್ರೇಯಸಿ ಪತ್ನಿ ಆದ್ಯಾಕೋ ತಾಯಿ ಮನೆಗೆ ಹೋಗ್ತೀನಿ ಅಂತಾ ಹೋದವಳೇ ಯೂ ಟರ್ನ್ ಹೊಡೆದಿದ್ದಾಳೆ..ನನಗೆ ನೀನು ಬೇಡ ಅಂತಾನೂ ಹೇಳಿದ್ಲಂತೆ ಇದ್ರಿಂದ ಈ ಪ್ರಕರಣ ಮಹಿಳಾ ಠಾಣೆಯ ಮೇಟ್ಟಿಲೇರಿತ್ತಂತೆ..ಅಲ್ಲಿ ಏನಾಯ್ತೋ ತಿರ್ಮಾನ ಪತಿ,ಪತ್ನಿಇಬ್ರು ದೂರವಾದ್ರೂ.ಅದೇ ನೋವಿನಲ್ಲಿ ಕಳೆದ ಶುಕ್ರವಾರ ನೇಣಿ ಬಿಗಿದು ಅತ್ಮಹತ್ಯೆಗೆ ಮುಂದಾಗಿದ್ದಾನೆ..ತಕ್ಷಣವೇ ಅತನನ್ನು ಚಿಕ್ಕಮಗಳೂರು ಹಾಗೂ ಮಂಗಳೂರಿನ ಅಸ್ಪತ್ರೆ ದಾಖಲಿಸಲಾಯ್ತು.ಅದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ವಿನೋದ್ ರಾಜ್ ಅರಸ್.ಒಟ್ಟಾರೆ ಕಬ್ಬಡಿಯಲ್ಲಿ ನೂರಾರು ಕನಸು ಆ ಕನಸಿನ ಸಾಧನೆಯಲ್ಲಿ ರಾಷ್ಟ್ರ ಮಟ್ಟದವರೆಗೂ ಹೋಗಿದ್ದ ಅದ್ಭತ ಪ್ರತಿಭೆ. ಆದ್ರ ನಡುವೇ ಅರಳಿದ ಆ ಪ್ರೀತಿಯೇ ತನ್ನ ಬಾಳಿನ ಕನಸಿಗೆ ಮುಳ್ಳುವಾಗಿದೆ.

ಇಡೀ ಕಾಫೀ ನಾಡಿಗೆ ಕಬ್ಬಡಿಯಲ್ಲಿ ಹೆಸ್ರು ತರೋನು ಪ್ರೀತಿಸಿ ಮದ್ವೇಯಾಗಿದ್ದವಳು ಬಿಟ್ಟು ಹೋದಳು ಎನ್ನೋ ಕಾರಣಕ್ಕಷ್ಟೇ ಹೆತ್ತವರ ಒಬ್ಬರ ಮಗನಾದರೂ ಕಿಂಚಿತ್ತು ಯೋಚಿಸದೇ ಸಾವಿನ ಹಾದಿ ಹಿಡಿದಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.

Follow Us:
Download App:
  • android
  • ios