ಪುಣೆಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಿರೋಲಿ ಗ್ರಾಮದ ಬಳಿ ರಾತ್ರಿ 10.45 ರ ಸುಮಾರಿಗೆ 17 ಮಹಿಳೆಯರ ತಂಡವು ಅಡುಗೆ ಕೆಲಸಕ್ಕಾಗಿ ಮದುವೆ ಮಂಟಪವನ್ನು ತಲುಪಲು ಹೆದ್ದಾರಿಯನ್ನು ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಣೆ (ಫೆಬ್ರವರಿ 14, 2023): ಮಹಾರಾಷ್ಟ್ರದಲ್ಲಿ ಸೋಮವಾರ (ಫೆಬ್ರವರಿ 13, 2023) ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಐವರು ಮಹಿಳೆಯರು ಬಲಿಯಾಗಿರುವ ಘಟನೆ ನಡೆದಿದೆ. ಅಲ್ಲೆ, ಈ ಅಪಘಾತದಲ್ಲಿ ಮೂವರು ಮಹಿಳೆಯರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾಸಿಕ್-ಪುಣೆ ಹೆದ್ದಾರಿ ದಾಟುತ್ತಿದ್ದ ಹಲವು ಮಹಿಳಾ ಮಣಿಗಳ ಗುಂಪಿನ ಪೈಕಿ 8 ಮಂದಿಗೆ ಎಸ್‌ಯುವಿ ಡಿಕ್ಕಿ ಹೊಡೆದ ಪರಿಣಾಮ ಪುಣೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಪುಣೆಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಿರೋಲಿ ಗ್ರಾಮದ ಬಳಿ ರಾತ್ರಿ 10.45 ರ ಸುಮಾರಿಗೆ 17 ಮಹಿಳೆಯರ ತಂಡವು ಅಡುಗೆ ಕೆಲಸಕ್ಕಾಗಿ ಮದುವೆ ಮಂಟಪವನ್ನು ತಲುಪಲು ಹೆದ್ದಾರಿಯನ್ನು ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಈ ಮಹಿಳೆಯರು ಪುಣೆ-ನಾಸಿಕ್ ಹೆದ್ದಾರಿಯ ಪಕ್ಕದಲ್ಲಿರುವ ಮದುವೆ ಮಂಟಪಕ್ಕೆ ಅಡುಗೆ ಕೆಲಸಕ್ಕಾಗಿ ಪುಣೆಯಿಂದ ಬಂದಿದ್ದರು. ಅವರು ರಸ್ತೆ ದಾಟುತ್ತಿದ್ದಾಗ, ಎಸ್‌ಯುವಿಯೊಂದು ವೇಗವಾಗಿ ಬಂದು ಅವರ ಮೇಲೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ, ಎಸ್‌ಯುವಿ ಚಾಲಕ ಯು-ಟರ್ನ್ ತೆಗೆದುಕೊಂಡು ಪುಣೆ ಕಡೆಗೆ ಹಿಂದಿರುಗುವ ಮೊದಲು ವೇಗವಾಗಿ ವಾಹನ ಸವಾರಿ ಮಾಡಿದರು” ಎಂದು ಖೇಡ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ಆಟೋ ಟ್ರಕ್ ಮುಖಾಮುಖಿ ಡಿಕ್ಕಿ, ಭೀಕರ ಅಪಘಾತದಲ್ಲಿ ಐವರು ಶಾಲಾ ಮಕ್ಕಳ ಸಾವು, ನಾಲ್ವರು ಗಂಭೀರ!

ಈ ಅಪಘಾತದ ಬಳಿಕ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನು ಮೂವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ. ಸದ್ಯ ಇತರೆ ಮೂವರು ಮಹಿಳೆಯರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ, ಅಪರಿಚಿತ ಎಸ್‌ಯುವಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.

ದೆಹಲಿಯಲ್ಲಿ ಅಪಘಾತ: ಹದಿಹರೆಯದ ಬಾಲಕ ಸಾವು
ಇನ್ನೊಂದೆಡೆ ಉತ್ತರ ದೆಹಲಿಯ ವಾಜಿರಾಬಾದ್‌ ಪ್ರದೇಶದ ರಿಂಗ್‌ ರೋಡ್‌ ಬಳಿ ಅಪಘಾತ ನಡೆದಿದ್ದು, ಹದಿಹರೆಯದ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಈ ಅಪಘಾತದಲ್ಲಿ 14 ವರ್ಷದ ಬಾಲಕ ಮೃತಪಟ್ಟಿದ್ದರೆ ಇನ್ನು ಇಬ್ಬರು ಗಾಯಗೊಂಡಿದ್ದಾರೆ ಎಮದು ತಿಳಿದುಬಂದಿದೆ. ಈ ಮೂವರೂ ಸ್ಕೂಟಿ ಚಲಿಸುತ್ತಿದ್ದಾಗ ಅಪಘಾತ ನಡೆದಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಕಾರಿನ ಬಂಪರ್‌ಗೆ ಸಿಲುಕಿ 50 ಕಿಮೀ ಸಂಚರಿಸಿದ ಬೀದಿ ನಾಯಿ

ಈ ಮಧ್ಯೆ, ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ಆಟೋ ರಿಕ್ಷಾ ಹಾಗೂ ಟ್ರಕ್ ನಡುವಿನ ಭೀಕರ ಅಪಘಾತಕ್ಕೆ 5 ವಿದ್ಯಾರ್ಥಿಗಳು ಬಲಿಯಾಗಿದ್ದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಛತ್ತೀಸಘಡದ ಕಾನ್ಕರ್ ಜಿಲ್ಲೆಯ ಕೋರಾರ್ ಗ್ರಾಮದಲ್ಲಿ ಈ ಘಟನೆ ನಡೆದಿತ್ತು ಒಟ್ಟು 9 ಶಾಲಾ ಮಕ್ಕಳನ್ನು ತುಂಬಿಕೊಂಡು ಶಾಲೆಯಿಂದ ಮನೆಗೆ ತೆರಳುತ್ತಿದ್ದ ಆಟೋ ರಿಕ್ಷಾಗೆ ಟ್ರಕ್‌ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಆಟೋ ರಿಕ್ಷಾ ಪ್ರಪಾತಕ್ಕೆ ಉರುಳಿದೆ. ಅಪಘಾತದಲ್ಲಿ ಐವರು ಶಾಲಾ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆ ಸಂಬಂಧ ಛತ್ತೀಸಘಡ ಮುಖ್ಯಮಂತ್ರಿ ಭೂಪೇಶ್ ಭಾಘೆಲ್ ಆಘಾತ ವ್ಯಕ್ತಪಡಿಸಿದ್ದಾರೆ. ಆಟೋರಿಕ್ಷಾ ಹಾಗೂ ಟ್ರಕ್ ನಡುವಿನ ಅಫಾಘಾತದಲ್ಲಿ ಐವರು ಶಾಲಾ ಮಕ್ಕಳು ಮೃತಪಟ್ಟಿರುವುದು ತೀವ್ರ ನೋವು ತಂದಿದೆ. ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಮಕ್ಕಳಿಗೆ ಸೂಕ್ತ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಎಲ್ಲಾ ರೀತಿಯ ನೆರವು ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಇದೇ ವೇಳೆ ಮೃತಪಟ್ಟ ಮಕ್ಕಳ ಪೋಷಕರು ಹಾಗೂ ಸಂಬಂಧಿಕರಿಗೆ ಭಗವಂತ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಭೂಪೇಶ್ ಭಾಘೆಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ತುಮಕೂರು: ಬೈಕ್-ಲಾರಿ ನಡುವೆ ಅಪಘಾತ, ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ