ಮೈಸೂರಿನಲ್ಲಿ ಮಾದಕ ದ್ರವ್ಯ ಜಾಲವನ್ನು ಮಟ್ಟಹಾಕಲು ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎನ್‌ಸಿಬಿ ದಾಳಿಯ ನಂತರ, ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಗಳನ್ನು ಶ್ವಾನದಳ ಮತ್ತು ಸೋಕೊ ತಂಡಗಳ ಸಹಾಯದಿಂದ ತಪಾಸಣೆ ಮಾಡಲಾಗುತ್ತಿದೆ.

ಕ್ಯಾಮರಾಮ್ಯಾನ್ ನವೀನ್ ಜೊತೆಗೆ ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.

ಮೈಸೂರು (ಜ.30): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾದಕ ದ್ರವ್ಯದ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಶತಾಯ ಗತಾಯ ಮಾದಕ ದ್ರವ್ಯ ಜಾಲಾವನ್ನ ಬಂದ್ ಮಾಡಲು ಪಣತೊಟ್ಟಿರುವ ಪೊಲೀಸರು. ಯಾವ ರೀತಿ ಕಾರ್ಯಾಚರಣೆ ನಡೆಯುತ್ತಿದೆ ಅಂತೀರಾ ಈ ಸ್ಟೋರಿ ನೋಡಿ.

ಕೆಮಿಕಲ್ ಫ್ಯಾಕ್ಟರಿಗೆ ನುಗ್ಗಿದ ಶ್ವಾನ ದಾಳ

ಇಂಚಿಂಚು ಪರಿಶೀಲನೆ ಮಾಡಿದ ಸೋಕೊ ತಂಡ.

ಎಸ್, ಸಾಂಸ್ಕೃತಿಕ ನಗರಿ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಇಂದು ಕೆಮಿಕಲ್ ಫ್ಯಾಕ್ಟರಿಗಳ ತಪಾಸಣೆ ನಡೆಸಲಾಯಿತು. ಮಾದಕ ದ್ರವ್ಯ ಜಾಲಾವನ್ನ ಪತ್ತೆಹಚ್ಚಲು ಮೈಸೂರು ಪೊಲೀಸರು ಶ್ವಾನದಳದ ಮೊರೆ ಹೋಗಿದ್ದಾರೆ. ಈ ಹಿನ್ನಲೆ ಇಂದು ಒಂದಲ್ಲಾ ಎರಡಲ್ಲಾ ಬರೋಬ್ಬರಿ ಆರು ಪೊಲೀಸ್ ಡಾಗ್ ಗಳನ್ನ ಬಳಸಿ ಕಾರ್ಯಾಚರಣೆ ನಡೆಸಲಾಯಿತು.

ಹೆಬ್ಬಾಳು ಕೈಗಾರಿಕಾ ಪ್ರದೇಶದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಜೋಡಿಸಿಟ್ಟಿದ್ದ ಕೆಮಿಕಲ್ ಗಳ ಡಬ್ಬವನ್ನಶ್ವಾನ ದಳ ಹಾಗೂ ಸೋಕೊ ತಂಡ ಜಂಟಿಯಾಗಿ ಪರಿಶೀಲನೆ ನಡೆಸಿತ್ತು.

ಇದು ಎನ್ ಸಿಬಿ ಕಾರ್ಯಾಚರಣೆ ಎಫೆಕ್ಟ್.

ಎನ್ ಸಿಬಿ ಎಂಟ್ರಿಯಿಂದ ಅಲರ್ಟ್ ಆದ ಮೈಸೂರು ಪೊಲೀಸರು.

ಹಗಲು ರಾತ್ರಿ ಕಾರ್ಯಾಚರಣೆ. ಯಾವಗ ಎನ್ ಸಿಬಿ ತಂಡ ಮೈಸೂರಿಮ ಹೆಬ್ಬಾಳು ಕೈಗಾರಿಕಾ ಪ್ರದೇಶದ ಗಣಪತ್ ಲಾಲ್ ಫಿನಾಯಿಲ್ ಫ್ಯಾಕ್ಟರಿಗೆ ಎಂಟ್ರಿ ಕೊಟ್ಟು ತಪಾಸಣೆ ನಡೆಸಿದ್ದು ಮಾತ್ರ ಅಲ್ಲ ಗಣಪತ್ ಲಾಲಗ ಅವರನ್ನ ವಶಕ್ಕೆ ತೆಗೆದುಕೊಂಡಿದ್ರು. ಗಣಪತ್ ಲಾಲ್ ಸಂಬಂಧಿ ಗುಜರಾತ್ನ ಅಹಮದ್ ನಲ್ಲಿ ಡ್ರಗ್ಸ್ ಜಾಲಾದಾಲ್ಲಿ ಸಿಲುಕಿದ. ಈ ಆಧಾರದ ಮೇಲೆ ಎನ್ ಸಿಬಿ ಮೈಸೂರಿಗೆ ಎಂಟ್ರಿ ಕೊಟ್ಟಿತ್ತು. ಇದರಿಂದ ಅಲರ್ಟ್ ಆದ ಮೈಸೂರು ಪೊಲೀಸರು ಮೈಸೂರಿನ ಸಂಪೂರ್ಣ ಕೈಗಾರಿಕೆ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಒಟ್ಟಾರೆ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಎಲ್ಲರ ಚಿತ್ತ ನೆಟ್ಟಿದ್ದು ಪಿಂಚಣಿದಾರರ ಸ್ವರ್ಗ ಮೈಸೂರು ಡ್ರಗ್ ತಯಾರಿಕ ಕೇಂದ್ರವಾಗಿ ಮಾರ್ಪಟಿದ್ಯಾ ಎಂಬ ಚರ್ಚೆ ಜೋರಾಗಿದೆ.