ಹೋಳಿ ಸಂಭ್ರಮ ಹೈದರಾಬಾದ್‌ನಲ್ಲಿ ದುರಂತಕ್ಕೆ ಕಾರಣವಾಗಿದೆ. ತನಗೆ ಹೋಳಿ ಬಣ್ಣ ಹಚ್ಚಿದ ಕಾರಣಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಸ್ನೇಹಿತನಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಹೈದರಾಬಾದ್ (ಮಾ.9): ತನಗೆ ಹೋಳಿ ಬಣ್ಣ ಹಚ್ಚಿದ ಕಾರಣಕ್ಕೆ ಮೊಹಮದ್ ಶಬ್ಬೀರ್ ಎನ್ನುವ ವ್ಯಕ್ತಿ, ಹಿಂದು ಸ್ನೇಹಿತನಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಮಂಗಳವಾರ ಹೈದರಾಬಾದ್‌ನ ಮೇದಕ್‌ನ ರೇಗೊಂಡಾದ ಮಾರ್ಪಲ್ಲಿಯಲ್ಲಿ ಘಟನೆ ನಡೆದಿದೆ. ಎಸ್‌ಸಿ ವಾಡಾದಲ್ಲಿ ನಡೆದ ಹೋಳಿ ಸಂಭ್ರಮದಲ್ಲಿ ಈ ಘಟನೆಯಾಗಿದೆ. ವ್ಯಕ್ತಿಯನ್ನು ಬಿ ಅಂಬಾದಾಸ್ ಅಲಿಯಾಸ್ ಅಂಜಯ್ಯ ಎಂದು ಗುರುತಿಸಲಾಗಿದ್ದು, ಮೈಮೇಲೆ ಗಂಭೀರ ಪ್ರಮಾಣದ ಸುಟ್ಟ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಜಯ್ಯ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಮುಸ್ಲಿಂ ವ್ಯಕ್ತಿಗೆ ಇಷ್ಟವಿಲ್ಲದೇ ಇದ್ದರೂ ಆತನಿಗೆ ಹೋಳಿ ಬಣ್ಣ ಹಚ್ಚಿದ ಕಾರಣಕ್ಕೆ ಮೊಹಮದ್ ಶಬ್ಬೀರ್, ಅಂಬಾದಾಸ್‌ಗೆ ಬೆಂಕಿ ಇಟ್ಟಿದ್ದ ಎಂದು ವರದಿಯಾಗಿದೆ. 'ತನಗೆ ಬಣ್ಣ ಹಾಕಬೇಡ ಎಂದು ಅಂಬಾದಾಸ್ ಬಳಿ ಶಬ್ಬೀರ್ ಕೇಳಿಕೊಂಡಿದ್ದ. ಆದರೆ, ಬಣ್ಣ ಹಚ್ಚಲು ಓಡಿ ಬರುತ್ತಿದ್ದ ಅಂಬಾದಾಸ್‌ನನ್ನು ತಡೆದು, ಹಾಗೇನಾದರೂ ಬಣ್ಣ ಹಚ್ಚಿದರೆ ಖಂಡಿತವಾಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತೇನೆ ಎಂದು ಶಬ್ಬೀರ್ ಎಚ್ಚರಿಸಿದ್ದ' ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಮಿಕನಾಗಿದ್ದ ಅಂಬಾದಾಸ್ ತನ್ನ ಮೇಲೆ ಬಣ್ಣ ಹಚ್ಚಿದ ಬಳಿಕ ಶಬ್ಬೀರ್ ಅವಮಾನದಿಂದ ಕುಗ್ಗಿಹೋಗಿದ್ದ ಎಂದು ವರದಿಯಾಗಿದೆ. ಬಹುಶಃ ಶಬ್ಬೀರ್‌ನ ಎಚ್ಚರಿಕೆಯನ್ನು ಅಂಬಾದಾಸ್ ತಮಾಷೆಯೆಂದು ತಿಳಿದುಕೊಂಡಿದ್ದ. ಆತ ಜೋಕ್ ಮಾಡುತ್ತಿರಬಹುದು ಎನ್ನುವ ಕಾರಣಕ್ಕೆ ಶಬ್ಬೀರ್‌ಗೆ ಅಂಬಾದಾಸ್ ಬಣ್ಣ ಹಚ್ಚಿದ್ದ. ಅವಮಾನದಿಂದ ಕುಗ್ಗಿಹೋಗಿದ್ದ ಶಬ್ಬೀರ್ ಸ್ಥಳದಿಂದ ತೆರಳಿ, ಒಂದು ಬಾಟಲ್ ಪೆಟ್ರೋಲ್‌ನೊಂದಿಗೆ ವಾಪಾಸ್ ಆಗಿದ್ದ.
'ಅಂಬಾದಾಸ್ ಮೇಲೆ ಪೆಟ್ರೋಲ್ ಸುರಿದ ಶಬ್ಬೀರ್, ಬೆಂಕಿ ಹಚ್ಚಿ ತೆರಳಿದ್ದ. ಆದರೆ, ವ್ಯಕ್ತಿಯ ಮೇಲೆ ಬೆಂಕಿ ಹೊತ್ತಿರುವುದನ್ನು ಕಂಡ ಸ್ಥಳೀಯರು ಬೆಂಕಿ ನಂದಿಸಿದ್ದಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಅಂಬಾದಾಸ್‌ರನ್ನು ಓಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವರದಿಯ ಪ್ರಕಾರ, ಅಂಬಾದಾಸ್‌ನ ಮೇಲೆ ಶೇ. 40ರಷ್ಟು ಸುಟ್ಟ ಗಾಯಗಳಾಗಿದ್ದು, ಸದ್ಯ ಚೇತರಿಕೆಯ ಹಾದಿಯಲ್ಲಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಶಬ್ಬೀರ್ ನನ್ನು ಬಂಧಿಸಿದ್ದಾರೆ. ಪೊಲೀಸರು ಕಥೆಯ ಕೋಮು ಕೋನವನ್ನು ತಳ್ಳಿಹಾಕಿದ್ದಾರೆ. ಗಮನಾರ್ಹವಾಗಿ, ಶಬ್ಬೀರ್ ಮತ್ತು ಬಿ ಅಂಬಾದಾಸ್ ಇಬ್ಬರೂ ಸ್ನೇಹಿತರಾಗಿದ್ದರು ಎಂದು ಹೇಳಿದ್ದಾರೆ.
ಹೋಳಿ ಸಂಭ್ರಮಕ್ಕೆ 26 ಲಕ್ಷ ಬಾಟಲ್ ಮದ್ಯ ಮೋರಿದ ಡೆಲ್ಲಿ ಪೀಪಲ್ಸ್, ಹಿಂದಿನೆಲ್ಲಾ ದಾಖಲೆ ಉಡೀಸ್!
ಮತ್ತೊಂದು ಘಟನೆಯಲ್ಲಿ, ಹೋಳಿ ಆಚರಣೆಯ ಸಂದರ್ಭದಲ್ಲಿ ಮಹಿಳೆಯ ವಿರುದ್ಧ ಜಾತಿ ನಿಂದನೆ ಮಾಡಿದ ವ್ಯಕ್ತಿಯನ್ನು ಆತನ ಕುಟುಂಬ ಸದಸ್ಯರೊಂದಿಗೆ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಶೈಲೇಶ್ ಝಾಲಾ, ಅವರ ತಾಯಿ, ಪತ್ನಿ ಭವಾನಿ ಮತ್ತು ಸಹೋದರಿ ಭಾವನಾ ವಿರುದ್ಧ ದೂರು ದಾಖಲಾಗಿದೆ. ದೂರಿನ ಪ್ರಕಾರ, ಝಾಲಾ ತನ್ನ ಸ್ನೇಹಿತರೊಂದಿಗೆ ಮಾರ್ಚ್ 7 ರಂದು ಹೋಳಿ ಆಡುತ್ತಿದ್ದಳು ಮತ್ತು ಆಕೆಯ ತಾಯಿ ಗಲಾಟೆ ಮಾಡದಂತೆ ಕೇಳಿಕೊಂಡಿದ್ದಾಳೆ. ಆದರೆ, ಮಹಿಳೆಯೊಂದಿಗೆ ಮಾತನಾಡಲು ಹೋದಾಗ ಕೋಪಗೊಂಡ ಆತ ಆಕೆಯ ಬಟ್ಟೆ ಹರಿದು ಕಿರುಕುಳ ನೀಡಿದ್ದಾನೆ.
OYO Founder Wedding: 'ಕಂಜ್ಲಾಜುಲೇಷನ್ ಬ್ರದರ್..' ವೈವಾಹಿಕ ಜೀವನಕ್ಕೆ ಕಾಲಿಟ್ರು ಓಯೋ ಬಾಸ್!
ಈ ವೇಳೆ ಕುಟುಂಬದ ಸದಸ್ಯರು ಅವರ ವಿರುದ್ಧ ಜಾತಿ ನಿಂದನೆಗಳನ್ನು ಎಸೆದರು ಮತ್ತು ಅವರ ಹತ್ಯೆಗೆ ಪ್ರಯತ್ನಿಸಿದರು. ಕೆಳವರ್ಗದ ಜನರು ತಮ್ಮ ಸಮಾಜದಲ್ಲಿ ಉಳಿಯಬಾರದು ಎಂದು ದೂರುದಾರರು ಪ್ರತಿಪಾದಿಸಿದ್ದಾರೆ. ಐಪಿಸಿ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
