Asianet Suvarna News Asianet Suvarna News

Murugha Mutt sexual assault case: A2  ಆರೋಪಿ ವಾರ್ಡನ್ ರಶ್ಮಿ ಪೊಲೀಸರ ವಶಕ್ಕೆ

  • ಮುರುಘಾ ಮಠ ಶರಣ ಲೈಂಗಿಕ ದೌರ್ಜನ್ಯ ಪ್ರಕರಣ A2 ಆರೋಪಿ ಪೊಲೀಸ್ ವಶಕ್ಕೆ
  • A2  ಆರೋಪಿಯಾಗಿರುವ ವಾರ್ಡನ್ ರಶ್ಮಿ
  • ಇಂದು ಸಾಂತ್ವನ ಕೇಂದ್ರ ಶಿಫ್ಟ್; ನಾಳೆ ವಿಚಾರಣೆ ಮುಂದುವರಿಯಲಿದೆ
  • ತನಿಖಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ

 

Murugha Mutt sexual assault case A2 accused Warden Rashmi in police custody Bengaluru
Author
First Published Sep 1, 2022, 7:58 PM IST

ಚಿತ್ರದುರ್ಗ (ಸೆ.1) :  ಚಿತ್ರದುರ್ಗದ ಮುರುಘಾ ಮಠದಲ್ಲಿ ಮಕ್ಕಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ A2  ಆರೋಪಿಯಾಗಿರುವ ವಾರ್ಡನ್ ರಶ್ಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮುರುಘಾಶ್ರೀ ಸೇರಿ ಹಲವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.

ಈ ಹಿನ್ನೆಲೆ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ತನಿಖಾಧಿಕಾರಿಗಳು ಮುಂದಾಗಿದ್ದು, ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎರಡನೇ ಆರೋಪಿಯಾಗಿರುವ ವಾರ್ಡನ್ ರಶ್ಮಿ  ವಶಕ್ಕೆ ಪಡೆದು ತನಿಖಾಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆ ಬಳಿಕ  ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದಾರೆ. ನಾಳೆಯೂ ವಿಚಾರಣೆ ಮುಂದುವರಿಯುವುದರಿಂದ ಇಂದು ಪೊಲೀಸ್ ಭದ್ರತೆಯೊಂದಿಗೆ ಸಾಂತ್ವನ ಕೇಂದ್ರದಲ್ಲಿ  ಉಳಿದುಕೊಳ್ಳಲಿದ್ದಾಳೆ.

ಇಂದು ರಾತ್ರಿ ಸಾಂತ್ವನ ಕೇಂದ್ರದಲ್ಲಿಯೇ ಉಳಿದುಕೊಳ್ಳಲಿರುವ A2 ಆರೋಪಿ. ಈ ಪ್ರಕರಣದ ತನಿಖಾಧಿಕಾರಿಯಾಗಿರುವ ಅನೀಲ್ ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ನಾಳೆಯೂ ವಿಚಾರಣೆ ಮುಂದುವರಿಯುವ ಹಿನ್ನೆಲೆ ಇಂದು A2 ಆರೋಪಿ ರಶ್ಮಿ ಸಾಂತ್ವನ ಕೇಂದ್ರದಲ್ಲಿ ರಾತ್ರಿ ಕಳೆಯಲಿದ್ದಾಳೆ.

Muruga Mutt ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ!

ಮೂವರು ಆರೋಪಿಗಳು ನಾಪತ್ತೆ?

 ಮುರುಘಾಶ್ರೀ ಸೇರಿದಂತೆ ಐವರ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿರುವುದರಿಂದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಮುರುಘಾಶ್ರೀಗಳನ್ನು ಮಠದಲ್ಲೇ ತೀವ್ರ ವಿಚಾರಣೆ ನಡೆಸುತ್ತಿದ್ದರೆ. A2 ಆರೋಪಿ ವಾರ್ಡನ್ ರಶ್ಮಿ ಪೊಲೀಸರ ವಶದಲ್ಲಿದ್ದಾಳೆ. ಆದರೆ ಉಳಿದ ಮೂವರು ಆರೋಪಿಗಳು ನಾಪತ್ತೆ.  A3 ಆರೋಪಿ ಮಠದ ಉತ್ತರಾಧಿಕಾರಿ ಬಸವಾದಿತ್ಯ, ಪರಮಶಿವಯ್ಯ, A5 ವಕೀಲ ಗಂಗಾಧರಯ್ಯ ನಾಪತ್ತೆಯಾಗಿದ್ದಾರೆ.

ಮುರುಘಾ ಶ್ರೀ ಪೋಕ್ಸೋ ಕೇಸ್: ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂ ನ್ಯಾಯಮೂರ್ತಿಗಳಿಗೆ ಪತ್ರ

ಸಿಪಿಐ ಬಾಲಚಂದ್ರ ನಾಯಕ್ ತಂಡದಿಂದ ಶ್ರೀಗಳ ತೀವ್ರ ವಿಚಾರಣೆ..ಮುರುಘಾಶ್ರೀಗಳನ್ನು ಇಂದು ಬಂಧಿಸುವ ಸಾಧ್ಯತೆ ಇರುವುದರಿಂದ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಚಿತ್ರದುರ್ಗ ನ್ಯಾಯಾಲಯದ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೆಂಗಳೂರಿನಿಂದ ನಾಲ್ಕು ಕೆಎಸ್‌ಆರ್‌ಪಿ ಬಸ್ ಆಗಮಿಸಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಕಪಕ್ಕದ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸರ ಆಗಮಿಸಿದ್ದಾರೆ. ಮುರುಘಾಶ್ರೀಗಳನ್ನು ಇಂದೇ ರಾತ್ರಿ ಜಡ್ಜ್ ಎದುರು ಹಾಜರುಪಡಿಸುವ ಸಾಧ್ಯತೆ.

Follow Us:
Download App:
  • android
  • ios