Muruga Mutt ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ!

ಚಿತ್ರದುರ್ಗದ ಮುರುಘಾ ಮಠದ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಅಡಿಯಲ್ಲಿ ಫೋಕ್ಸೋ ಕೇಸ್ ದಾಖಲಾಗಿದೆ. ಇದರ ಬೆನ್ನಲ್ಲೇ ಇದೀಗ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

National Child Rights protection  Commission Files sumoto case against Chitradurga Murugha Mutt sharan Seer rbj

ಚಿತ್ರದುರ್ಗ,(ಸೆ.01): ಮುರುಘಾಮಠದ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ (National Commission for Protection of Child Rights)ಸ್ವಾಮೀಜಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಲಾಗಿದೆ.

ಮುರುಘಾ ಶರಣ (Murugha Mutt) ಸ್ವಾಮೀಜಿ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಪ್ರಕರಣದ ವರದಿ ನೀಡುವಂತೆ ಚಿತ್ರದುರ್ಗದ ಎಸ್ ಪಿ ಗೆ ನೋಟಿಸ್ ನೀಡಿದೆ. ಪ್ರಕರಣದ ಬಗ್ಗೆ ವಾರದೊಳಗೆ ವರದಿ ನೀಡುವಂತೆ ಎಸ್ ಪಿ ಸೂಚನೆ ನೀಡಲಾಗಿದೆ.

ಪೋಕ್ಸೋ ಕೇಸ್: ಬಂಧನದಿಂದ ತಪ್ಪಿಸಿಕೊಳ್ಳಲು ಕೋರ್ಟ್ ಮೊರೆ ಹೋದ ಮುರುಘಾ ಶ್ರೀ

ಪೋಲೀಸರು ಕೈಗೊಂಡ ಕ್ರಮದ ಬಗ್ಗೆ ನೋಟಿಸ್ ತಲುಪಿದ ಏಳು ದಿನಗಳಲ್ಲಿ ಉತ್ತರ ನೀಡುವಂತೆ ಮಕ್ಕಳ ಹಕ್ಕು ರಕ್ಷಣಾ ಆಯೋಗ ಮಾಹಿತಿ ಕೇಳಿದೆ. ಈಗಾಗಲೇ ಫೋಕ್ಸೋ ಹಾಗೂ ಅಟ್ರಾಸಿಟಿ ಕೇಸ್ ದಾಖಲಾgಗಿದೆ. ಇದೀಗ ಆಯೋಗ ಸಹ ಸುಮೋಟೋ ಕೇಸ್ ನೀಡಿರಿವುದರಿಂದ ಮುರುಘಾಮಠದ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಶ್ರೀಗಳಿಗೆ ಜಾಮೀನು ಟೆನ್ಷನ್
ಇನ್ನು ಇಂದು(ಸೆಪ್ಟೆಂಬರ್ 01) ಮುರುಘಾ ಶ್ರೀ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈಗಾಗಲೇ ಸಂತ್ರಸ್ತ ವಿದ್ಯಾರ್ಥಿನಿಯರು ನ್ಯಾಯಾಧೀಶರ ಮುಂದೆ ಸಿಆರ್ಪಿಸಿ ಸೆಕ್ಷನ್ 164ರ ಅಡಿಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಮುರುಘಾ ಶ್ರೀಗಳು ಸಹ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಕೋರ್ಟ್ ನಲ್ಲಿ ಶ್ರೀಗಳ ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಶ್ರೀಗಳಿಗೆ ಜಾಮೀನು ಟೆನ್ಷನ್ ಶುರುವಾಗಿದೆ. ಒಂದು ವೇಳೆ ಜಾಮೀನು ನಿರಾಕರಿಸಿದ್ರೆ, ಸ್ವಾಮೀಜಿಗೆ ಬಂಧನದ ಭೀತಿ ಎದುರಾಗಲಿದೆ.

ಘಟನೆ ಹಿನ್ನೆಲೆ
ಪ್ರಕರಣವನ್ನು ದಾಖಲಿಸಿದ ಒಡನಾಡಿ ಸಂಸ್ಥೆಯ ಕೌನ್ಸಿಲರ್‌ ಸರಸ್ವತಿ ದೂರು ದಾಖಲಾದ ಸಂದರ್ಭದಲ್ಲಿ ಸುವರ್ಣ ನ್ಯೂಸ್‌ ಜೊತೆಗೆ ಮಾತನಾಡಿ "ಜುಲೈ 24ರಂದು ಮಕ್ಕಳು ದೌರ್ಜನ್ಯದಿಂದ ಬೇಸತ್ತು ಬೆಂಗಳೂರಿಗೆ ಬಂದಿದ್ದಾರೆ. ಹಾಸ್ಟೆಲ್ ನಿಂದ ಅವರನ್ನು ಹೊರ ಹಾಕಲಾಗಿತ್ತಂತೆ. ಅಲ್ಲಿ‌ ಬಹಳಷ್ಟು ಸಮಯ ಒಂದೇ ಕಡೆ ನಿಂತಿದ್ದರಿಂದ ಆಟೋ ಚಾಲಕರೊಬ್ಬರು ಅವರನ್ನು ವಿಚಾರಿಸಿ, ಸಮೀಪದ ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ಗೆ ಕರೆದೊಯ್ದಿದ್ದಾರೆ. ಠಾಣೆಯಲ್ಲಿ‌ ಮಕ್ಕಳು ಯಾರನ್ನು ಭೇಟಿ ಮಾಡಿದ್ರು ಅನ್ನೋ ಮಾಹಿತಿ ನಮಗಿಲ್ಲ. ಮಕ್ಕಳು ಭಯದ ಕಾರಣಕ್ಲೆ ತಮ್ಮ ಮೇಲೆ ಆಗಿರೋ‌ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿಲ್ಲ. ಸ್ವಾಮೀಜಿಯವರು ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಾರೆ. ಕೆಟ್ಟದಾಗಿ ನಿಂದಿಸುತ್ತಾರೆ ಎಂದಷ್ಟೇ ಹೇಳಿದ್ದಾರೆ. ಪೊಲೀಸರಿಂದ ನ್ಯಾಯ ಸಿಗುತ್ತೆ ಎಂಬ ಖಾತ್ರಿ ಇದ್ದಿದ್ದರೆ ಆ ಮಕ್ಕಳು ನಮ್ಮ ತನಕ ಬರುತ್ತಿರಲಿಲ್ಲ.ಹೀಗಾಗಿ ಆ ಮಕ್ಕಳು ಬೇರೊಬ್ಬರ ಸಹಾಯ ಪಡೆದು ನಮ್ಮ ಬಳಿ ಬಂದಿದ್ದಾರೆ. ಮಕ್ಕಳು ಮಾನಸಿಕ ಸ್ಥಿತಿ ಧೃಡವಾಗಿಯೇನೂ ಇಲ್ಲ.ತುಂಬಾ ಹೆದರಿಕೆಯಿಂದಲೇ ನಮ್ಮ ಬಳಿ ಆಗಿರೋ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದಾರೆ. ಮಕ್ಕಳ ಹೇಳಿಕೆಯಲ್ಲಿ ಸತ್ಯ ಇರಬಹುದು, ಇಲ್ಲದೆಯೂ ಇರಬಹುದು. ಪ್ರಕರಣದ ಸೂಕ್ತ ತನಿಖೆ ಆಗಲಿ," ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios