ಚಿತ್ರದುರ್ಗ ಮುರುಘಾ ಶ್ರೀಗೆ ಜೈಲೈ ಗತಿ, ಜಾಮೀನು ಅರ್ಜಿ ವಜಾ!
ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಿಂದ ಜೈಲು ಪಾಲಾಗಿರುವ ಚಿತ್ರದುರ್ಘದ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಜಾಗೊಂಡಿದೆ.
ಚಿತ್ರದುರ್ಗ(ಸೆ.22): ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಆರೋಪದಡಿ ಜೈಲು ಪಾಲಾಗಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಇದೀಗ ಮುರಾಘ ಶ್ರೀಗಳಳಿಗೆ ಜೈಲೇ ಗತಿಯಾಗಿದೆ. ಚಿತ್ರದುರ್ಗ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮುರುಘಾ ಶ್ರೀಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಸೆಪ್ಟೆಂಬರ್ 27ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳು ಸದ್ಯ ಶಿವಮೊಗ್ಗದ ಮೆಗ್ಗಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 19ಕ್ಕೆ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಚಿತ್ರದುರ್ಗ ಕೋರ್ಟ್, ತೀರ್ಪನ್ನು ಸೆಪ್ಟೆಂಬರ್ 23ಕ್ಕೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್, ಜಾಮೀನು ನೀಡಲು ನಿರಾಕರಿಸಿದೆ. ಮುರುಘಾ ಶ್ರೀಗಳ ನ್ಯಾಯಾಗಂಬ ಬಂಧನ ಅವಧಿ ಸೆಪ್ಟೆಂಬರ್ 27ಕ್ಕೆ ಅಂತ್ಯವಾಗಲಿದೆ.
ಜೈಲಿನಲ್ಲಿದ್ದ ಮುರುಘಾ ಶ್ರೀಗಳ(Murughashree) ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಕೋರ್ಟ್ ಸೂಚನೆ ನೀಡಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುರುಘಾ ಶ್ರೀಗಳ(Murugha mutt) ಆರೋಗ್ಯ ಚೇತರಿಕೆ ಕಂಡಿದೆ. ಹೃದಯ ಸಮಸ್ಯೆ ಹಿನ್ನೆಲೆಯಲ್ಲಿ ದಾಖಲಾದ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಸ್ವಾಮೀಜಿ ಅವರಿಗೆ ಯಶಸ್ವಿಯಾಗಿ ಆ್ಯಂಜಿಯೋಗ್ರಾಂ ಮಾಡಲಾಗಿದ್ದು, ಶ್ರೀಗಳ ಆರೋಗ್ಯ ಸ್ಥಿರವಾಗಿದೆ.
Murugha Mutt Case; CWC ಅಧಿಕಾರಿಗಳಿಂದ ಮಕ್ಕಳಿಗೆ ಹಿಂಸೆ, ಒಡನಾಡಿ ಸಂಸ್ಥೆ ಆರೋಪ
ಈ ಬಗ್ಗೆ ಮಾಹಿತಿ ನೀಡಿದ ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಅವರು ನ್ಯಾಯಾಲಯದ ಸೂಚನೆಯಂತೆ ಬುಧವಾರ ಸಂಜೆಯೇ ಎಲ್ಲ ಸಿದ್ಧತೆ ನಡೆಸಲಾಗಿತ್ತು. ರಾತ್ರಿ ಆಸ್ಪತ್ರೆಗೆ ಆಗಮಿಸಿದ ಶ್ರೀಗಳಿಗೆ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಳಗ್ಗೆ ಆ್ಯಂಜಿಯೋಗ್ರಾಂ ಚಿಕಿತ್ಸೆ ನಡೆಸಲಾಯಿತು ಎಂದು ತಿಳಿಸಿದರು.
2ನೇ ಸಂತ್ರಸ್ತೆಗೂ ವೈದ್ಯಕೀಯ ಪರೀಕ್ಷೆ
ಮುರುಘಾ ಶರಣರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ 2ನೇ ಸಂತ್ರಸ್ತೆಗೂ ಇಲ್ಲಿನ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಇಬ್ಬರಲ್ಲಿ ಒಬ್ಬಳು ಮಾತ್ರ ವೈದ್ಯಕೀಯ ಪರೀಕ್ಷೆಗೆ ಸಮ್ಮತಿ ವ್ಯಕ್ತಪಡಿಸಿದ್ದು, ಮತ್ತೊಬ್ಬ ಸಂತ್ರಸ್ತೆ ನಿರಾಕರಿಸಿದ್ದಳು. ಇದೀಗ ಆಕೆ ಕೂಡ ಒಪ್ಪಿಗೆ ಸೂಚಿಸಿದ ಕಾರಣ ಸಂತ್ರಸ್ತೆಯನ್ನು ಬುಧವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ: ಜೈಲಲ್ಲಿ ಶ್ರೀಗಳು ಏನೇನ್ ಮಾಡ್ತಾರೆ?
ಶಿಮುಶ, ರಶ್ಮಿ ನ್ಯಾಯಾಂಗ ಬಂಧನ 27ರವರೆಗೆ ವಿಸ್ತರಣೆ
ಪೋಕ್ಸೋ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮುರುಘಾಶ್ರೀ ಹಾಗೂ ಎರಡನೇ ಆರೋಪಿ ರಶ್ಮಿ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಹದಿನಾಲ್ಕು ದಿನಗಳವರೆಗೆ ಅಂದರೆ ಸೆ.27ರವರೆಗೆ ವಿಸ್ತರಿಸಿ ಇಲ್ಲಿನ ಎರಡನೇ ಅಪರ ಸತ್ರ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನಲೆಯಲ್ಲಿ ಮುರುಘಾಶ್ರೀ ಹಾಗೂ ರಶ್ಮಿ ಇಬ್ಬರನ್ನು ಬುಧವಾರ ಇಲ್ಲಿನ ನ್ಯಾಯಾಲಯಕ್ಕೆ ಕರೆ ತರಲಾಗಿತ್ತು. ಮಧ್ಯಾಹ್ನ 12.20 ರ ಸುಮಾರಿಗೆ ಇಬ್ಬರನ್ನು ಪ್ರತ್ಯೇಕವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಕೇವಲ ಹತ್ತು ನಿಮಿಷಗಳ ಅಂತರದಲ್ಲಿ ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಹದಿನಾಲ್ಕು ದಿನಗಳವರೆಗೆ ವಿಸ್ತರಿಸಿದರು. ನಂತರ ಶಿಮುಶ ಅವರನ್ನು ಮರಳಿ ಚಿತ್ರದುರ್ಗ ಬಂಧಿಖಾನೆಗೆ ಹಾಗೂ ರಶ್ಮಿ ಅವರನ್ನು ಶಿವಮೊಗ್ಗ ಬಂಧಿಖಾನೆಗೆ ಕರೆದೊಯ್ಯಲಾಯಿತು.