ಬೆಂಗಳೂರು(ಜು. 27)  ಜೈಲಿನಲ್ಲೇ ಇದ್ದೆ ಮರ್ಡರ್ ಗೆ ಸ್ಕೆಚ್ ಹಾಕಿ ಸುಪಾರಿ ಪಡೆದಿದ್ದ ಗ್ಯಾಂಗ್ ಒಂದನ್ನು ಬಂಧಿಸಲಾಗಿದೆ . ರಾಜಗೋಪಾಲ ನಗರ ರೌಡಿಶೀಟರ್ ರಾಜ ಅಲಿಯಾಸ್ ಕ್ಯಾಟ್ ರಾಜನ 9 ಜನ ಸಹಚರರ ಬಂಧನವಾಗಿದೆ.

ಜೈಲಿನಲ್ಲೇ ಒಂದು ಕೋಟಿ ಸುಫಾರಿಗೆ ಡೀಲ್ ಕುದಿರಿಸಿದ್ದ ಕ್ಯಾಟ್ ರಾಜ ಮತ್ತು ಹೇಮಿ ಅಲಿಯಾಸ್ ಹೇಮಂತ್  ಮತ್ತು ಸೋದರ ಚೇತು ಮತ್ತು ಸಹಚರರಿಂದ  ಸ್ಕೆಚ್ ರೆಡಿಯಾಗಿತ್ತು. ರಾಜಗೋಪಾಲ ನಗರದ ಚಿಕ್ಕತಿಮ್ಮೇಗೌಡನ ಸಹೋದರರಾದ ನಟರಾಜ್, ಹೇಮಂತ್ ಕೊಲೆಗೆ ಸಂಚು ರೂಪಿಸಿದ್ದರು.

ಲೈಂಗಿಕ ಕ್ರಿಯೆ ನಡೆಸುವಾಗ ಸಿಕ್ಕಿಬಿದ್ದ ಮಹಿಳೆ, ಮುಂದೆ ಆದದ್ದು ಕೊಲೆ

2018 ರಲ್ಲಿ ನಡೆದಿದ್ದ ಗೋವಿಂದೇ ಗೌಡ ಹತ್ಯೆ ದ್ವೇಷದದ ಕಾರಣಕ್ಕೆ ಗೋವಿಂದೇಗೌಡನ ಪತ್ನಿ ವರಲಕ್ಷ್ಮಿ ಸುಫಾರಿ ನೀಡಿದ್ದಳು. 2016 ರಲ್ಲಿ ಸಂಚು ರೂಪಿಸಿ ಚಿಕ್ಕತಿಮ್ಮೇಗೌಡ ಕೊಲೆ ಮಾಡಿಸಿದ್ದು ಇದೆ  ವರಲಕ್ಷ್ಮಿ. ಈ ಕುರಿತು ಚಿಕ್ಕತಿಮ್ಮೇಗೌಡನ ಸೋದರ ನಟರಾಜ್  ಕಾಮಾಕ್ಷಿ‌ಪಾಳ್ಯ ಠಾಣೆಗೆ ದೂರು ನೀಡಿದ್ದ. ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು.

ದುಶ್ಮನ್ ಕೊಲೆ ಪಣ ತೊಟ್ಟಿದ್ದ ಆರೋಪಿ ವರಲಕ್ಷ್ಮೀ ಸುಪಾರಿ ನೀಡಿದ್ದಳು. ಗಂಡನ ಕೊಲೆ ಪ್ರತಿಕಾರಕ್ಕೆ 70ಲಕ್ಷಕ್ಕೆ ಮನೆಯನ್ನು ಸಹ ಮಾರಾಟ ಮಾಡಿದ್ದಳು. 15 ಲಕ್ಷ ಹಣವನ್ನು ಕ್ಯಾಟ್ ಅಂಡ್ ಟೀಂ  ವರಲಕ್ಷ್ಮಿ  ನೀಡಿದ್ದಳು.

ಕಳೆದ ಒಂದು ತಿಂಗಳಿನಿಂದ ಚಿಕ್ಕತಿಮ್ಮೇಗೌಡನ ಮನೆಯನ್ನು ಚೇತೂ ಅಂಡ್ ಟೀಂ ವಾಚ್ ಮಾಡುತ್ತಲೆ ಇತ್ತು. ನಟರಾಜ, ಹೇಮಂತ ನನ್ನು ಪಿನ್ ಟು ಪಿನ್ ವಾಚ್ ಮಾಡಿದ್ದ ಆರೋಪಿಗಳು ಕೊಲೆಗೆ ಸ್ಕೆಚ್ ಹಾಕಿದ್ದರು. ಹೊಸಬರನ್ನು ನೋಡಿ ಅನುಮಾನಗೊಂಡ ನಟರಾಜ ಪೊಲೀಸರಿಗೆ ದೂರು ನೀಡಿದ್ದ. ಮಾಹಿತಿ ಕಲೆಹಾಕಿದ ಪೊಲೀಸರು ಗ್ಯಾಂಗ್ ಬಂಧಿಸಿದ್ದಾರೆ.