Chitradurga: ಕೋಟೆ ನಾಡಿನಲ್ಲಿ ಹುಡುಗಿ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ!

ಹುಡುಗಿ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಎನ್.ಎನ್.ಕಟ್ಟೆ ಗ್ರಾಮದಲ್ಲಿ ನಡೆದಿದೆ. ಅಷ್ಟಕ್ಕೂ ಕೊಲೆ ಆಗುವಂತದ್ದು ಅಲ್ಲಿ ಆಗಿದ್ದಾದ್ರು ಏನಿರಬಹುದು ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ.

murder of young man stabbed with a knife at chitradurga gvd

ಚಿತ್ರದುರ್ಗ (ಜ.05): ಹುಡುಗಿ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಎನ್.ಎನ್.ಕಟ್ಟೆ ಗ್ರಾಮದಲ್ಲಿ ನಡೆದಿದೆ. ಅಷ್ಟಕ್ಕೂ ಕೊಲೆ ಆಗುವಂತದ್ದು ಅಲ್ಲಿ ಆಗಿದ್ದಾದ್ರು ಏನಿರಬಹುದು ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ. ಹೀಗೆ ಮನೆಯ ತುಂಬೆಲ್ಲಾ ರಕ್ತ ಚೆಲ್ಲಿರೋ ಭೀಕರ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಎನ್. ಎನ್ ಕಟ್ಟೆ ಗ್ರಾಮದಲ್ಲಿ. ಇದೇ ಗ್ರಾಮದ ಮನೋಜ್ ನಾಯ್ಕ್ ಎಂಬ ಯುವಕ  ತಮ್ಮದೇ ಗ್ರಾಮದ ಯುವತಿ ರಂಜಿತಾಬಾಯಿ ಎಂಬಾಕೆಯನ್ನು ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿರುತ್ತಾನೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ರಂಜಿತಾಬಾಯಿ ಸಹೋದರಿ ಶಿವರಂಜಿನಿಯ ಪತಿ ಹಿರಿಯೂರು ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದ ರಘುನಾಯ್ಕ್ ಹಲವು ಬಾರಿ ಮೃತ ಯುವಕ ಮನೋಜ್ ನಾಯ್ಕ್(21) ನಿಗೆ ನೀನು ನನ್ನ ನಾದಿನಿ ರಂಜಿತಾಬಾಯಿ ಜೊತೆ ಹೆಚ್ಚು ಮಾತನಾಡ್ತಿದ್ದೀಯ ಇದೆಲ್ಲ ಸರಿಯಲ್ಲ ಎಂದು ಕಳೆದ ಐದು ತಿಂಗಳ ಹಿಂದಷ್ಟೇ ಜಗಳ ಮಾಡಿದ್ದಾನೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಮೃತ ಯುವಕ ಹಾಗೂ ರಂಜಿತಾಬಾಯಿ ಒಬ್ಬರಿಗೊಬ್ಬರು ಸಲಿಗೆಯಿಂದಲೇ ಮಾತನಾಡುತ್ತಿದ್ದದ್ದು ಕೆಲವು ಬಾರಿ ಗಮನಕ್ಕೆ‌ ಬಂದಿದೆ.‌ 

ರಾಮಭಕ್ತ ಹನುಮನ ದೇವಸ್ಥಾನ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ಶಾಸಕ ಬೆಲ್ಲದ!

ಇದನ್ನೇ ದ್ವೇಷವಾಗಿ ಇಟ್ಟುಕೊಂಡ ಆರೋಪಿ ರಘುನಾಯ್ಕ್ ನಿನ್ನೆ ಎನ್.ಎನ್‌ ಕಟ್ಟೆ ಗ್ರಾಮದಲ್ಲಿ ಹಬ್ಬಕ್ಕೆಂದು ಬಂದಾಗ, ರಸ್ತೆ ಮೇಲೆ ನಡೆದುಕೊಂಡು ಹೋಗ್ತಿದ್ದ ಮೃತ ಯುವಕ ಮನೋಜ್ ನನ್ನು ಉಪಾಯದಿಂದ ಮನೆಗೆ ಕರೆಸಿಕೊಂಡು, ನನ್ನ ನಾದಿನಿ ಜೊತೆ ಮಾತನಾಡಿದ್ರೆ ನಿನ್ನ ಸುಮ್ಮನೆ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಹೀಗೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿದೆ. ಈ ಸಂಧರ್ಭದಲ್ಲಿ ಆರೋಪಿಗಳಾದ ರಘುನಾಯ್ಕ್, ರಮೇಶನಾಯ್ಕ್, ರವಿನಾಯ್ಕ್,‌ಇಂದಿರಾಬಾಯಿ,ಶಿವನಾಯ್ಕ್,ಸುಮಿತ್ರಬಾಯಿ ಸೇರಿಕೊಂಡು ಮೃತ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. 

ಈ ಸಮಯದಲ್ಲಿ ಆರೋಪಿ ರಘುನಾಯ್ಕ್ ಮೃತ ಯುವಕನ ತೊಡೆ ಭಾಗಕ್ಕೆ ಬಲವಾಗಿ ಚಾಕುವಿನಿಂದ ಹಿರಿದಿದ್ದು, ಅತಿಯಾದ ರಕ್ತಸ್ರಾವ ಆಗಿ, ಗಂಭೀರ ಗಾಯಗೊಂಡಿದ್ದ ಕಾರಣ ಮನೋಜ್ ನಾಯ್ಕ್ ಶ್ರೀರಾಂಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಅಂತಾರೆ ಸಂಬಂಧಿಕರು. ಈ ಘಟನೆಯು ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಘಟನಾ‌ ಸ್ಥಳಕ್ಕೆ ಬರುವ ಮುನ್ನವೇ ಪ್ರಮುಖ ಆರೋಪಿ ರಘುನಾಯ್ಕ್ ಜೊತೆಗೆ ನಾಲ್ವರು ಆರೋಪಿಗಳು ನಾಪತ್ತೆ ಆಗಿದ್ದರು. ಊರಲ್ಲೇ ಉಳಿದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಗಳಿಗಾಗಿ ತಲಾಶ್ ನಡೆಸುತ್ತಿದ್ದಾರೆ. 

ದೇಶದ ಅಭಿವೃದ್ಧಿ ಪ್ರಧಾನಿ ಮೋದಿ ಸರ್ಕಾರದ ಗ್ಯಾರಂಟಿ: ಸಂಸದ ಜಿ.ಎಂ.ಸಿದ್ದೇಶ್ವರ

ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರ ಬಳಿ ಕೇಳೋಕ್ ಹೋದ್ರೆ, ಆರೋಪಿ ರಘುನಾಯ್ಕ್ ಹಿರಿಯೂರಿನ ಸೋಮೇನಹಳ್ಳಿಯವನು ನಮ್ಮೂರಿನ ಹುಡುಗಿಯನ್ನು ಮದುವೆ ಆಗಿದ್ದನು. ಆಕೆಯ ತಂಗಿಯ ಮೇಲೂ ಆತನಿಗೆ ವ್ಯಾಮೋಹ ಇದ್ದ ಕಾರಣ, ಆಕೆಯನ್ನು ಮದುವೆ ಆಗುವ ಪ್ಲಾನ್ ಮಾಡಿದ್ದ ಎನ್ನುವ ಕಾರಣಕ್ಕೆ, ಪದೇ ಪದೇ ಮೃತ ಯುವಕನಿಗೆ ನನ್ನ ನಾದಿನಿಯನ್ನು ಮಾತನಾಡಿಸಬೇಡ ಎಂದು ಹೇಳುತ್ತಿದ್ದನು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಒಟ್ಟಾರೆಯಾಗಿ ಕೂತು ಮಾತನಾಡಿ ಬಗೆಹರಿಸಿಕೊಳ್ಳಬಹುದಾಗಿದ್ದ ವಿಚಾರ, ಇಂದು ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರೋದು ದುರಂತ. ಬಾಳಿ ಬದುಕಬೇಕಿದ್ದ ಯುವಕ ಸಾವನ್ನಪ್ಪಿರೋದು ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ. ಎನಿ ವೇ ಪೊಲೀಸರು ಆರೋಪಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕಿದೆ.

Latest Videos
Follow Us:
Download App:
  • android
  • ios