Asianet Suvarna News Asianet Suvarna News

ದೇಶದ ಅಭಿವೃದ್ಧಿ ಪ್ರಧಾನಿ ಮೋದಿ ಸರ್ಕಾರದ ಗ್ಯಾರಂಟಿ: ಸಂಸದ ಜಿ.ಎಂ.ಸಿದ್ದೇಶ್ವರ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿ ಜಿ. ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕವನ್ನು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು.

Development of country is guarantee of PM Modi government Says MP GM Siddeshwara gvd
Author
First Published Jan 5, 2024, 3:52 PM IST

ಹರಪನಹಳ್ಳಿ (ಜ.05): ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿ ಜಿ. ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಿ ಫೌಂಡೇಶನ್ ವತಿಯಿಂದ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕವನ್ನು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು.

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆಲ ತಾಲೂಕಿನಲ್ಲಿ ವಿವಿಧ ಸಂಘ- ಸಂಸ್ಥೆಗಳು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಿದ್ದರು. ಆದರೆ ಹರಪನಹಳ್ಳಿ ಹಾಗೂ ಹರಿಹರ ತಾಲೂಕಿನಲ್ಲಿ ಆಮ್ಲಜನಕ ಘಟಕಕ್ಕೆ ಯಾರೂ ಮುಂದಾಗಲಿಲ್ಲ, ಇಂತಹ ಸಂದರ್ಭದಲ್ಲಿ ನಮ್ಮ ತಂದೆ- ತಾಯಿಗಳ ಸ್ಮರಣಾರ್ಥವಾಗಿ ನಮ್ಮ ಚಾರಿಟಿ ಟ್ರಸ್ಟ್‌ನಿಂದ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಗೊಂಡಿದೆ. ಇದರಿಂದ ಬಹಳ ಜನರಿಗೆ ಅನುಕೂಲವಾಗಲಿದೆ ಎಂದರು.

ನರೇಂದ್ರಿ ಮೋದಿ ಗ್ಯಾರಂಟಿ: ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ದೇಶದಲ್ಲಿ ಸೇವೆ ಮಾಡುತ್ತಿರುವ ನರೇಂದ್ರ ಮೋದಿಯವರು ಬೀದಿಬದಿ ವ್ಯಾಪಾರಿಗಳಿಗೆ ಹತ್ತು ಸಾವಿರದ ಸಾಲದ ನೆರವು, ಉಚಿತ ಅಕ್ಕಿ ವಿತರಣೆ, ವಿಶ್ವಕರ್ಮ ಯೋಜನೆ, ಕಿಸಾನ್ ಸನ್ಮಾನ ಯೋಜನೆ, ಆಯುಷ್ಮಾನ ಭಾರತ, ಜನೌಷಧಿ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಇದು ದೇಶದ ಜನರಿಗೆ ಗ್ಯಾರಂಟಿಯಾಗಿದ್ದಾರೆ ಎಂದರು. ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾದರೆ ವಿಶ್ವದಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಬರಲಿದೆ ಎಂದ ಅವರು, ನಾನು ಇಪ್ಪತ್ತು ವರ್ಷದಿಂದ ಸಂಸದರಾಗಿ ನನ್ನ ಕ್ಷೇತ್ರದ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳಲ್ಲಿ ಅನುದಾನ ಬಳಕೆ ಮಾಡಿದ್ದೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಭರವಸೆ ಈಡೇರಿಸಿಲ್ಲ: ಬಸವಜಯ ಮೃತ್ಯುಂಜಯ ಶ್ರೀ

ತಾಲೂಕು ಸಾರ್ವಜನಿಕ ಆಸ್ಪತ್ರೆ ಯಿಂದ ಸಂಸದರನ್ನು ಸನ್ಮಾನಿಸಲಾಯಿತು. ಮರಿಯಮ್ಮನಹಳ್ಳಿ ರಂಗಸಂಸ್ಕೃತಿ ಕಲಾತಂಡದಿಂದ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಿರುನಾಟಕ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಪುರಸಭೆ ಮಾಜಿ ಅದ್ಯಕ್ಷ ಎಚ್.ಎಂ. ಅಶೋಕ, ಅರುಂಡಿ ನಾಗರಾಜ್, ಪಿ. ಮಹಾಬಲೇಶ್ವರಗೌಡ್ರು, ಕುಸುಮಾ ಜಗದೀಶ, ಗಿರಿರಾಜ ರೆಡ್ಡಿ, ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ, ಡಿಎಚ್‌ಒ, ಎಲ್.ಆರ್. ಶಂಕರನಾಯ್ಕ, ತಾಲೂಕು ಆರೋಗ್ಯಾಧಿಕಾರಿ ಡಾ. ಹಾಲಸ್ವಾಮಿ, ಮುಖ್ಯ ವೈಧ್ಯಾಧಿಕಾರಿ ಶಂಕರನಾಯ್ಕ, ಸಹಾಯಕ ಆಡಳಿತಾಧಿಕಾರಿ ವೆಂಕಟೇಶ ಬಾಗಲಾರ, ಮುತ್ತಿಗಿ ವಾಗೀಶ, ಉದಯಶಂಕರ, ಈಶ್ವರ ಸೇರಿದಂತೆ ಇತರರು ಇದ್ದರು.

Follow Us:
Download App:
  • android
  • ios