ದಾವಣಗೆರೆ: ಕೊಲೆ ಪ್ರಕರಣ ಭೇದಿಸಿದ ಎಂಸಿಸಿಟಿಎನ್‌ಎಸ್‌ ಆ್ಯಪ್‌!

ಸಾಮಾನ್ಯವಾಗಿ ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಲು ಬಳಸುವ ಎಂಸಿಸಿಟಿಎನ್‌ಎಸ್‌ ಅಪ್ಲಿಕೇಷನ್‌ ಮೂಲಕ ಅಪರಿಚಿತ ವ್ಯಕ್ತಿಯ ಕೊಲೆ¿æೂಂದು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

Murder case: MCCTNS app that traced the accused in the murder case at davanagere rav

ದಾವಣಗೆರೆ (ಏ.2) : ಸಾಮಾನ್ಯವಾಗಿ ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಲು ಬಳಸುವ ಎಂಸಿಸಿಟಿಎನ್‌ಎಸ್‌ ಅಪ್ಲಿಕೇಷನ್‌ ಮೂಲಕ ಅಪರಿಚಿತ ವ್ಯಕ್ತಿಯ ಕೊಲೆ¿æೂಂದು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಲ್ಲಿನ ವಿದ್ಯಾನಗರ ಪೊಲೀಸ್‌ ಠಾಣೆ(Vidyanagara police station davanagere) ವ್ಯಾಪ್ತಿಯಲ್ಲಿ ಈಚೆಗೆ ನಡೆದಿದ್ದ ಕೊಲೆ ಪ್ರಕರ(Murder case)ಣಕ್ಕೆ ಸಂಬಂಧಿಸಿ ಮೃತ ವ್ಯಕ್ತಿಯನ್ನು ಇದೇ ಎಂಸಿಸಿಟಿಎನ್‌ಎಸ್‌ ಅಪ್ಲಿಕೇಷನ್‌(MCCTNS Application) ಬಳಸಿ, ಕೊಲೆಯಾದ ದುರ್ದೈವಿ ಯಾರೆಂಬುದನ್ನು ಪೊಲೀಸರು ಪತ್ತೆ ಮಾಡಿದ್ದರು.

Hubballi Crime News: ಆಟವಾಡಲು ಹೋಗಿದ್ದ ಬಾಲಕನ ಭೀಕರ ಹತ್ಯೆ!

ಸಾಮಾನ್ಯವಾಗಿ ಪೊಲೀಸ್‌ ಇಲಾಖೆಯು ರಾತ್ರಿ ಗಸ್ತು ವೇಳೆ ಇದೇ ಎಂಸಿಸಿಟಿಎನ್‌ಎಸ್‌ ಅಪ್ಲಿಕೇಷನ್‌ ಬಳಸಿ, ಅನುಮಾನಾಸ್ಪದವಾಗಿ ಕಂಡು ಬರುವ ವ್ಯಕ್ತಿಗಳನ್ನು ಪರಿಶೀಲಿಸಲು, ಗುರುತಿಸುವ ಕೆಲಸವನ್ನು ಪೊಲೀಸ್‌ ಇಲಾಖೆ ಮಾಡುತ್ತದೆ. ಬೆರಳಚ್ಚು ಪಡೆದು, ಅದರ ಆಧಾರದ ಮೇಲೆ ಅಪರಿಚಿತ, ಅನುಮಾನಾಸ್ಪದ ವ್ಯಕ್ತಿ ಯಾರೆಂಬುದನ್ನು ಪತ್ತೆ ಮಾಡುವ ವಿಧಾನವಾಗಿದೆ. ಆದರೆ, ಇದೇ ಮೊದಲ ಬಾರಿ ಕೊಲೆಯಾಗಿದ್ದ ವ್ಯಕ್ತಿಯನ್ನು ಗುರುತಿಸಿ, ಇಡೀ ಪ್ರಕರಣದ ಆರೋಪಿಗಳ ಪತ್ತೆ ಮಾಡಲು ಇದೇ ಕುರುಹು ಸಹಕಾರಿಯಾಗಿದ್ದು ಗಮನಾರ್ಹ.

ಮೊದಲ ಬಾರಿಗೆ ಎಂಸಿಸಿಟಿಎನ್‌ಎಸ್‌ ಅಪ್ಲಿಕೇಷನ್‌ ಬಳಸಿ, ಮೃತ ವ್ಯಕ್ತಿಯನ್ನು ಪತ್ತೆ ಮಾಡಿ ಯಶಸ್ವಿಯಾದ ಪೊಲೀಸರಿಗೆ ಅಪ್ಲಿಕೇಷನ್‌ ಮೂಲಕ ಇಂತಹ ಕೊಲೆ ಪ್ರಕರಣ ಗಳನ್ನು ಬೇಧಿಸುವಲ್ಲೂ ಸಹಕಾರಿಯಾಗಿದೆಯೆಂಬುದು ಸಾಬೀತಾಯಿತು. ದಾವಣಗೆರೆ ಎಫ್‌ಪಿಬಿ ಪೊಲೀಸರು(FPB Police davanagere) ಅಪ್ಲಿಕೇಷನ್‌ ಬಳಸುವ ಮೂಲಕ ಮೃತ ವ್ಯಕ್ತಿಯನ್ನು ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಈ ಅಪ್ಲಿಕೇಷನ್‌ ಮೂಲಕ ಸಾಕಷ್ಟುಪ್ರಕರಣ ಬೇಧಿಸಲು ಸಹಕಾರಿ ಎಂಬ ವಿಶ್ವಾಸವನ್ನು ಜಿಲ್ಲಾ ಪೊಲೀಸ್‌ ಇಲಾಖೆ ವ್ಯಕ್ತಪಡಿಸಿದರು.

 

ಪೂಜಾ ಹಡಪದ ಹತ್ಯೆ ಪ್ರಕರಣ: ಬಿಜೆಪಿ ಕಾರ‍್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣ ವಾಪಸ್‌ !

Latest Videos
Follow Us:
Download App:
  • android
  • ios