ಬಳ್ಳಾರಿ ಸ್ವಾಂಜ್ ಐರನ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ, ಇಬ್ಬರಿಗೆ ಗಾಯ, ಕಾರ್ಖಾನೆಯಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿ ಹೇಳಿದೆ.
ಬಳ್ಳಾರಿ (ಅ.28) ಸ್ವಾಂಜ್ ಕಾರ್ಖಾನೆಯಲ್ಲಿ ಅವಘಡ ಸಂಭವಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿ ಹೇಳುತ್ತಿದೆ. ಸಂಡೂರು ತಾಲೂಕಿನ ರಂಜಿತಪುರ ಗ್ರಾಮದ RIPL ಕಾರ್ಖಾನೆಯಲ್ಲಿ ಘಟನೆ ನಡೆದಿದ್ದು, ಇಬ್ಬರು ಕಾರ್ಮಿಕರಿಗೆ ಗಾಯವಾಗಿದೆ. ಇಬ್ಬರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಶಾಮಕ ದಳ ಸಿಬ್ಬಂಧಿ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸಂಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿದ್ಯುತ್ ಕೇಬಲ್ ಶಾರ್ಟ್ ಸರ್ಕ್ಯೂಟ್ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ಇದರಿಂದ ಏಕಕಾಕಿ ಪ್ಲಾಂಟ್‌ನಲ್ಲಿದಟ್ಟವಾದ ಬೆಂಕಿ ಕಾಣಿಸಿಕೊಂಡಿತ್ತು.
ವೈಟಿಪಿಎಸ್ ಘಟಕದಲ್ಲಿ ಬೆಂಕಿ ದುರಂತ
ಇಂದು ಬೆಳಗ್ಗೆ ರಾಯಚೂರಿನ ವೈಟಿಪಿಎಸ್ ಘಟಕದಲ್ಲೂ ಬೆಂಕಿ ದುರಂತ ವರದಿಯಾಗಿದೆ. ಬೆಂಕಿಯ ಕೆನ್ನಾಲಿಗೆ ಕನವೇರ್ ಬೆಲ್ಟ್ ಸುಟ್ಟು ಭಸ್ಮವಾಗಿದೆ. ರಾಯಚೂರು ತಾಲೂಕಿನ ಯರಮರಸ್ ಬಳಿಯ ವೈಟಿಪಿಎಸ್ ಘಟಕದಲ್ಲಿ ಘಟನೆ ನಡೆದಿದೆ. ರಾತ್ರಿ ವೇಳೆ ಕಲ್ಲಿದ್ದಲು ಸಾಗಾಟದ ವೇಳೆ ಕಾಣಿಸಿಕೊಂಡ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಸುಮಾರು 1 ಕೋಟಿ ರೂ.ಮೌಲ್ಯದ ಯಂತ್ರಗಳು ಸುಟ್ಟು ಭಸ್ಮವಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸಿಬ್ಬಂದಿಗಳು ಜೀವ ಉಳಿಸಿಕೊಳ್ಳಲು ಕೆಲಸ ಬಿಟ್ಟು ಓಡಿದ್ದಾರೆ. ಬೆಂಕಿ ದುರಂತಕ್ಕೆ ವೈಟಿಪಿಎಸ್ ಅಧಿಕಾರಿಗಳ ನಿರ್ಲಕ್ಷ್ಯ ದ ಆರೋಪ ಕೇಳಿಬಂದಿದೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕೆಪಿಎಸ್ ಸಿ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬೆಂಕಿಯಿಂದ ಗಾಯಗೊಂಡಿದ್ದ ಯುವತಿ ಸಾವು
ಬಾಗಲಕೋಟೆಯಲ್ಲಿ ಇತ್ತೀಚೆಗೆ ದೀಪಾವಳಿ ಹಬ್ಬದ ವೇಳೆ ದೀಪದಿಂದ ಹೊತ್ತಿದ ಬೆಂಕಿ ಪ್ರಕರಣದಲ್ಲಿ ಗಾಯಗೊಂಡಿದ್ದ 22ರ ಹರೆಯದ ಯುವತಿ ಸ್ನೇಹ ಮೇದಾರ ಮೃತಪಟ್ಟಿದ್ದಾಳೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಸ್ನೇಹಾ ಮೇದಾರ ಇಂದು ಮೃತಪಟ್ಟಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಮನೆ ಮುಂದಿನ ಬಾಗಿಲು ಬಳಿ ಹಚ್ಚಿದ್ದ ದೀಪ,ಮನೆ ಮುಂದೆ ಬಿದ್ದ ಆಯಿಲ್ ಗೆ ತಗುಲಿದೆ. ಬೆಳಗಿನ ಜಾವ 3 ಗಂಟೆ ವೇಳೆ ಈ ಬೆಂಕಿ ಇಡೀ ಮನೆಗೆ ಆವರಿಸಿತ್ತು. ಘಟನೆಯಲ್ಲಿ ಮನೆ ಮುಂದಿನ ಸಿಲಿಂಡರ್ ಬ್ಲಾಷ್ಟ್ ಆಗಿತ್ತು.ಒಂದು ಅಂತಸ್ತಿನ ಮನೆ ಸುಟ್ಟು ಕರಕರಲಾಗಿತ್ತು. ಮನೆ ಮುಂದೆ ಪಾರ್ಕ್ ಮಾಡಿದ್ದ ಎಂಟು ಬೈಕ್ ಸುಟ್ಟಿದ್ದವು. ಈ ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದರು. ಈ ಪೈಕಿ ಸ್ನೇಹಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
