ಸೀ ಲಿಂಕ್ ಬ್ರಿಡ್ಜ್ ಮೇಲೆ ನಿಂತು ಸಮುದ್ರಕ್ಕೆ ಹಾರಲು ಯತ್ನಿಸಿದ ಮಹಿಳೆಯನ್ನು ಟ್ರಾಫಿಕ್ ಪೊಲೀಸ್ ರಕ್ಷಿಸಿದ ವಿಡಿಯೋ ವೈರಲ್ ಆಗಿದೆ. ಹತ್ತಿರ ಬಂದೆ ಹಾರುತ್ತೇನೆ ಎಂದು ಬೆದರಿಸುತ್ತಿದ್ದ ವೇಳೆ ಕ್ಷಣಾರ್ಧದಲ್ಲೇ ಮಹಿಳೆಯನ್ನು ಹಿಡಿದು ರಕ್ಷಿಸಲಾಗಿದೆ.

ಮುಂಬೈ(ಆ.03) ಮುಂಬೈ ವಾಶಿ ಬ್ರಿಡ್ಜ್ ಭಾರಿ ಪ್ರಸಿದ್ಧ. ಸಮುದ್ರ ಸೇತುವೆ ಎಂದೇ ಕೆರೆಯಿಸಿಕೊಳ್ಳುವ ಈ ಸೇತುವೆ ಅಂಚಿನಲ್ಲಿ ನಿಂತ ಮಹಿಳೆಯೊಬ್ಬರು ನದಿ ಹಾರುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಮಹಿಳೆಯನ್ನು ಮನವೋಲಿಸುವ ಪ್ರಯತ್ನ ನಡೆದರೂ ಯಾರ ಮಾತು ಕೇಳಿಲ್ಲ. ಇದೇ ವೇಳೆ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸೇತುವೆ ಅಂಚಿನಲ್ಲಿ ನಿಂತಿದ್ದ ಮಹಿಳೆಯನ್ನು ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮುಂಬೈನಲ್ಲಿ ಸುರಿದ ಭಾರಿ ಮಳೆಯಿಂದ ವಾಶಿಬಳಿ ಇರುವ ಸಮುದ್ರ ಕಿನಾರೆ ನೀರಿನ ಮಟ್ಟವೂ ಏರಿಕೆಯಾಗಿದೆ. ಸೀ ಲಿಂಕ್ ಬ್ರಿಡ್ಜ್ ಅಡಿಯಲ್ಲಿ ಬಾರಿ ಪ್ರಮಾಣದ ನೀರು ಏರಿಕೆಯಾಗಿದೆ. ಇದೇ ವೇಳೆ ಮಹಿಳೆಯೊಬ್ಬರು ಕುಟುಂಬದ ಕಲಹ ಹಾಗೂ ವೈಯುಕ್ತಿ ಕಾರಣಗಳಿಂದ ಬದುಕು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ವಾಶಿ ಸೇತುವೆ ಅಂಚಿನಲ್ಲಿ ನಿಂತು ತಾನು ಈಗಲೇ ಹಾರುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಗಂಡನಿಗಾಗಿ ತನ್ನ ತಟ್ಟೆಯ ಊಟವನ್ನೂ ಕೊಡೋ ಹೆಂಡ್ತಿ, ವಿಡಿಯೋ ವೈರಲ್‌; ನೆಟ್ಟಿಗರು ಗರಂ

ಮುಂಬೈ ಪುಣೆ ಮುಖ್ಯ ರಸ್ತೆಯಲ್ಲೇ ಈ ಹೈಡ್ರಾಮ ನಡೆದಿದೆ. ಸೇತುವೆ ಅಂಚಿನಲ್ಲಿ ನಿಂತು ಮಹಿಳೆಯನ್ನು ಸಮಾಧಾನಿಸುವ ಪ್ರಯತ್ನ ನಡೆದಿದೆ. ಆದರೆ ಮಹಿಳೆ ಮಾತ್ರ ಯಾರ ಮಾತು ಕೇಳಿಲ್ಲ. ಈ ಹೈಡ್ರಾಮದಿಂದ ಸೇತುವೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಇದೇ ವೇಳೆ ಟ್ರಾಫಿಕ್ ಸರಿಪಡಿಸಲು ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರಿಗೆ ಮಹಿಳೆ ಸೇತುವೆ ಅಂಚಿನಲ್ಲಿ ನಿಂತು ಹಾರುವ ಪ್ರಯತ್ನ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

Scroll to load tweet…

ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಆಕೆಯನ್ನು ಮನವೋಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಇದೇ ವೇಳೆ ಸೇತುವೆ ಪಕ್ಕದಲ್ಲಿದ್ದ ಆಕೆಯ ಕುಟುಂಬಸ್ಥರನ್ನು ಹಾಗೂ ಇತರರನ್ನು ದೂರ ಸರಿಯುವಂತೆ ಸೂಚಿಸಿದ್ದಾರೆ. ಇತ್ತ ಎಡಭಾಗದಲ್ಲಿ ಟ್ರಾಫಿಕ್ ಪೊಲೀಸ್ ನಿಂತು ಕೊಂಡರೆ ಬಲ ಭಾಗದಲ್ಲಿ ಮತ್ತೋರ್ವ ಪೊಲೀಸ್ ನಿಂತು ಕೊಂಡು ಸಮಾಧಾನ ಪಡಿಸಲು ಮುಂದಾಗಿದ್ದಾರೆ. ಮಹಿಳೆಯ ಬಲ ಭಾಗದಲ್ಲಿ ನಿಂತಿದ್ದ ಟ್ರಾಫಿಕ್ ಪೊಲೀಸರಿಗೆ ಉತ್ತರ ಕೊಡುವಷ್ಟರಲ್ಲೇ, ಎಡಭಾಗದಲ್ಲಿದ್ದ ಪೊಲೀಸ್ ಒಂದು ಕ್ಷಣವೂ ತಡಮಾಡದೇ ಮಹಿಳೆಯನ್ನು ಗಟ್ಟಿಯಾಗಿ ಹಿಡಿದಿದ್ದಾರೆ. 

Viral Video : ನಾಯಿಯಾಗಿ ಬದಲಾದ ಮನುಷ್ಯನ ವಾಕಿಂಗ್ ವೀಡಿಯೋ ವೈರಲ್

ಇತರ ಪೊಲೀಸರು ನೆರವು ನೀಡಿದ್ದಾರೆ. ಬಳಿಕ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಮಹಿಳೆಯನ್ನು ಲಾ ಆ್ಯಂಡ್ ಆರ್ಡರ್ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಘಟನೆಯ ವಿಡಿಯೋ ಭಾರಿ ವೈರಲ್ ಆಗಿದೆ. ಪೊಲೀಸರ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆಕೆ ಮಾನಸಿಕವಾಗಿ ಕುಗ್ಗಿ ಹೋದಂತೆ ಕಾಣುತ್ತಿದೆ. ಜೊತೆಗೆ ಆಕೆಯಲ್ಲಿ ಬದುಕುವ ಆಸೆಯೂ ಕಾಣುತ್ತಿದೆ. ಇದರ ನಡುವೆ ಪೊಲೀಸರ ಕಾರ್ಯಕ್ಕೆ ಅಭಿನಂದನೆಗಳು. ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೀರಿ ಎಂದು ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.