ಆ್ಯಪ್ ಮೂಲಕ ಲೈವ್ ಸೆಕ್ಸ್ ಶೋ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದಾಖಲೆಯ ಆ್ಯಪ್ಲಿಕೇಶನ್ ಡೌನ್ಲೋಡ್!
ಇದು ಲೈವ್ ಸೆಕ್ಸ್ ಶೋ. ಗೂಗಲ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಡೌನ್ಲೋಡ್ ಮಾಡಿದರೆ ಸಾಕು. ಲೈವ್ ಆಗಿ ಸೆಕ್ಸ್ ವೀಕ್ಷಿಸಲು 1,000 ರೂಪಾಯಿಂದ 10,000 ರೂಪಾಯಿ ವರೆಗೆ ಚಾರ್ಜ್ ಮಾಡಲಾಗುತ್ತದೆ. ಈ ಅತೀ ದೊಡ್ಡ ಸೆಕ್ಸ್ ರಾಕೆಟ್ ಜಾಲ ಬಹಿರಂಗವಾಗಿದೆ.

ಮುಂಬೈ(ನ.06) ಡಿಜಿಟಲ್ ಕ್ರಾಂತಿ ಬಳಿಕ ಭಾರತದಲ್ಲಿ ಎಲ್ಲವೂ ಡಿಜಿಟಲೀಕರಣವಾಗಿದೆ. ಹಣ ಪಾವತಿಯಿಂದ ಹಿಡಿದು ಎಲ್ಲವೂ ಡಿಜಿಟಲ್. ಇದರ ಜೊತೆಗೆ ಹಲವು ಅಕ್ರಮಗಳು ಇದೇ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ನಡೆಯುತ್ತಿದೆ. ಮಹದಾವೇ ಬೆಟ್ಟಿಂಗ್ ಆ್ಯಪ್ ಪ್ರಕರಣ ಬೆನ್ನಲ್ಲೇ ಇದೀಗ ಲೈವ್ ಸೆಕ್ಸ್ ಶೋ ರಾಕೆಟ್ ಬಯಲಾಗಿದೆ. ಆ್ಯಪ್ ಡೌನ್ಲೋಡ್ ಮಾಡಿಕೊಂಡ ಬಳಕೆದಾರರು ನಿರ್ದಿಷ್ಟ ಹಣ ಪಾವತಿಸಿ ಲೈವ್ ಆಗಿ ಸೆಕ್ಸ್ ಶೋ ವೀಕ್ಷಿಸುವ ಅವಕಾಶ ಪಡೆಯಲಿದ್ದಾರೆ. ಇದೀಗ ಈ ಲೈವ್ ಸೆಕ್ಸ್ ಶೋ ರಾಕೆಟ್ ಜಾಲ ಬಹಿರಂಗವಾಗಿದೆ. ಮುಂಬೈನಲ್ಲಿ ನಡೆಯುತ್ತಿದ್ದ ಈ ಜಾಲವನ್ನು ವರ್ಸೋವಾ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಗೂಗಲ್ ಪ್ಲೇಸ್ಟೋರ್‌ನಲ್ಲಿರುವ ಪಿಹು ಆಫೀಶಿಯಲ್ ಆ್ಯಪ್(Pihu Official App) ಅನ್ನೋ ಆ್ಯಪ್ ಲೈವ್ ಸೆಕ್ಸ್ ಶೋ ನಡೆಸುತ್ತಿದೆ. ಬಳಕೆದಾರರಿಗೆ 1,000 ರೂಪಾಯಿಯಿಂದ 10,000 ರೂಪಾಯಿ ಚಾರ್ಜ್ ಮಾಡಲಾಗುತ್ತದೆ ಅನ್ನೋ ಮಾಹಿತಿ ಪಡೆದ ವರ್ಸೋವಾ ಪೊಲೀಸರು, ಕಾರ್ಯಚರಣೆ ಆರಂಭಿಸಿದ್ದರು. ಮಾಹಿತಿ ಸತ್ಯಾಸತ್ಯತೆ ಪರಿಶೀಲಿಸಿದ ಪೊಲೀಸರು ರಹಸ್ಯವಾಗಿ ವರ್ಸೋವಾದಲ್ಲಿ ವಾಣಿಜ್ಯ ಕಟ್ಟಡಜಲ್ಲಿ ನಡೆಯುತ್ತಿದ್ದ ಈ ಲೈವ್ ಸೆಕ್ಸ್ ಶೋ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಲೈವ್ ಸ್ಟ್ರೀಮಿಂಗ್‌ನಲ್ಲಿ ಎಲ್ಲವನ್ನೂ ತೋರಿಸ್ತಿದ್ದ ಜೋಡಿಗಳಿಗೆ ಸಂಕಟ!
ಪೊಲೀಸರ ದಾಳಿ ವೇಳೆ ಲೈವ್ ಸೆಕ್ಸ್ ಶೋ ನಡೆಯುತ್ತಿತ್ತು. ದಾಳಿ ವೇಳೆ 20 ವರ್ಷದ ತನಿಶಾ, 34 ವರ್ಷದ ತಮನ್ನಾ ಹಾಗೂ 27 ವರ್ಷದ ರುದ್ರ ನಾರಾಯಣ್ ಆರೋಪಿಗಳನ್ನು ಬಂಧಿಸಲಾಗಿದೆ. ಈ ಆ್ಯಪ್ ಮೂಲಕ ಹಲವು ಯುವತಿಯರು ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಬಳಿಕ ಲೈವ್ ಆಗಿ ಸೆಕ್ಸ್ ನಡೆಸುತ್ತಿದ್ದರು. ಇನ್ನು ಯುವತಿಯರ ಹಸ್ತಮೈಥುನ, ಬೆತ್ತಲೇ ಶೋಗಳು ಈ ಆ್ಯಪ್‌ನಲ್ಲಿ ಲೈವ್ ಆಗಿ ನಡೆಯುತ್ತಿತ್ತು.
ರಹಸ್ಯವಾಗಿ ನಡೆಯುತ್ತಿದ್ದರೂ ಆ್ಯಪ್ ಡೌನ್ಲೋಡ್ ಸಂಖ್ಯೆ ಪ್ರಮಾಣ ಹೆಚ್ಚಿದೆ. ಇನ್ನು ಪ್ರತಿಯೊಬ್ಬ ಬಳಕೆದಾರನ ಆಸಕ್ತಿಯ ವಿಷಯ, ಲೈವ್ ಸಮಯಕ್ಕೆ ತಕ್ಕಂತೆ ಸಾವಿರ ರೂಪಾಯಿಂದ 10,000 ರೂಪಾಯಿ ವರೆಗೆ ಚಾರ್ಜ್ ಮಾಡಲಾಗುತ್ತಿತ್ತು. ಪ್ರತಿ ದಿನ ಲಕ್ಷ ಲಕ್ಷ ರೂಪಾಯಿ ಆದಾಯಗಳಿಸುತ್ತಿತ್ತು. ಇದೀಗ ಈ ಜಾಲವನ್ನು ವರ್ಸೋವಾ ಪೊಲೀಸರು ಪತ್ತೆ ಹಚ್ಚಿದ್ದಾರೆ.
ವೇಶ್ಯಾವಾಟಿಕೆ ದಂಧೆ: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟಿ ಮತ್ತು ರೂಪದರ್ಶಿ
ಮುಂಬೈನಲ್ಲಿ ಆ್ಯಪ್ ಮೂಲಕ ಲೈವ್ ಸೆಕ್ಸ್ ಶೋ ನಡೆಸಿ ಬಂಧನಕ್ಕೊಳಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ಹಲವು ವರ್ಷಗಳಿಂದ ಈ ದಂಧೆ ನಡೆಯುತ್ತಿದೆ.