ಮುಂಬೈ ರಾಬರಿ ಮುಗಿಸಿ ಬೆಂಗಳೂರಿಗೆ ಬಂದ ಪಂಡಿತ್ ಗ್ಯಾಂಗ್; ಜ್ಯೂವೆಲ್ಲರಿ ಶಾಪ್ ಮಾಲೀಕನಿಗೆ ಶೂಟ್ ಮಾಡಿದ್ರು!
ಕಳೆದ ವಾರವಷ್ಟೇ ಮುಂಬೈನಲ್ಲಿ ರಾಬರಿ ಮಾಡಿಕೊಂಡು ಬೆಂಗಳೂರಿಗೆ ಆಗಮಿಸಿದ್ದ ಪಂಡಿತ್ ಗ್ಯಾಂಗ್, ಕೋಡಿಗೆಹಳ್ಳಿ ಜ್ಯೂವೆಲ್ಲರಿ ಶಾಪ್‌ಗೆ ರಾಬರಿ ಮಾಡಲು ಬಂದು ಶೂಟೌಟ್ ಮಾಡಿದ್ದಾರೆ.
ಬೆಂಗಳೂರು (ಮಾ.17): ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಕೊಡಿಗೆಹಳ್ಳಿಯ ಜ್ಯೂವೆಲ್ಲರಿ ಶಾಪ್‌ನಲ್ಲಿ ನಡೆದ ಶೂಟೌಟ್ ಪ್ರಕರಣವೊಂದಕ್ಕೆ ಸಂಬಂಧಪಟ್ಟ ಆರೋಪಿಗಳು ರಾಷ್ಟ್ರಮಟ್ಟದ ಆರೋಪಿಗಳಾಗಿದ್ದಾರೆ. ಕಳೆದೊಂದು ವಾರದ ಹಿಂದೆ ಮುಂಬೈನ ಜ್ಯೂವೆಲ್ಲರಿ ಶಾಪ್‌ನಲ್ಲಿ ರಾಬರಿ ಮಾಡಿಕೊಂಡು ಸೀದಾ ಬೆಂಗಳೂರಿಗೆ ಬಂದಿದ್ದ ಮಧ್ಯಪ್ರದೇಶದ ಗ್ಯಾಂಗ್ ಕೋಡಿಗೆಹಳ್ಳಿಯ ಜ್ಯೂವೆಲ್ಲರಿ ಶಾಪ್‌ಗೆ ರಾಬರಿಗಾಗಿ ಬಂದು ಅಂಗಡಿ ಮಾಲೀಕ ಹಾಗೂ ಸಹಚರನಿಗೆ ಶೂಟ್ ಮಾಡಿ ಎಸ್ಕೇಪ್ ಆಗಿದ್ದರು. ಈಗ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೊಡಿಗೆಹಳ್ಳಿಯಲ್ಲಿ ಶೂಟ್ ಮಾಡಿ ಬೈಕ್‌ನಲ್ಲಿ ಪರಾರಿ ಆಗಿದ್ದ ಆರೋಪಿಗಳ ಜಾಡು ಹಿಡಿದ ಪೊಲೀಸರು ನಾಲ್ವರು ಆರೋಪಿಗಳಾದ ಖಾನಾ ಪಂಡಿತ್, ಆಶು ಪಂಡಿತ್, ಮೋಸೆ ಅಲಿಯಾಸ್ ಬಂಟಿ, ಸೂರಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ವೇಳೆ ಆರೋಪಿಗಳ ಯಡವಟ್ಟು ಮಾಡಿಕೊಂಡಿದ್ದು, ಆರೋಪಿಗಳ ಪೈಕಿ ಸೂರಜ್ ಕಾಲಿಗೆ ಗುಂಡೇಟು ಬದ್ದಿದೆ. ಆಶು ಪಂಡಿತ್ ಮಾಡಿದ ಯಡವಟ್ಟಿಗೆ ಸೂರಜ್ ಗಂಟಲಿಗೆ ಗುಂಡೇಟು ಬಿದ್ದಿತ್ತು. ಈಗ ಸದ್ಯ ಸೂರಜ್ ಗ್ವಾಲಿಯರ್‌ನ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನ ಆರೋಪಿಗಳ ಪೈಕಿ ಆಶು ಪಂಡಿತ್, ಖಾನಾ ಪಂಡಿತ್ ಮೇಲೆ 20ಕ್ಕೂ ಹೆಚ್ಚು ಪ್ರಕರಣದಲ್ಲಿ ಬೇಕಾಗಿದ್ದಾರೆ. ಕಳೆದ ವಾರವಷ್ಟೆ ಇದೇ ರೀತಿ ಮುಂಬೈ ರಾಬರಿ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದರು.
ಬೆಳ್ಳಂಬೆಳಗ್ಗೆ ಜ್ಯುವೆಲ್ಲರಿ ಶಾಪ್ ಮಾಲೀಕರ ಮೇಲೆ ಗುಂಡಿನ ದಾಳಿ, ಇಬ್ಬರ ಸ್ಥಿತಿ ಗಂಭೀರ
ಕೊಡಿಗೆಹಳ್ಳಿಯ ಜ್ಯೂವೆಲ್ಲರಿ ಶಾಪ್‌ನಲ್ಲಿ ನಡೆದ ಶೂಟೌಟ್ ಪ್ರಕರಣ ಇಡೀ ಬೆಂಗಳೂರಿನ ಜ್ಯೂವೆಲ್ಲರಿ ಅಂಗಡಿಗಳ ಮಾಲೀಕರನ್ನೇ ಬೆಚ್ಚಿ ಬೀಳಿಸಿತ್ತು. ರಾಬರಿಗಾಗಿ ಬಂದ ಗ್ಯಾಂಗ್ ಅಂಗಡಿ ಮಾಲೀಕನನ್ನೇ ಶೂಟ್ ಮಾಡಿ ಪರಾರಿಯಾಗಿದ್ದ ಘಟನೆಯಿಂದ ಕೆಲಸ ಮಾಡುವುದಕ್ಕೆ ಬೆಚ್ಚಿ ಬೀಳುವಂತಾಗಿತ್ತ. ಆದರೆ, ಬೆಂಗಳೂರು ಪೊಲೀಸರು ರಾಬರಿ ಮಾಡಲು ಬಂದು ಶೂಟೌಟ್ ಮಾಡಿದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಎಲ್ಲ ಆರೋಪಿಗಳು ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಉತ್ತರ ಭಾರತ ಮೂಲದವರು ಎಂದು ಪತ್ತೆಯಾಗಿದೆ. ಇನ್ನು ಆರೋಪಿಗಳು ಬೆಂಗಳೂರು ಮಾತ್ರವಲ್ಲದೇ ಭಾರತದ ದೊಡ್ಡ ದೊಡ್ಡ ನಗರಗಳ ಸಣ್ಣ ಸಣ್ಣ ಜ್ಯೂವೆಲ್ಲರಿ ಶಾಪ್‌ಗಳನ್ನು ರಾಬರಿ ಮಾಡುವುದೇ ಇವರ ಉದ್ದೇಶವಾಗಿತ್ತು ಎಂಬುದು ಪೊಲೀಸರಿಗೆ ತಿಳಿದುಬಂದಿದೆ.
ಕೊಡಿಗೆಹಳ್ಳಿಯಲ್ಲಿ ನಡೆದ ಶೂಟೌಟ್ ಪ್ರಕರಣದ ಆರೋಪಿಗಳ ಟಾರ್ಗೆಟ್ ಏನು ಗೊತ್ತಾ? ದೊಡ್ಡ ದೊಡ್ಡ ಮಹಾನಗರಗಳಲ್ಲಿ ಇರುವ ಸಣ್ಣ ಸಣ್ಣ ಜ್ಯುವೆಲರಿಗಳೇ ಇವರ ಮುಖ್ಯ ಟಾರ್ಗೆಟ್ ಆಗಿರುತ್ತಿತ್ತು. ದೊಡ್ಡ ಜ್ಯುವೆಲರಿಗಳಲ್ಲಿ ಸಾಕಷ್ಟು ಜನರು ಕೆಲಸ ನಿರ್ವಹಿಸುತ್ತಾರೆ. ಜೊತೆಗೆ, ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಭದ್ರತಾ ಸಿಬ್ಬಂದಿಯೂ ಇರುತ್ತಾರೆ. ಅಂತಹ ದೊಡ್ಡ ಜ್ಯೂವೆಲ್ಲರಿ ಶಾಪ್‌ಗಳಿಗೆ ಮೂರ್ನಾಲ್ಕು ಜನರು ಹೋದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ, ಒಬ್ಬರು ಅಥವಾ ಇಬ್ಬರು ಮಾತ್ರ ಕೆಲಸ ಮಾಡುವ ಸಣ್ಣ ಸಣ್ಣ ಜ್ಯುವೆಲರಿ ಶಾಪ್‌ಗಳನ್ನೇ ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು.
ಜ್ಯೂವೆಲ್ಲರ್ಸ್ ಮಾಲೀಕನ ಮನೆ ಮೇಲೆ ಐಟಿ ದಾಳಿ; ಬಿಹಾರ ಮೂಲದ ಅಪ್ರಾಪ್ತ ಬಾಲಕಿಯರು ಪತ್ತೆ!
ಇನ್ನು ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಕೊಡಿಗೆಹಳ್ಳಿಯ ಸಣ್ಣ ಜ್ಯೂವೆಲ್ಲರಿ ಶಾಪ್‌ಗೆ ನುಗ್ಗಿ ಗನ್ ತೋರಿಸಿ ರಾಬರಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಗನ್ ತೋರಿಸಿ ಬೆದರಿಕೆ ಹಾಕದರೂ ಚಿನ್ನಾಭರಣ ಮತ್ತು ಹಣವನ್ನು ಕೊಡದ ಅಂಗಡಿ ಮಾಲೀಕನ ಮೇಲೆ ಅಂಗಡಿ ಹೊರಗಿನಿಂದ ಶೂಟ್ ಮಾಡಿದ್ದಾರೆ. ಆಗ ಗುಂಡು ತಗುಲದಿದ್ದಾಗ ಪುನಃ ಅಂಗಡಿ ಒಳಗೆ ಹೋಗಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಇದರಲ್ಲಿ ಅಂಗಡಿ ಮಾಲೀಕ ಅಪ್ಪೂರಾವ್ ಅವರಿಗೆ 2 ಗುಂಡು ಹಾಗೂ ಅಂದಾರಾಮ್ ಎಂಬ ಸಹ ಸಿಬ್ಬಂದಿಗೆ ಒಂದು ಗುಂಡು ತಗುಲಿ ಗಾಯಗೊಂಡಿದ್ದಾರೆ. ಇನ್ನು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.