* ಪತ್ನಿಗೆ ಆಸಿಡ್ ಕುಡಿಸಿದ ಪಾಪಿ ಪತಿ* ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲು* ಆರೋಪಿಯನ್ನು ಕೂಡಲೇ ಬಂಧಿಸಲು ಒತ್ತಾಯ

ಗ್ವಾಲಿಯರ್( ಜು. 20) ಇದೊಂದು ಘೋರ ಘಟನೆ. ಪತ್ನಿಗೆ ಆಸಿಡ್ ಸೇವನೆ ಮಾಡಲು ಒತ್ತಾಯ ಮಾಡಿದ್ದಾನೆ ಈ ಪಾಪಿ ಪತಿ. ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು ಆಕೆಯ ದೇಹದ ಒಳಗಿನ ಅಂಗಗಳಿಗೆ ಹಾನಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಸೋಶಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡಿದ್ದು ಆರೋಪಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಇನ್ನುವರೆಗೆ ಆರೋಪಿಯ ಬಂಧನವಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಶೃಂಗೇರಿ; ಆಸಿಡ್ ಎರಚಿದ್ದ ದುರುಳರಿಗೆ ಕೊನೆಗೂ ಜೀವಾವಧಿ

ಮಧ್ಯಪ್ರದೇಶದಲ್ಲಿ ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಗಾಯಗೊಂಡಿರುವ ಮಹಿಳೆಯ ಹೇಳಿಕೆ ದಾಖಲು ಮಾಡಿಸಿಕೊಳ್ಳಲಾಗಿದೆ. ಮಧ್ಯಪ್ರದೇಶದ ಸಿಎಂ ಶಿವರಾಜ್ ಚೌಹಾಣ್ ಆರೋಪಪಿಯನ್ನು ಕೂಡಲೇ ಬಂಧಿಸಲು ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮಧ್ಯಪ್ರದೇಶದ ಡಿಜಿಪಿಗೂ ಪತ್ರ ಬರೆದಿದ್ದಾರೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Scroll to load tweet…
Scroll to load tweet…