ಸೇತುವೆಯಿಂದ ಕಾಲುವೆಗುರುಳಿದ ಬಸ್ | ಮೂರು ಗಂಟೆ ನೀರಲ್ಲೇ ಮುಳುಗಿದ್ದ ಬಸ್ | 42 ಜನ ದಾರುಣ ಸಾವು 

ಭೋಪಾಲ್(ಫೆ.16): ಕಾಲುವೆಗೆ ಬಸ್ ಉರುಳಿ 42 ಜನರ ಸಾವನ್ನಪ್ಪಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಸೇತುವೆಯಿಂದ ಬಸ್ ಕಾಲುವೆಗೆ ಬಿದ್ದ ಘಟನೆ ನಡೆದಿದ್ದು ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ ಬಹಳಷ್ಟು ಜನರು ಪತ್ತೆಯಾಗಿಲ್ಲ.

ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ರಾಂಪುರ ನಾಯ್ಕಿನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಳಗ್ಗೆ ಸರಿ ಸುಮಾರು 8.30ಕ್ಕೆ ಬಸ್ ಕಾಲುವೆಗೆ ಉರುಳಿದೆ. 42 ಮೃತದೇಹವನ್ನು ಇಲ್ಲಿಯವರೆಗೆ ಹುಡುಕಿ ತೆಗೆಯಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ರೇವಾ ವಿಭಾಗೀಯ ಕಮಿಷನರ್ ರಾಜೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.

ಬಾಗಲಕೋಟೆ: ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು

ಈಗಲೂ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ನಾಪತ್ತೆಯಾದವರಿಗಾಗಿ ಸ್ಟಾಪ್ ಡ್ಯಾಮ್ ತನಕ ಶೋಧ ನಡೆಸಲಾಗುತ್ತಿದೆ. ಅಪಘಾತದ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದಿದ್ದಾರೆ.

Scroll to load tweet…

ಬಸ್ ಸಿಧಿ ಜಿಲ್ಲೆಯಿಂದ ಸಟ್ನಾಗೆ ಪ್ರಯಾಣಿಸುತ್ತಿತ್ತು. 50ಕ್ಕಿಂತಲೂ ಹೆಚ್ಚು ಜನರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿತ್ತು. ನೀರಿನಿಂದ ಬಸ್‌ನ್ನು ಹೊರ ತೆಗೆಯಲು ಸುಮಾರು ಮೂರು ಗಂಟೆ ಸಮಯ ಹಿಡಿದಿದೆ ಎನ್ನಲಾಗಿದೆ.

ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಅಪಘಾತದಲ್ಲಿ ಸಾವನ್ನಪ್ಪಿದವರ ನೇರ ಸಂಬಂಧಿಗೆ 2 ಲಕ್ಷ ಪರಿಹಾರ ಘೋಷಿಸಲಾಗಿದೆ. ಗಂಭೀರ ಗಾಯಗಳಾದವರಿಗೆ 50 ಸಾವಿರ ಪರಿಹಾರ ನೀಡುವ ಭರವಸೆ ನೀಡಲಾಗಿದೆ.

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕ್ಯಾಬಿನೆಟ್ ಸಚಿವರಾದ ತುಳಿಸ ಸಿಲಾವತ್ ಮತ್ತು ರಾಮ್ ಕಿಲ್ವಾನ್ ಪಟೇಲ್ ಅವರನ್ನು ಘಟನಾ ಸ್ಥಳಕ್ಕೆ ಕಳುಹಿಸಿದ್ದಾರೆ.