ಬಾಗಲಕೋಟೆ(ಫೆ.12): ಬೆಳಗಾವಿ ರಾಯಚೂರು ಹೆದ್ದಾರಿಯಲ್ಲಿ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟು ಮತ್ತೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು(ಶುಕ್ರವಾರ) ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಲೋಕಾಪುರದ ಕಡೆಯಿಂದ ಬರುತ್ತಿದ್ದ ಕಾರು, ಮತ್ತೊಂದು ಕಾರು ಬಾಗಲಕೋಟೆ ಕಡೆಯಿಂದ ಲೋಕಾಪುರದ ಕಡೆ ಸಂಚರಿಸುತ್ತಿದ್ದ  ವೇಳೆ ಛಬ್ಬಿ ಕ್ರಾಸ್ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿ ನವನಗರದ ಬಾಂಬೆ ಕಾಲೋನಿಯ ರಂಗಪ್ಪ ಸಾಬಣ್ಣ ಕಟ್ಟಿಮನಿ(24) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದಾಡಿಬಾವಿ ಎಲ್.ಟಿ ತಾಂಡಾದ ಸಾಗರ ನಿಂಗಪ್ಪ ಲಮಾಣಿ(29) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. 

ಹೊಸಪೇಟೆ: ಕಾರಿಗೆ ಲಾರಿ ಡಿಕ್ಕಿ, ಬಿಇಒಗೆ ಗಾಯ

ಕಾರನಲ್ಲಿದ್ದ ಇನ್ನಿಬ್ನರಿಗೆ ಗಂಭಿರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರಕರಣ ಕಲಾದಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.