ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ನವಜಾತ ಶಿಶುವನ್ನು 4.5 ಲಕ್ಷ ರೂ.ಗೆ ಮಾರಿದ ತಾಯಿ!
ಜಾರ್ಖಂಡ್ ರಾಜ್ಯದ ಛಾತ್ರಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ನವಜಾತ ಶಿಶುವನ್ನು 4.5 ಲಕ್ಷ ರೂ.ಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ.
ಜಾರ್ಖಂಡ್ (ಮಾ.26): ಜಾರ್ಖಂಡ್ ರಾಜ್ಯದ ಛಾತ್ರಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ನವಜಾತ ಶಿಶುವನ್ನು 4.5 ಲಕ್ಷ ರೂ.ಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಪೊಲೀಸರು ಗುರುವಾರ 11 ಜನರನ್ನು ಬಂಧಿಸಿದ್ದಾರೆ. ನವಜಾತ ಶಿಶುವನ್ನು ಮಾರಾಟ ಮಾಡಿದ ಮಹಿಳೆಯನ್ನು ಆಶಾ ದೇವಿ ಎಂದು ಗುರುತಿಸಲಾಗಿದೆ. ಈಕೆ ಹುಟ್ಟಿದ ಕೂಡಲೇ ತನ್ನ ಗಂಡು ಮಗುವನ್ನು ಮಾರಾಟ ಮಾಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಾಯಿ ಸೇರಿದಂತೆ 11 ಜನರನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಛಾತ್ರಾದ ಉಪ ಆಯುಕ್ತ ಅಬು ಇಮ್ರಾನ್ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಅವಿನಾಶ್ ಕುಮಾರ್ ಪ್ರಕಾರ, ಪೊಲೀಸರು ಮಾಹಿತಿ ತಿಳಿದ ತಕ್ಷಣ ಕಾರ್ಯಾಚರಣೆ ಕೈಗೊಂಡು ಮಗುವನ್ನು ಮಾರಾಟ ಮಾಡಿದ 24 ಗಂಟೆಗಳ ಒಳಗೆ ಬೊಕಾರೊ ಜಿಲ್ಲೆಯಿಂದ ನವಜಾತ ಶಿಶುವನ್ನು ರಕ್ಷಿಸಿದ್ದಾರೆ.
ಗುರುವಾರ ಛಾತ್ರಾದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವಿನಾಶ್ ಕುಮಾರ್, ಮಗುವಿನ ತಾಯಿ ಆಶಾದೇವಿಯಿಂದ 1 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಶಾದೇವಿ ಬಂಧನದ ಬಳಿಕ ಆಕೆ ಡಿಂಪಲ್ ದೇವಿ ಎಂಬಾಕೆ ಪರಿಚಯವನ್ನು ಪೊಲೀಸರಿಗೆ ತಿಳಿಸಿದಳು. ಡಿಂಪಲ್ ದೇವಿ ಬಳಿಗೆ ಹೋದ ಪೊಲೀಸರು ಆಕೆ ನೀಡಿದ ಸುಳಿವಿನ ಆಧಾರದ ಮೇಲೆ ಇತರ ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಬೊಕಾರೊದಿಂದ ಮಗುವನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
Bengaluru: ತಪ್ಪಿದ ಕಾರು ದುರಂತ, ಎಣ್ಣೆ ಮತ್ತಿನಲ್ಲಿ ಅತಿವೇಗದ ಚಾಲನೆ, ಟಯರ್ ಬ್ಲಾಸ್ಟ್ ಆದ್ರೂ ರಿಮ್ ನಲ್ಲೆ ಚಾಲನೆ!
ಹಜಾರಿಬಾಗ್ ಜಿಲ್ಲೆಯ ಬಡ್ಕಗಾಂವ್ ಗ್ರಾಮದ ದಂಪತಿಗಳು ನವಜಾತ ಶಿಶುವಿಗೆ 4.5 ಲಕ್ಷ ರೂ.ಗೆ ಛಾತ್ರಾ ಮತ್ತು ಬೊಕಾರೊದ ಇಬ್ಬರು ದಲ್ಲಾಳಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳು ಮಾನಸಿಕ ಅಸ್ವಸ್ಥರೆಂದು ಖಿನ್ನತೆಗೆ ಒಳಗಾದ ಇಡೀ ಕುಟುಂಬವೇ ಆತ್ಮಹತ್ಯೆ!
ಮಗುವಿನ ತಾಯಿಗೆ 1 ಲಕ್ಷ ರೂ., ಉಳಿದ 3.5 ಲಕ್ಷ ರೂ.ಗಳನ್ನು ದಲ್ಲಾಳಿಗಳಿಗೆ ಹಂಚಿಕೆ ಮಾಡಲಾಗಿದೆ. ಸದರ್ ಆಸ್ಪತ್ರೆಯ ಉಪ ಅಧೀಕ್ಷಕ ವೈದ್ಯ ಮನೀಶ್ ಲಾಲ್ ಹೇಳಿಕೆ ಮೇರೆಗೆ ಛಾತ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ಮುಂದುವರೆದಿದೆ.