ಮಕ್ಕಳು ಮಾನಸಿಕ ಅಸ್ವಸ್ಥರೆಂದು ಖಿನ್ನತೆಗೆ ಒಳಗಾದ ಇಡೀ ಕುಟುಂಬವೇ ಆತ್ಮಹತ್ಯೆ!

ಹೈದರಾಬಾದ್ ನಲ್ಲಿ ಒಂದೇ ಕುಟುಂಬದ ನಾಲ್ವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಮಕ್ಕಳಿಬ್ಬರು ಮಾನಸಿಕವಾಗಿ ಅಸ್ವಸ್ಥರಾಗಿರುವ ಕಾರಣ ಪೋಷಕರು ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. 

4 of family consume poison, die by suicide in Hyderabad gow

ಹೈದರಾಬಾದ್ (ಮಾ.26): ಹೈದರಾಬಾದ್ ನಗರದ ಕುಶೈಗುಡ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.  ಇಬ್ಬರು ಮಕ್ಕಳು ಸೇರಿದಂತೆ ಮೃತರ ಶವಗಳನ್ನು ಹೈದರಾಬಾದ್ ನಗರದ ಕುಶೈಗುಡಾ ಪ್ರದೇಶದ ಅವರ ಅಪಾರ್ಟ್‌ಮೆಂಟ್‌ನಿಂದ  ಹೊರತೆಗೆಯಲಾಗಿದೆ ಎಂದು  ಪೊಲೀಸರು ಶನಿವಾರ ತಿಳಿಸಿದ್ದಾರೆ. ಮೃತರನ್ನು ಸತೀಶ್, ಅವರ ಪತ್ನಿ ವೇದಾ ಮತ್ತು ಅವರ ಇಬ್ಬರು ಮಕ್ಕಳಾದ 5 ವರ್ಷದ ನಿಹಾಲ್ ಮತ್ತು 9 ವರ್ಷದ ನಿಶಿಕೇತ್ ಎಂದು ಗುರುತಿಸಲಾಗಿದೆ. ಮಕ್ಕಳು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂಬ ಕಾರಣಕ್ಕೆ ಕುಟುಂಬವೇ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಎಂದು ತಿಳಿದುಬಂದಿದೆ.

ಬೆಂಗಳೂರಲ್ಲಿ ಮನೆಗೆ ಹೊಕ್ಕು ಮಗುವನ್ನು ಕದ್ದೊಯ್ದ ಕಳ್ಳಿ: 42 ದಿನದ ಹಸುಗೂಸು ನಾಪತ್ತೆ

ಈ ಘಟನೆ ಶುಕ್ರವಾರ ನಡೆದಿರುವ ಶಂಕೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ ದೂರು ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಂದಿಗುಡ ಪ್ರದೇಶದಲ್ಲಿ ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳು  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಇಬ್ಬರೂ ಮಕ್ಕಳು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ನೀಡಿದರೂ ಮಕ್ಕಳು ಗುಣಮುಖರಾಗಿರಲಿಲ್ಲ. ಇದರಿಂದಾಗಿ ಪೋಷಕರು ಖಿನ್ನತೆಗೆ ಜಾರಿದ್ದರು ಎಂದು ತಿಳಿದುಬಂದಿದೆ.

ಪಂಚರತ್ನ ರಥಯಾತ್ರೆಯ ಹಳಸಿದ ಅನ್ನ ತಿಂದು 15ಕ್ಕೂ ಹೆಚ್ಚು ಜಾನುವಾರು ಸಾವು!

ಕುಟುಂಬವು ಶುಕ್ರವಾರ ರಾತ್ರಿಯೇ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಶಂಕಿಸಲಾಗಿದೆ. ಶನಿವಾರ ಮಧ್ಯಾಹ್ನ 2 ಗಂಟೆಗೆ ನಮಗೆ ಮಾಹಿತಿ ಬಂದಿದೆ. ಮೃತರು ಸತೀಶ್, ವೇದಾ, ನಿಶಿಕೇತ್ ಮತ್ತು ನಿಹಾಲ್ ಎಂದು ಕುಶೈಗುಡ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ ವೆಂಕಟೇಶ್ವರಲು ತಿಳಿಸಿದ್ದಾರೆ. ಮೃತರ ದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.  ಇನ್ನೂ ವೈದ್ಯಕೀಯ ಪರೀಕ್ಷೆ ನಡೆಸಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.

Latest Videos
Follow Us:
Download App:
  • android
  • ios