Bengaluru: ತಪ್ಪಿದ ಕಾರು ದುರಂತ, ಎಣ್ಣೆ ಮತ್ತಿನಲ್ಲಿ ಅತಿವೇಗದ ಚಾಲನೆ, ಟಯರ್ ಬ್ಲಾಸ್ಟ್ ಆದ್ರೂ ರಿಮ್ ನಲ್ಲೆ ಚಾಲನೆ!
ಬೆಂಗಳೂರಿನ ಬಾಣಸವಾಡಿಯಲ್ಲಿ ತಡರಾತ್ರಿ ಭಾರೀ ದುರಂತವೊಂದು ತಪ್ಪಿದೆ. ಕುಡಿದ ಆಮಲಿನಲ್ಲಿದ್ದ ಯುವಕನೋರ್ವ ಅತಿವೇಗದ ಕಾರು ಚಾಲನೆ ಮಾಡಿ ಕಾರಿನ ವೇಗಕ್ಕೆ ಟಯರ್ ಬ್ಲಾಸ್ಟ್ ಅಗಿದೆ. ಆದರೂ ರಿಮ್ ನಲ್ಲೆ ಆತ ಗಾಡಿ ಚಲಾವಣೆ ಮಾಡಿದ್ದಾನೆ.
ಬೆಂಗಳೂರು (ಮಾ.25): ಬೆಂಗಳೂರಿನ ಬಾಣಸವಾಡಿಯಲ್ಲಿ ತಡರಾತ್ರಿ ಭಾರೀ ದುರಂತವೊಂದು ತಪ್ಪಿದೆ. ಕುಡಿದ ಆಮಲಿನಲ್ಲಿದ್ದ ಯುವಕನೋರ್ವ ಅತಿವೇಗದ ಕಾರು ಚಾಲನೆ ಮಾಡಿ ಕಾರಿನ ವೇಗಕ್ಕೆ ಟಯರ್ ಬ್ಲಾಸ್ಟ್ ಅಗಿದೆ. ಆದರೂ ರಿಮ್ ನಲ್ಲೆ ಆತ ಗಾಡಿ ಚಲಾವಣೆ ಮಾಡಿದ್ದಾನೆ. ಕುಡಿದ ಅಮಲಿನಲ್ಲಿ ಟೈಯರ್ ಬ್ಲಾಸ್ಟ್ ಆದ್ರೂ ಅತಿವೇಗದ ಚಾಲನೆ ಮಾಡಿದ್ದಾನೆ. ಆಘಾತವೇನೆಂದರೆ ಸ್ವಲ್ಪ ಯಾಮಾರಿದ್ರೂ ರಸ್ತೆಯುದ್ದಕ್ಕೂ ಸಾಲು ಸಾಲು ಹೆಣಗಳು ಉರುಳುತ್ತಿತ್ತು. ಅದೃಷ್ಟವಶಾತ್ ಆ ರೀತಿಯ ಯಾವುದೇ ದುರಂತ ಸಂಭವಿಸಿಲ್ಲ.
ಕುಡಿದ ಮತ್ತಿನಲ್ಲಿದ್ದ ಯುವಕ ಟೊಯೋಟೋ ಗ್ಲಾನ್ಜಾ ಕಾರಿನಲ್ಲಿ ಸುಮಾರು 100-120 ಕಿಲೋಮೀಟರ್ ವೇಗದಲ್ಲಿ ಇಂದಿರಾನಗರದಿಂದ ಕಮ್ಮನಹಳ್ಳಿ ಕಡೆಗೆ ಕಾರು ಚಾಲನೆ ಮಾಡಿದ್ದಾನೆ. ಕಾರಿನ ವೇಗ ನೋಡಿ ರಾತ್ರಿ ಪಾಳಿ ಪೊಲೀಸರು ಕಾರನ್ನ ಫಾಲೋ ಮಾಡಿದ್ದಾರೆ. ಬಾಣಸವಾಡಿ ಪೊಲೀಸರು ಸುಮಾರು 2ರಿಂದ 3 ಕಿ.ಮೀ ಕಾರನ್ನ ಪಾಲೋ ಮಾಡಿದ್ದಾರೆ. ಕೊನೆಗೆ ಕಾರಿನ ಆಕ್ಸೆಲ್ ಕಟ್ ಆಗಿದ್ದಕ್ಕೆ ಮುನಿಯಪ್ಪ ಸರ್ಕಲ್ ಬಳಿ ಕಾರು ನಿಂತಿದ್ದನ್ನು ಗಮನಿಸಿದ್ದಾರೆ. ತಕ್ಷಣವೇ ಯುವಕನನ್ನ ವಶಕ್ಕೆ ಪಡೆದಿದ್ದಾರೆ.
ಸೊಸೆ ಕೆಲಸಕ್ಕೆ ಹೋಗಬಾರದೆಂದು ಇಟ್ಟಿಗೆಯಿಂದ ಹಲ್ಲೆ ನಡೆಸಿದ
ಇದಾಗಿ ಸ್ಪಲ್ಪ ಹೊತ್ತಿನಲ್ಲಿ ಹೊಯ್ಸಳ ಕಾರಿನಲ್ಲಿ ಠಾಣೆಗೆ ಹೋದ ಯುವಕ ಐಷರಾಮಿ ಕಾರಿನಲ್ಲಿ ಮನೆಗೆ ತೆರಳಿದ್ದಾನೆ. ಹಾಗಾದ್ರೆ ಅ ಕಾರಿನಲ್ಲಿದ್ದ ಯುವಕ ಯಾರು? ಎಂದು ಪ್ರಶ್ನೆ ಎದ್ದಿತ್ತು. ಐಷಾರಾಮಿ ಕಾರಿನಲ್ಲಿ ಬಂದವರನ್ನ ನೋಡಿ ಪೊಲೀಸರು ಈತನನ್ನ ಬಿಟ್ಟು ಕಳುಹಿಸಿದ್ದೇಕೆ? ಎಂದು ತಡರಾತ್ರಿ ಪೊಲೀಸರ ನಡೆ ಬಗ್ಗೆ ಅನುಮಾನ ಮೂಡಿತ್ತು. ಬಹುಶ ಎಲ್ಲಾದ್ರೂ ಆಕ್ಸಿಡೆಂಟ್ ಮಾಡಿ ವೇಗವಾಗಿ ಬಂದಿರೋ ಸಾಧ್ಯತೆ ಬಗ್ಗೆ ಕೂಡ ಪ್ರಶ್ನೆ ಎದ್ದಿತ್ತು. ಪೊಲೀಸರು ಯಾವುದೇ ವಿಚಾರಣೆ ಮಾಡದೆ ಬಿಟ್ಟು ಕಳುಹಿಸಿರೋ ಕಾರಣ ಅನುಮಾನ ಮೂಡಿತ್ತು.
MURDER CASE: ಕೊಲೆಯ ಪ್ರಮುಖ ಆರೋಪಿ ನಾಪತ್ತೆ- ದೈವದ ಮೊರೆ ಹೋದ ಕುಟುಂಬಸ್ಥರು
ಕೊನೆಗೂ ಕೇಸ್ ದಾಖಲು:
ಕುಡಿದ ಅಮಲಿನಲ್ಲಿ ಅತಿವೇಗ ಕಾರು ಚಲಾಯಿಸಿ ಟೈಯರ್ ಬ್ಲಾಸ್ಟ್ ಆದ್ರೂ ರಿಮ್ ನಲ್ಲಿಯೇ ಕಾರ್ ಓಡಿಸಿದ್ದ ಯುವಕನ ವಿರುದ್ಧ ಈಗ ಪ್ರಕರಣ ದಾಖಲಾಗಿದೆ. ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕುಡಿದ ಅಮಲಿನಲ್ಲಿ ಹೈ ಸ್ಪೀಡ್ ಡ್ರೈವ್ ಮಾಡಿದ್ದ ಈತನನ್ನು ಪೊಲೀಸರು ಚೇಸ್ ಮಾಡಿ ಹಿಡಿದು ಬಳಿಕ ವಶಕ್ಕೆ ಪಡೆದು ಬಿಟ್ಟು ಕಳಿಸಿದ್ದರು. ಇದೀಗ ಚಾಲಕ ನವೀನ್ ಎಂಬಾತನ ವಿರುದ್ಧ ಬಾಣಸವಾಡಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಡ್ರಿಂಕ್ ಆ್ಯಂಡ್ ಡ್ರೈವ್, ರ್‍ಯಾಶ್ ಡ್ರೈವಿಂಗ್, ನೆಗ್ಲಿಜೆನ್ಸಿ ಡ್ರೈವ್ ಮಾಡಿದ ಆರೋಪದಡಿ ಕೇಸ್ ದಾಖಲು ಮಾಡಲಾಗಿದೆ.