ನವದೆಹಲಿ (ಡಿ.11): ದೇಶವನ್ನು ಬೆಚ್ಚಿ ಬೀಳಿಸಿದ ಹಾತ್ರಸ್‌ ಗ್ಯಾಂಗ್‌ ರೇಪ್‌ ಪ್ರಕರಣ ನೆನಪಿನಿಂದ ಮಾಸುವ ಮೊದಲೇ, ಜಾರ್ಖಂಡ್‌ನಲ್ಲಿ 5 ಮಕ್ಕಳ ತಾಯಿಯಾಗಿರುವ 35 ವರ್ಷದ ಮಹಿಳೆ ಮೇಲೆ 17 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಭೀಕರ ಘಟನೆ ನಡೆದಿದೆ.

ಜಾರ್ಖಂಡ್‌ನ ಡುಮ್ಕಾ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಈ ಅಮಾನವೀಯ ಕೃತ್ಯ ನಡೆದಿದೆ. ಐದು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ, ತನ್ನ ಪತಿ ಜತೆ ಮಾರುಕಟ್ಟೆಯಿಂದ ಹಿಂದಿರುತ್ತಿದ್ದ ವೇಳೆ, ದುಷ್ಕರ್ಮಿಗಳ ಗುಂಪೊಂದು ಇಬ್ಬರನ್ನೂ ಅಡ್ಡಗಟ್ಟಿದೆ. ಬಳಿಕ ಮಹಿಳೆಯ ಗಂಡನನ್ನು ಒತ್ತೆಯಾಗಿ ಇಟ್ಟುಕೊಂಡು, ಮಹಿಳೆ ಮೇಲೆ ದುರುಳರು ಸಾಮೂಹಿಕವಾಗಿ ಎರಗಿದ್ದಾರೆ. ಘಟನೆಯಲ್ಲಿ ಭಾಗಿಯಾಗಿದ್ದವರೆಲ್ಲಾ ಪಾನಮತ್ತರಾಗಿದ್ದರು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.

FIR ಇಲ್ಲ, ಮತಾಂತರ ಇಲ್ಲ.. ಆದರೂ ಲವ್ ಜಿಹಾದ್ ಕೇಸಲ್ಲಿ ಯುವಕನ ಬಂಧನ!

ಇದೇ ವೇಳೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣದ ಸಂಬಂಧ ವಿಸೃತ ಮಾಹಿತಿ ಕೇಳಿರುವ ಆಯೋಗ, ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಜಾರ್ಖಂಡ್‌ ಪೊಲೀಸರಿಗೆ ಆದೇಶಿಸಿದೆ.