Asianet Suvarna News Asianet Suvarna News

FIR ಇಲ್ಲ, ಮತಾಂತರ ಇಲ್ಲ.. ಆದರೂ ಲವ್ ಜಿಹಾದ್ ಕೇಸಲ್ಲಿ ಯುವಕನ  ಬಂಧನ!

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು/ ದೂರು ದಾಖಲಾಗದಿದ್ದರೂ ಮುಸ್ಲಿಂ ಯುವಕನ ವಶಕ್ಕೆ ಪಡೆದ ಪೊಲೀಸರು/ ಪ್ರೇಮಿಗಳು ಒಟ್ಟಾಗಿ ವಾಸಿಸುತ್ತಿದ್ದರು.

No FIR, no conversion, but Muslim man held for love jihad Uttrar Pradesh mah
Author
Bengaluru, First Published Dec 10, 2020, 7:56 PM IST
  • Facebook
  • Twitter
  • Whatsapp

ಮೀರತ್ (ಡಿ.  10) ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿ ಮಾಡಲಾಗಿದೆ. ಆದರೆ ಇಲ್ಲಿ ಯಾವುದೇ ದೂರು ದಾಖಲಾಗಿದ್ದರೂ ಯುವಕನ ಬಂಧನವಾಗಿದೆ.

27 ವರ್ಷದ ಮುಸ್ಲಿಂ ಯುವಕ  24  ವರ್ಷದ ಹಿಂದು ಯುವತಿ ನಡುವೆ ಪ್ರೇಮಾಂಕುರವಾಗಿದೆ.  ಮನೆಯಿಂದ ಹೊರಹೋದ ಅವರು ಲಿವಿಂಗ್  ಸಂಸಾರ ಶುರು ಮಾಡಿದ್ದಾರೆ. ಪಾಲಕರು ಇದಕ್ಕೆ ಬೆಂವಲ  ನೀಡದೆ ಇದ್ದರೂ ಯಾವ ದೂರು ದಾಖಲಿಸುವ ಕೆಲಸ ಮಾಡಿಲ್ಲ. ಆದರೆ ಇದೀಗ ಬಲಪಂಥೀಯ ಸಂಘಟನೆಗಳು ಇದನ್ನು ಲವ್ ಜಿಹಾದ್ ಎಂದು ಹೇಳುತ್ತ ಒತ್ತಾಯಪೂರ್ವಕವಾಗಿ ದೂರು ನೀಡಿಸಲು ಮುಂದಾಗಿವೆ.

ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆಗೆ ಬ್ರೇಕ್!

ಪೊಲೀಸರು ಮುಸ್ಲಿಂ ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನೊಂದು ಕಡೆ ಯುವತಿಯನ್ನು ಪಾಲಕರ ಬಳಿಗೆ ಕಳುಹಿಸಲಾಗಿದೆ.

ಮುಸ್ಲಿಂ ಯುವಕ ಈ ಪ್ರಕರಣದಲ್ಲಿ ತನ್ನ ಗುರುತನ್ನು ಮರೆಮಾಚಿರಲಿಲ್ಲ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆಯೋ..ಇಲ್ಲವೋ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ.

ಇಷ್ಟಪಟ್ಟವರೊಂದಿಗೆ  ಪ್ರಾಪ್ತ ವ್ಯಕ್ತಿ ಮದುವೆಯಾಗಬಹುದು, ವಾಸಮಾಡಬಹುದು ಎಂದು ಒಂದು ಕಡೆ ಅಲಹಾಬಾದ್ ಕೋರ್ಟ್  ಹೇಲೀದೆ. ಇನ್ನೊಂದು ಕಡೆ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿಯಲ್ಲಿದೆ.  ಒಟ್ಟಿನಲ್ಲಿ ನಾಗರಿಕರು, ಪ್ರೇಮಿಗಳು ಗೊಂದಲದ ಪರಿಸ್ಥಿತಿಯಲ್ಲಿ ಇದ್ದಾರೆ.

ಪೊಲೀಸರೆ ಮುಂದಾಗಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕುಟುಂಬದ ಕಡೆಯಿಂದಲೂ ದೂರು ದಾಖಲಾಗಿಲ್ಲ. 

 

Follow Us:
Download App:
  • android
  • ios