ಚಿಂತಾಮಣಿ: ಹೆಣ್ಣು ಎಂಬ ಕಾರಣಕ್ಕೆ ಹಸುಗೂಸಿಗೇ ನೇಣು ಬಿಗಿದು ಕೊಂದ ಪಾಪಿ ತಾಯಿ..!
* ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ನಡೆದ ಘಟನೆ
* ಮಗು ಕೊಂದ ಬಳಿಕ ತಾಯಿ ನಾಪತ್ತೆ
* ಆರೋಪಿ ತಾಯಿಯ ಪತ್ತೆಗೆ ಬಲೆ ಬೀಸಿದ ಪೊಲೀಸರು
ಚಿಕ್ಕಬಳ್ಳಾಪುರ(ಜು.03): ಹೆಣ್ಣು ಮಗು ಎಂಬ ಕಾರಣಕ್ಕೆ ತಾಯಿಯೇ ಹಸುಗೂಸಿಗೆ ನೇಣು ಬಿಗಿದು ಕೊಂದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದು(ಶನಿವಾರ) ನಡೆದಿದೆ.
ಹೆಣ್ಣು ಮಗು ಎಂಬ ಕಾರಣಕ್ಕೆ ಆಗತಾನೆ ಹುಟ್ಟಿದ ಹಸುಳೆಯನ್ನೇ ನೇಣು ಬಿಗಿದು ಕೊಂದಿದ್ದಾಳೆ ಮಹಾತಾಯಿ ಎಂದು ತಿಳಿದು ಬಂದಿದೆ. ಮಗು ಕೊಂದ ಮೇಲೆ ಆಸ್ಪತ್ರೆಯಿಂದ ತಾಯಿ ನಾಪತ್ತೆಯಾಗಿದ್ದಾಳೆ. ತಾಯಿ ಪತ್ತೆಗಾಗಿ ಆಸ್ಪತ್ರೆಯ ಸಿಬ್ಬಂದಿ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ: ಒಂಟಿ ಕಾಲಿನೊಂದಿಗೆ ಜನಿಸಿದ ಶಿಶು ಸಾವು
ಬೆಳ್ಳಂ ಬೆಳಗ್ಗೆ ಎಂದಿನಂತೆ ಶೌಚಾಲಯ ಸ್ವಚ್ಛತೆಗೆ ಬಂದ ಸಿಬ್ಬಂದಿಗೆ ಶೌಚಾಲಯದ ಕಿಟಕಿಗೆ ಟೈನ್ ದಾರದಲ್ಲಿ ಮಗುವಿನ ಕುತ್ತಿಗೆಗೆ ಕಟ್ಟಿ ಎಸೆದಿರುವುದು ಕಂಡು ಬಂದಿದೆ.
ಈ ಘಟನೆಯ ಕುರಿತು ವೈದ್ಯರಿಗೆ ಮಾಹಿತಿ ನೀಡಿದ ನಂತರ ಚಿಕಿತ್ಸೆ ನೀಡಲು ಮುಂದಾದರಾದರೂ, ಆ ವೇಳೆಯೊಳಗೆ ಮಗು ಮೃತಪಟ್ಟಿತ್ತು. ಈ ಕುರಿತು ಚಿಂತಾಮಣಿ ನಗರಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು ಆರೋಪಿ ತಾಯಿಯ ಪತ್ತೆಗೆ ಬಲೆ ಬೀಸಿದ್ದಾರೆ.